ಕೇವಲ ರೂ.20 ಕ್ಕೆ ವಾಟರ್ ಪ್ಯೂರಿಫೈಯರ್: ಬೆಳಗಾವಿ ಇಂಜಿನಿಯರಿಂಗ್ ವಿದ್ಯಾರ್ಥಿ ಆವಿಷ್ಕಾರ

ಬೆಳಗಾವಿಯ ಇಂಜಿನಿಯರಿಂಗ್ ವಿದ್ಯಾರ್ಥಿ ನಿರಂಜನ್ ಕರಗಿ ಕೈಗೆಟುಕುವ ದರದಲ್ಲಿ ಅಂದರೆ ಕೇವಲ ರೂ.20 ಕ್ಕೆ ಸಿಗುವ, ಪರಿಸರ ಸ್ನೇಹಿ, ವಾಟರ್ ಪ್ಯೂರಿಫೈರ್ ನ್ನು ಕಂಡು ಹಿಡಿದಿದ್ದಾರೆ.
ವಾಟರ್ ಪ್ಯೂರಿಫೈಯರ್
ವಾಟರ್ ಪ್ಯೂರಿಫೈಯರ್
ಬೆಳಗಾವಿ: ಕುಡಿಯುವ ನೀರನ್ನು ಶುದ್ಧಗೊಳಿಸುವ ಸಾಕಷ್ಟು ಯಂತ್ರಗಳು (ವಾಟರ್ ಪ್ಯೂರಿಫೈರ್) ಗಳು ತಯಾರಾಗಿವೆಯಾದರೂ ಗ್ರಾಮೀಣ ಪ್ರದೇಶವನ್ನು ಸಂಪೂರ್ಣವಾಗಿ ತಲುಪಿಲ್ಲ. ಪರಿಣಾಮ ಇಂದಿಗೂ ಅನೇಕ ಜನರು ಶುದ್ಧೀಕರಣಗೊಳ್ಳದ ನೀರನ್ನೇ ಸೇವಿಸುತ್ತಿದ್ದಾರೆ. 
ಆದರೆ ಬೆಳಗಾವಿಯ ಇಂಜಿನಿಯರಿಂಗ್ ವಿದ್ಯಾರ್ಥಿ ನಿರಂಜನ್ ಕರಗಿ ಕೈಗೆಟುಕುವ ದರದಲ್ಲಿ ಅಂದರೆ ಕೇವಲ ರೂ.20 ಕ್ಕೆ ಸಿಗುವ, ಪರಿಸರ ಸ್ನೇಹಿ, ವಾಟರ್ ಪ್ಯೂರಿಫೈರ್ ನ್ನು ಕಂಡು ಹಿಡಿದಿದ್ದಾರೆ. ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ನಿರಂಜನ್ ಗೆ ಈ ವಾಟರ್ ಪ್ಯೂರಿಫೈಯರ್ ನಿರ್ನಲ್ ನ್ನು ಕಂಡು ಹಿಡಿಯಲು ಸ್ಪೂರ್ತಿಯಾಗಿದ್ದು ಶಾಲಾ ಮಕ್ಕಳು! " ನಮ್ಮ ಮನೆಯ ಬಳಿ ಇರುವ ಆಟದ ಮೈದಾನದಲ್ಲಿ ಶಾಲಾ ಮಕ್ಕಳು ಪ್ರತಿ ದಿನವೂ ಆಡಲು ಬರುತ್ತಾರೆ", ಶಾಲಾ ಮಕ್ಕಳು ಹತ್ತಿರದಲ್ಲಿರುವ ಟ್ಯಾಂಕ್ ನಿಂದ ಕಲುಶಿತಗೊಂಡಿರುವ ನೀರು ಕುಡಿಯುವುದನ್ನು ಪ್ರತಿ ಬಾರಿಯೂ ಗಮನಿಸುತ್ತಿದ್ದೆ. ಇದೇ ನನಗೆ ಅಗ್ಗದ ದರದಲ್ಲಿ ವಾಟರ್ ಪ್ಯೂರಿಫೈಯರ್ ಕಂಡುಹಿಡಿಯಲು ಸ್ಪೂರ್ತಿಯಾಯಿತು" ಎನ್ನುತ್ತಾರೆ 22 ವರ್ಷದ ನಿರಂಜನ್ 
ಅಗ್ಗದ ದರದಲ್ಲಿ ನೀರನ್ನು ಶುದ್ಧೀಕರಿಸುವ ಬಗ್ಗೆ ಕೆಲವು ದಿನಗಳು ಕೆಲಸ ಮಾಡಿದ ನಂತರ, ಒಂದಷ್ಟು ನೀರನ್ನು ಶುದ್ಧೀಕರಿಸಿ ಅದನ್ನು ಬೆಂಗಳೂರಿನಲ್ಲಿರುವ ಮುಖ್ಯ ಆಹಾರ ವಿಭಾಗೀಯ ಕಚೇರಿಗೆ ಕಳಿಸಿದೆ. ಅಲ್ಲಿಂದ ಫಲಿತಾಂಶವೂ ಸಕಾರಾತ್ಮಕವಾಗಿ ಬಂದಿತ್ತು. ಈ ಯೋಜನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ ವಿದ್ಯಾರ್ಥಿ, ದೇಶಪಾಂಡೆ ಫೌಂಡೇಷನ್ ನ ಲೀಡರ್ಸ್ ಆಕ್ಸಿಲರೇಟಿಂಗ್ ಡೆವಲಪ್ ಮೆಂಟ್(ಎಲ್ ಇಎಡಿ) ಹಾಗೂ ಹುಬ್ಬಳ್ಳಿಯ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ನೊಂದಿಗೆ ಚರ್ಚಿಸಿದ್ದರು. ಎರಡೂ ಸಂಸ್ಥೆಗಳು ವಿದ್ಯಾರ್ಥಿ ನಿರಂಜನ್ ಕನಸಿಗೆ ಭಾಗಶಃ ಆರ್ಥಿಕ ನೆರವು ನೀಡಿದವು. 2016 ರ ಜುಲೈ ನಲ್ಲಿ ಬಿಡುಗಡೆಯಾದ ಅಗ್ಗದ ದರದ ವಾಟರ್ ಪ್ಯೂರಿಫೈಯರ್ ಈ ವರೆಗೂ 8000 ಯುನಿಟ್ ಗಳಷ್ಟು ಮಾರಾಟವಾಗಿದ್ದು, ಈ ಪೈಕಿ ಕೆಲವನ್ನು ಸೇನಾ ತರಬೇತಿಗಳಿಗೆಂದು ಬರುವ ಯೋಧರಿಗೂ ನೆರವಾಗಿದೆ. 
ಅಗ್ಗದ ದರದ ವಾಟರ್ ಪ್ಯೂರಿಫೈಯರ್ ಗಾಗಿ ಆಫ್ರಿಕಾ, ಕತಾರ್ ದೇಶಗಳಿಂದಲೂ ಬೇಡಿಕೆ ಬರಲು ಪ್ರಾರಂಭವಾಗಿದೆ. ಸಧ್ಯಕ್ಕೆ ಯಾವುದೇ ಅಳತೆಯ ಬಾಟಲ್ ಗಳಿಗೂ ಸರಿ ಹೊಂದುವಂತಹ ವಾಟರ್ ಪ್ಯೂರಿಫೈಯರ್ ಮಾದರಿಯ ತಯಾರಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿ ನಿರಂಜನ್, ಕರ್ನಾಟಕ ರಾಜ್ಯ ಸರ್ಕಾರದೊಂದಿಗಿನ ಸಹಯೋಗದಲ್ಲಿ ರಾಜ್ಯಾದ್ಯಂತ ಇರುವ ಮಕ್ಕಳಿಗೆ ಈ ವಾಟರ್ ಪ್ಯೂರಿಫೈಯರ್ ನ್ನು ತಲುಪಿಸುವ ಉದ್ದೇಶ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com