ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದವರ ವಿರುದ್ಧ ಕೇಸು ದಾಖಲಿಸಿ: ತಾಳ್ಮೆ ಕಳೆದುಕೊಂಡ ಸಿಎಂ

ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಮತ್ತೆ ಸಂರಕ್ಷಿತ ಅರಣ್ಯದ ಸ್ಥಾನಮಾನ ನೀಡುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ವನ್ಯ ಜೀವಿ ...
ಕಪ್ಪತಗುಡ್ಡ ಅರಣ್ಯ
ಕಪ್ಪತಗುಡ್ಡ ಅರಣ್ಯ

ಬೆಂಗಳೂರು: ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಮತ್ತೆ ಸಂರಕ್ಷಿತ ಅರಣ್ಯದ ಸ್ಥಾನಮಾನ ನೀಡುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ವನ್ಯ ಜೀವಿ ಮಂಡಳಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ನೀಡಿದೆ.

ಸೋಮವಾರ ರಾಜ್ಯ ವನ್ಯ ಜೀವಿ ಮಂಡಳಿ ಸಭೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಪ್ಪತಗುಡ್ಡವನ್ನು ಅನಗತ್ಯವಿವಾದ ಮಾಡಿ, ನಮ್ಮ ಸರ್ಕಾರದ ವಿರುದ್ಧ ಪ್ರಯೋಗಿಸಲಾಗುತ್ತಿದೆ ಎಂದು  ಅತೃಪ್ತಿ ವ್ಯಕ್ತಪಡಿಸಿದರು.

ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ 2008ರಲ್ಲಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಯಾವ ಆಧಾರದಲ್ಲಿ ಪರವಾನಗಿ ನೀಡಲಾಯಿತು? ಇದರ ಹಿಂದಿರುವ ಅಧಿಕಾರಿಗಳು ಯಾರು, ಕಪ್ಪತಗುಡ್ಡ ಪ್ರದೇಶದಲ್ಲಿ  ಗಣಿಗಾರಿಕೆ ನಡೆಸಬಹುದು ಎಂದು ಶಿಫಾರಸು ಮಾಡಿದವರು ಯಾರು ಎನ್ನುವ ಮಾಹಿತಿಯನ್ನು ಈಗಲೇ ನೀಡಬೇಕು, ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆದೇಶಿಸಿದ್ದಾರೆ.  

ರಾಜ್ಯ ಸರ್ಕಾರದ 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 36 ಎ ಪ್ರಕಾರ ಡಿಸೆಂಬರ್ 19 2015 ರಲ್ಲಿ ಕಪ್ಪತ ಗುಡ್ಡಕ್ಕೆ ಸಂರಕ್ಷಣಾ ಅರಣ್ಯ ಪ್ರದೇಶ ಎಂಬ ಸ್ಥಾನಮಾನ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com