ತೀರದ ಮೇವಿನ ಬವಣೆ: ಧಾರವಾಡದಲ್ಲಿ ಕಸಾಯಿಖಾನೆಗೆ ಜಾನುವಾರುಗಳ ಮಾರಾಟ

ಸಿಗೆಯ ಉರಿಬಿಸಿಲಿಗೆ ತತ್ತರಿಸಿರುವ ಉತ್ತರ ಕರ್ನಾಟಕದ ಜನ ತಮ್ಮ ಜಾನುವಾರುಗಳಿಗೆ ಮೇವು ಸಿಗದ ಕಾರಣ ಬಲವಂತವಾಗಿ ಕಸಾಯಿಖಾನೆಗೆ ಮಾರಾಟ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವಲಗುಂದ: ಬೇಸಿಗೆಯ ಉರಿಬಿಸಿಲಿಗೆ ತತ್ತರಿಸಿರುವ ಉತ್ತರ ಕರ್ನಾಟಕದ ಜನ ತಮ್ಮ ಜಾನುವಾರುಗಳಿಗೆ ಮೇವು ಸಿಗದ ಕಾರಣ ಬಲವಂತವಾಗಿ ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ.

ತಾವು ಸಾಕಿರುವ ಹಸುಗಳಿಗೆ ಮೇವನ್ನು ನೀಡಲು ಸಾಧ್ಯವಾಗುತ್ತಿಲ್ಲವಾದ ಕಾರಣದಿಂದಾಗಿ ಜಾನುವಾರುಗಳನ್ನು ಮಧ್ಯವರ್ತಿಗಳಿಗೆ ಹಾಗೂ ಕಸಾಯಿ ಖಾನೆಗೆ ನೀಡುತ್ತಿದ್ದಾರೆ.

ಫೆಬ್ರವರಿ ತಿಂಗಳ ಅಂತ್ಯದೊಳಗೆ ಮೇವಿನ ಕೊರತೆ ಉಂಟಾಗಿರುವ ಕಾರಣ ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲಿ ಇಡೀ ರಾಜ್ಯಾದ್ಯಂತ ಇಂಥಹುದೇ ಪರಿಸ್ಥಿತಿ ನಿರ್ಮಾಣವಾಗಿದೆ.

ನವಲಗುಂದ ತಾಲೂಕಿನ ಶಿರೂರು ಮತ್ತು ಹ್ಯಾಟ್ಟಿ ಗ್ರಾಮಗಳಲ್ಲಿ ಕಳೆದ 15 ದಿನಗಳಲ್ಲೇ ಸುಮಾರು 500 ಹಸುಗಳನ್ನು ಮಾರಾಟ ಮಾಡಿದ್ದಾರೆ. 1 ಲಕ್ಷ ಬೆಲೆಬಾಳುವ ಎತ್ತುಗಳನ್ನು ಕೇವಲ 30 ಸಾವಿರ ರು. ಗೆ ಮಾರಾಟ ಮಾಡಿದ್ದಾರೆ.

ಹುಬ್ಬಳ್ಳಿಯಿಂದ 35 ಕಿಮೀ ದೂರದಲ್ಲಿರುವ ಈ ಎರಡು ಗ್ರಾಮಗಳು ಕಳೆದ ಎರಡು ವರ್ಷಗಳಿಂದ ಬರದಿಂದ ತತ್ತರಿಸಿವೆ. ಈ ವರ್ಷ ಕಡಿಮೆ ಮಳೆಯಿಂದಾಗಿ ಭೂಮಿಯೆಲ್ಲಾ ಒಣಗಿ ಬರಿದಾಗಿದೆ. ಸರ್ಕಾರ ನಡೆಸುವ ಮೇವು ಬ್ಯಾಂಕ್ ಹಸುಗಳಿಗೆ ಆಹಾರ ಒದಗಿಸಲು ವಿಫಲವಾಗಿವೆ.

ಜಾನುವಾರುಗಳನ್ನು ಸಾಕುವುದು ತೀರಾ ಕಷ್ಟವಾಗಿದೆ. ಸರ್ಕಾರದ ಮೇವು ಬ್ಯಾಂಕ್ ಗ್ರಾಮದಿಂದ 40 ಕಿಮೀ ದೂರದಲ್ಲಿದ್ದು, ನೀರು ಸಹ ಸಿಗುತ್ತಿಲ್ಲ.  ಆಹಾರ ಮತ್ತು ನೀರು ಇಲ್ಲದೇ ಜಾನುವಾರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಮಲ್ಲಿಕಾರ್ಜುನ ಗೌಡ ಎಂಬ ರೈತ ಅಭಿಪ್ರಾಯ ಪಟ್ಟಿದ್ದಾರೆ.

ಈ ಕಾರಣದಿಂದಾಗಿ ಮೊದಲಿಗೆ ಕಲವು ಮಂದಿ ಜಾನುವಾರುಗಳನ್ನು ಮಾರಾಟ ಮಾಡಿದರು, ಉಳಿದವರು ಕೂಡ ಅದನ್ನೇ ಫಾಲೋ ಮಾಡಿದ್ದಾರೆ. ಮತ್ತೆ ಕೆಲವು ಜನ ಸರ್ಕಾರ ಜಾನುವಾರುಗಳಿಗಾಗಿ ಏನಾದರೂ ಸಹಾಯ ಮಾಡಬಹುದೆಂಬ ನಂಬಿಕೆಯಲ್ಲಿ ಜಾನುವಾರುಗಳನ್ನು ಉಳಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com