ಅನಗತ್ಯವಾಗಿ ಗರ್ಭಕೋಶ ಶಸ್ತ್ರ ಚಿಕಿತ್ಸೆ: ದೋಷಪೂರಿತ ತನಿಖೆ ಮತ್ತು ಕೊನೆಗಾಣದ ದುಃಖದ ಕಥೆ

ರಾಣೆ ಬೆನ್ನೂರಿನಲ್ಲಿ ಜನರಲ್ ಸರ್ಜನ್ ಆಗಿರುವ ಡಾ. ಶಾಂತ ಪಂದನ್ನಾರ್ ಕಳೆದ ಆರು ವರ್ಷಗಳಲ್ಲಿ 1,520 ಮಹಿಳೆಯರ ಗರ್ಭಕೋಶಗಳನ್ನು ತೆಗೆದು ...
ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆ
ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆ

ರಾಣೆ ಬೆನ್ನೂರು: ರಾಣೆ ಬೆನ್ನೂರಿನಲ್ಲಿ  ಜನರಲ್ ಸರ್ಜನ್ ಆಗಿರುವ ಡಾ. ಶಾಂತ ಪಂದನ್ನಾರ್  ಕಳೆದ ಆರು ವರ್ಷಗಳಲ್ಲಿ 1,520 ಮಹಿಳೆಯರ ಗರ್ಭಕೋಶಗಳನ್ನು ತೆಗೆದು ಹಾಕಿದ್ದಾರೆ. ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿರುವುದು ಅವರ ವಿರುದ್ಧದ ಪ್ರಮುಖ ಆರೋಪ.

ಆದರೆ ಡಾ ಪಂದನ್ನಾರ್  ಅಮಾನತು ವಿಷಯವನ್ನು ರಾಜ್ಯ ಆರೋಗ್ಯ ಸಚಿವ ಕೆ.ಆರ್ ರಮೇಶ್ ಕುಮಾರ್ ವಿಧಾನ ಸಭೆಯಲ್ಲಿ ಖಚಿತ ಪಡಿಸದಿರುವುದು ಆಶ್ಚರ್ಯ ಮೂಡಿಸಿದೆ, ಸದ್ಯ ಡಾ. ಪಂದನ್ನಾರ್ ಅಮಾನತಿನಲ್ಲಿದ್ದು, ಅವರ ಮೆಡಿಕಲ್ ಲೈಸೆನ್ಸ್  ರದ್ದುದೊಳ್ಳುವುದು ಸಾಧ್ಯವಿಲ್ಲ,

ರಾಣೆಬೆನ್ನೂರಿನ ಗ್ರಾಮಗಳ ಹಲವು ಮಹಿಳೆಯರಿಗೆ ನಡೆಸಿರುವ ಹಿಸ್ಟೆರೆಕ್ಟಮಿಗಳು ಮತ್ತು ಅದನ ನಂತರದ ಪರಿಣಾಮ ಹಾಗೂ ನೋವುಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಹಿತಿ ಕಲೆ ಹಾಕಿದೆ.

ಕಾಕೋಳ ತಾಂಡದ ಚೆನ್ನಮ್ಮ ಎಂಬ 33 ವರ್ಷದ ಮಹಿಳೆ ತನ್ನ ಅನುಭವ ಹೇಳುವುದು ಹೀಗೆ. ಚನ್ನಮ್ಮ 28 ವರ್ಷದವರಾಗಿದ್ದಾಗ ಹೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ತೆರಳಿದ್ದರು, ಅಲ್ಲಿ ಡಾ. ಪಂದನ್ನಾರ್ ಅವರಿಗೆ ತಮ್ಮ ಸಮಸ್ಯೆ ಬಗ್ಗೆ ತಿಳಿಸಿದರು. ಆಕೆಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ವೈದ್ಯರು ತಿಳಿಸಿದರು, ನಂತರ ವರದಿ ನೋಡಿದ ವೈದ್ಯರು  ಗರ್ಭಕೋಶ ತೆಗೆಸಿಕೊಳ್ಳದಿದ್ದರೇ ನಾನು ಸಾಯುವುದಾಗಿ ಹೇಳಿದರು. ಮಧ್ಯಾಹ್ನ 3 ಗಂಟೆ ವೇಳೆಗೆ ಆಪರೇಷನ್ ಟೇಬಲ್ ಮೇಲೆ ನನ್ನನ್ನು ಮಲಗಿಸಲಾಯಿತು ಎಂದು ಚೆನ್ನಮ್ಮ ನಡೆದ ಘಟನೆಯನ್ನು ನೆನಪಿಸಿಕೊಂಡರು. ಹೆಚ್ಚಿನ ಮಹಿಳೆಯರಿಗೆ ಇದೇ ರೀತಿಯ ತಂತ್ರ ಬಳಸಿ ಹಿಸ್ಟೆರೆಕ್ಟಮಿ ಮಾಡಲಾಗಿದೆ ಎಂದು ಆಕೆ ಹೇಳಿದ್ದಾರೆ.

ಕಳೆದ ಜೂನ್ ನಲ್ಲಿ ಹಾವೇರಿಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಯನ್ನೊಳಗೊಂಡ ಆರು ಮಂದಿಯ ತಂಡ 20 ಮಹಿಳೆಯರ ಜೊತೆ ಮಾತನಾಡಿತು. ಒಬ್ಬ ಮಹಿಳೆ ಕೂಡ ಇದರ ಬಗ್ಗೆ ಮಾತನಾಡಲಿಲ್ಲ. ವರದಿಯಲ್ಲಿ ಮಹಿಳೆಯರು ಸತ್ಯಾಂಶದ ಬಗ್ಗೆ ಹೇಳಿರಲಿಲ್ಲ.

ಆರು ತಿಂಗಳ ನಂತರ ಜನವರಿ 26 ರಂದು ಹಾವೇರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಹೇಶ್ ಬಡ್ಡಿ ಅವರಿಂದ ಈ ಸಂಬಂಧ ಎಫ್ ಐ ಆರ್ ದಾಖಲಾಯಿತು. ಇಲ್ಲಿಯೂ ಕೂಡ ದೂರಿನ ಸಂಬಂಧ ಅಂದರೇ ಅನಗತ್ಯ ಹಿಸ್ಟೆರೆಕ್ಟಮಿ ಬಗ್ಗೆ ಪೊಲೀಸ್ ತನಿಖೆ ನಡೆಯಬೇಕೆಂದು ಹೇಳಲಿಲ್ಲ. ಅಥವಾ ವೈದ್ಯಕೀಯ ನಿರ್ಲಕ್ಷ್ಯ ಆರೋಪದ ಬಗ್ಗೆಯೂ  ದೂರಿನಲ್ಲಿ ದಾಖಲಾಗಿರಲಿಲ್ಲ.

ಹಿಸ್ಟೆರೆಕ್ಟಮಿಗಳ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ. ಹಲವು ಸಂತ್ರಸ್ತರಿಂದ ಅರ್ಜಿಗಳು ಬಂದಿವೆ, ಮುಂದಿನ ದಿನಗಳಲ್ಲಿ ಅನಗತ್ಯ ಹಿಸ್ಟೆರೆಕ್ಟಮಿಗಳ ಬಗ್ಗೆ ಆರೋಪ ಸಂಬಂಧ ಸಮನ್ಸ್ ನೀಡಲಾಗುವುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ರಾಣೆ ಬೆನ್ನೂರು ಡಿವೈಎಸ್ ಪಿ ಎ.ಎಸ್ ಭೂಮರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com