ಜಲಮಂಡಳಿಗೆ ಬಾಕಿ ಬರಬೇಕಿದೆ 23 ಕೋಟಿ ರೂ., ಸರ್ಕಾರಿ ಇಲಾಖೆಗಳೇ ಕಟ್ಟಬೇಕು ಹೆಚ್ಚು ಮೊತ್ತ!

ಬೆಂಗಳೂರು ಜಲಮಂಡಳಿಗೆ 23 ಕೋಟಿ ರೂಪಾಯಿ ಬಿಲ್ ಬಾಕಿ ಬರಬೇಕಿದ್ದು, ಸರ್ಕಾರಿ ಇಲಾಖೆಗಳು ಹಾಗೂ ವಾಣಿಜ್ಯ ಸಂಸ್ಥೆಗಳೇ ಅತ್ಯಂತ ಹೆಚ್ಚು ಮೊತ್ತ ಪಾವತಿ ಮಾಡಬೇಕಿದೆ.
ಬಿಡಬ್ಲ್ಯೂಎಸ್ಎಸ್ ಬಿ
ಬಿಡಬ್ಲ್ಯೂಎಸ್ಎಸ್ ಬಿ
ಬೆಂಗಳೂರು: ಬೆಂಗಳೂರು ಜಲಮಂಡಳಿಗೆ 23 ಕೋಟಿ ರೂಪಾಯಿ ಬಿಲ್ ಬಾಕಿ ಬರಬೇಕಿದ್ದು, ಸರ್ಕಾರಿ ಇಲಾಖೆಗಳು ಹಾಗೂ ವಾಣಿಜ್ಯ ಸಂಸ್ಥೆಗಳೇ ಅತ್ಯಂತ ಹೆಚ್ಚು ಮೊತ್ತ ಪಾವತಿ ಮಾಡಬೇಕಿದೆ. 
ಬಿಡಬ್ಲ್ಯೂಎಸ್ಎಸ್ ಬಿ ಯ ತಿಂಗಳ ಆದಾಯಕ್ಕಿಂತಲೂ ಹೆಚ್ಚು ಅಂದರೆ ಒಟ್ಟು 129 ಕೋಟಿ ಬಾಕಿ ಬರಬೇಕಿದೆ. ಈ ಪೈಕಿ ವಾಣಿಜ್ಯ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳೇ ಅತ್ಯಂತ ಹೆಚ್ಚು ಬಾಕಿಯನ್ನು ಪಾವತಿ ಮಾಡಬೇಕಿದೆ. ಬಾಕಿ ಇರುವ ಹಣವನ್ನು ಪಾವತಿ ಮಾಡಲು ಕಾರ್ಯಕಾರಿ ಇಂಜಿನಿಯರ್ ಗಳು 6 ತಿಂಗಳ ಕಾಲಾವಕಾಶ ನೀಡಿದ್ದರು. ವಾಣಿಜ್ಯ ಸಂಸ್ಥೆಗಳು 54.91 ಕೋಟಿ ರೂಪಾಯಿ ಬಾಕಿ ನೀಡಬೇಕಿದ್ದರೆ, ಸರ್ಕಾರಿ ಇಲಾಖೆಗಳು 23 ಕೋಟಿ, ಬಿಬಿಎಂಪಿ 13.3 ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. 
ಪ್ರತಿಯೊಬ್ಬ ಕಾರ್ಯಕಾರಿ ಇಂಜಿನಿಯರ್ ಗೂ ಪ್ರತಿ ತಿಂಗಳು 50 ಲಕ್ಷ ರೂಪಾಯಿ ಮೊತ್ತದ ಆದಾಯವನ್ನು ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ. ಹಣ ಬಾಕಿ ಪಾವತಿ ಮಾಡಬೇಕಿರುವವರಿಗೆ ಈಗಾಗಲೇ ನೊಟೀಸ್ ಜಾರಿ ಮಾಡಲಾಗಿದ್ದು ಮುಂದಿನ ಆರ್ಥಿಕ ವರ್ಷದ ಒಳಗೆ 6 ತಿಂಗಳ ಕಂತಿನಲ್ಲಿ ಪಾವತಿ ಮಾಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com