4 ಮಂದಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದ ನಾಲ್ಕೂವರೆ ವರ್ಷದ ಬಾಲಕ

ಸಾವಿನಂಚಿನಲ್ಲಿರುವ ನಾಲ್ಕೂವರೆ ವರ್ಷದ ಬಾಲಕ ನಾಲ್ಕು ಮಂದಿಗೆ ಅಂಗಾಂಗ ದಾನ ಮಾಡಿ ನಾಲ್ವರ ಪ್ರಾಣ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾವಿನಂಚಿನಲ್ಲಿರುವ ನಾಲ್ಕೂವರೆ ವರ್ಷದ ಬಾಲಕ ನಾಲ್ಕು ಮಂದಿಗೆ ಅಂಗಾಂಗ ದಾನ ಮಾಡಿ ನಾಲ್ವರ ಪ್ರಾಣ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಮಿದುಳು ನಿಷ್ಕ್ರಿಯಗೊಂಡಿದ್ದ ಜಗತ್‌ ಎಚ್.ಎನ್ ಗೌಡ ಎಂಬ ನಾಲ್ಕೂವರೆ ವರ್ಷದ ಬಾಲಕನ ಜೀವಂತ ಹೃದಯವನ್ನು ಮಂಗಳವಾರ ಕೆಂಗೇರಿ– ಉತ್ತರಹಳ್ಳಿ ಸಮೀಪದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಯಶಸ್ವಿಯಾಗಿ ಸಾಗಿಸಲಾಯಿತು.

ಮಂಡ್ಯ ಮೂಲದ ಜಗತ್ ಕಳೆದ ಒಂದು ವರ್ಷದಿಂದ ಕೊಯಂಬತ್ತೂರಿನ ಶಾಲೆಯಲ್ಲಿ ಓದುತ್ತಿದ್ದ. ತಮ್ಮ ತಂದೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೊಯಂಬತ್ತೂರು ಶಾಲೆಯಲ್ಲಿ ಶಾಲೆಗೆ ಸೇರಿದ್ದ.

ಇತ್ತೀಚೆಗೆ ಕ್ರಿಸ್ ಮಸ್ ಗಾಗಿ ಬೆಂಗಳೂರಿನ ತಮ್ಮ ಸಂಬಂಧಿಕರ ಜಗತ್ ಬಂದಿದ್ದ. ಮರಿಯಪ್ಪನಪಾಳ್ಯದಲ್ಲಿರುವ ಸಂಬಂಧಿಕರ ಮನೆಯ ಎರಡನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರತರ ಗಾಯಗಳಾಗಿದ್ದವು,

ಕೂಡಲೇ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಉತ್ತರ ಹಳ್ಳಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. 10 ದಿನಗಳ ನಂತರ ಜಗತ್ ಗೆ ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದರು.

ಜಗತ್ ನ ಎರಡು ಕಿಡ್ನಿಗಳನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿಯೇ ವ್ಯಕ್ತಿಯೊಬ್ಬನಿಗೆ ಕಸಿ ಮಾಡಲಾಯಿತು. ಜಗತ್‌ನ ಯಕೃತ್‌ (ಲಿವರ್‌) ಅನ್ನು ನಾರಾಯಣ ಹೃದಯಾಲಯ ಹಾಗೂ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗಿದೆ.

ಹೃದಯವನ್ನು ಸಾಗಿಸಲು ಕೆಂಗೇರಿಯಿಂದ ವಿಮಾನ ನಿಲ್ದಾಣದವರೆಗೆ ‘ಗ್ರೀನ್‌ ಕಾರಿಡಾರ್‌’  (ಸಿಗ್ನಲ್‌ಮುಕ್ತ ಸಂಚಾರ ವ್ಯವಸ್ಥೆ) ನಿರ್ಮಿಸಲಾಗಿತ್ತು. ಇದರಿಂದ ಸುಮಾರು 48.8 ಕಿ.ಮೀ.ರಸ್ತೆ ಮಾರ್ಗವನ್ನು 44 ನಿಮಿಷಗಳಲ್ಲಿ ಕ್ರಮಿಸಲು ಸಾಧ್ಯವಾಯಿತು.
 
ಸಂಚಾರ ಪೊಲೀಸರು ನಿಯಂತ್ರಣ ಕೊಠಡಿಯಿಂದಲೇ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಆಂಬುಲೆನ್ಸ್‌ನ ಸಂಚಾರ ವೀಕ್ಷಿಸುತ್ತಾ ಸೂಚನೆಗಳನ್ನು ನೀಡಿದರು.ಬೆಳಿಗ್ಗೆ 9ಕ್ಕೆ ಬಿಜಿಎಸ್‌ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್‌ ಕೆಂಗೇರಿ– ಮೈಸೂರು ರಸ್ತೆ– ಹೆಬ್ಬಾಳ ಜಂಕ್ಷನ್‌– ಬಳ್ಳಾರಿ ರಸ್ತೆಯ ಮಾರ್ಗವಾಗಿ 10.30ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು’ ಎಂದು ಬಿಜಿಎಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದರು.

ಮಂಡ್ಯ ಮೂಲದ ನಿತ್ಯಾನಂದ ಅವರ ಪುತ್ರ ಜಗತ್‌. ನಿತ್ಯಾನಂದ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿದ್ದರು.ಅವರ ತಾಯಿ ರೂಪಾ ಹೌಸ್ ವೈಫ್ ಆಗಿದ್ದಾರೆ. ಮಂಗಳವಾರ ಬೆಳಿಗ್ಗೆ ಆತನ ಮಿದುಳು ನಿಷ್ಕ್ರಿಯಗೊಂಡಿತ್ತು. ಆತನ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com