ವಕೀಲ ಅಮಿತ್ ಶೂಟೌಟ್ ಪ್ರಕರಣ: ಕೊಲೆಗೆ ಹೊರಗಿನವರ ಸಹಾಯ ಪಡೆದಿದ್ದ ರಾಜೇಶ್ ?

ಅಮಿತ್ ಕೇಶವಮೂರ್ತಿ ಶೂಟೌಟ್ ಪ್ರಕರಣ ಸಂಬಂಧ ಸೊಲದೇವನಹಳ್ಳಿ ಪೊಲೀಸರು ಆರೋಪಿ ರಾಜೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ...
ರಾಜೇಶ್ ಮತ್ತು ಅಮಿತ್
ರಾಜೇಶ್ ಮತ್ತು ಅಮಿತ್

ಬೆಂಗಳೂರು:  ವಕೀಲ ಅಮಿತ್ ಕೇಶವಮೂರ್ತಿ ಶೂಟೌಟ್ ಪ್ರಕರಣ ಸಂಬಂಧ ಸೊಲದೇವನಹಳ್ಳಿ ಪೊಲೀಸರು ಆರೋಪಿ ರಾಜೇಶ್ ನನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದು, ಆರೋಪಿಗಳಾದ ರಾಜೇಶ್ ಮತ್ತು ಆವರ ತಂದೆ ಗೋಪಾಲಕೃಷ್ಣ ಅವರ ಹೇಳಿಕೆಗಳನ್ನು ವಿಡಿಯೋ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಅಮಿತ್ ದೇಸಾಯಿ ಚಲನವಲನಗಳ ಬಗ್ಗೆ ಆರೋಪಿ ರಾಜೇಶನಿಗೆ ಯಾರೋ ಮಾಹಿತಿ ನೀಡುತ್ತಿದ್ದರು, ಆತನ ಎಲ್ಲಾ ಮಾಹಿತಿಗಳನ್ನು ರಾಜೇಶನಿಗೆ ತಲುಪಿಸುತ್ತಿದ್ದರು, ಕೊಲೆ ಮಾಡಲು ರಾಜೇಶನಿಗೆ ಯಾರೋ ಕುಮ್ಮಕ್ಕು ನೀಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಶೃತಿ ಅಮಿತ್ ಭೇಟಿ ಮಾಡಿದ್ದಕ್ಕೆ ಕೋಪಗೊಂಡಿದ್ದ ರಾಜೇಶ್ ತನ್ನ ಲೈಸೆನ್ಸ್ ರಿವಾಲ್ವರ್ ನಿಂದ ಗುಂಡಿಟ್ಟು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ರಾಜೇಶ್ ನನ್ನು ನ್ಯಾಯಾಂಗ ವಶಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಶೃತಿಗೌಡ ಗೆ ಬೇರೊಬ್ಬ ಪಿಡಿಓ ಜೊತೆ ಸಂಬಂಧ ಇತ್ತು, ಹೀಗಾಗೀ ಕಾನೂನು ಸಲಹೆ ಪಡೆಯಲು ಅಮಿತ್ ಸಹಾಯ ಕೋರಿದ್ದಳು. ಆದರೆ ರಾಜೇಶ್ ಅಮಿತ್ ನನ್ನು ಪಿಡಿಓ ಎಂದು ತಪ್ಪಾಗಿ ಗ್ರಹಿಸಿ ಅಮಿತ್ ನನ್ನು ಕೊಲೆ ಮಾಡಿದ್ದಾನೆ ಎಂದು ಅಮಿತ್ ಸಂಬಂಧಿಯೊಬ್ಬರು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ನಿರಾಕರಿಸಿರುವ ಪೊಲೀಸರು ರಾಜೇಶ್ ಗೆ ತಾನು ಕೊಲೆ ಮಾಡುವ ಉದ್ದೇಶ ಏನು ಎಂಬುದು ಸ್ಪಷ್ಟವಾಗಿ ತಿಳಿದಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com