ಕೃಷ್ಣಾ ಮೇಲ್ದಂಡೆ ಯೋಜನೆ: ರೈತರಿಗೆ ಹಿಂದಿಗಿಂತ 6 ಪಟ್ಟು ಹೆಚ್ಚು ಪರಿಹಾರ: ಎಂ.ಬಿ. ಪಾಟೀಲ್

3 ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಲವು ವಿವರಗಳನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ...
ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್

ಬೆಂಗಳೂರು: 3 ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಲವು ವಿವರಗಳನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

1. ಕೃಷ್ಣಾ ಮೇಲ್ದಂಡೆ ಯೋಜನೆಯ ಒಟ್ಟು ಅಂದಾಜು ವೆಚ್ಚ ಎಷ್ಟು?

ಕೃಷ್ಣ ಮೇಲ್ದಂಡೆ ಯೋಜನೆಯ ಒಟ್ಟು ಅಂದಾಜು ವೆಚ್ಚ 50,500 ಕೋಟಿ ರುಪಾಯಿಗಳು, ಆದರೆ ಈ ಯೋಜನೆಗೆ 2012 ರಿಂದ 17, 207 ಕೋಟಿ ರು ಹಣವನ್ನು ಬಿಡುಗಡೆ ಮಾಡಲಾಗಿದೆ,  ಒಂದೇ ಬಾರಿಗೆ 50, 500 ಕೋಟಿ ರು ಹಣ ಬೇಕಾಗಿಲ್ಲ. ಹಂತಹಂತವಾಗಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕಿದೆ. ಹೀಗಾಗಿ ರಾಜ್ಯ ಸರ್ಕಾರ ಈ ವರ್ಷ 1,750 ಕೋಟಿ ಮಂಜೂರು ಮಾಡಿದೆ. ಇದಕ್ಕೆ ಬೇಕಾಗುವ ಉಳಿದ ಹಣಕ್ಕೆ ಹುಡ್ಕೋ ನೆರವು ನೀಡಲಿದೆ ಎಂದು ಹೇಳಿದ್ದಾರೆ.

2. ಯೋಜನೆಗೆ ಭೂಮಿ ನೀಡಲು ರೈತರನ್ನು ಹೇಗೆ ಒಪ್ಪಿಸಿದಿರಿ?


ಹೊಸ ನಿಯಮದ ಪ್ರಕಾರ, ಈ ಹಿಂದಿನ ಸರ್ಕಾರಗಳು ನಿಗದಿ ಪಡಿಸಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಪರಿಹಾರವನ್ನು ಸರ್ಕಾರ ನೀಡುತ್ತದೆ.  ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವಾಗಿ ಹೆಚ್ಚಿನ ಹಣ ಸಿಗುತ್ತಿರುವುದರಿಂದ ಅವರು ಜಮೀನು ನೀಡಲು ಒಪ್ಪಿದ್ದಾರೆ.

3. ಅಣೆಕಟ್ಟು ನಿರ್ಮಾಣಕ್ಕಾಗಿ ಎಷ್ಟು ಹಳ್ಳಿಗಳು ಮುಳುಗಿ ಹೋಗುತ್ತವೆ?

ಯೋಜನೆಯಿಂದ ಪುನರ್ವಸತಿಗಾಗಿ ಹಾಗು ಪುನಶ್ಚೇತನಕ್ಕಾಗಿ ಸುಮಾರು 1. 34 ಲಕ್ಷ ಎಕರೆ ಭೂಮಿ ಅವಶ್ಯಕತೆಯಿದ್ದು, 20 ಹಳ್ಳಿಗಳು ಮುಳುಗಿ ಹೋಗಲಿವೆ ಎಂದು ಹೇಳಿದ್ದಾರೆ.

4. ಪುನರ್ವಸತಿಗಾಗಿ ಸರ್ಕಾರದಿಂದ ಏನೇನು ಕ್ರಮ ಕೈಗೊಂಡಿದ್ದೀರಿ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸಮಿತಿ ಚರ್ಚೆ ನಡೆಸಿ ಪುನರ್ವಸತಿ ಮತ್ತು ಪುನೇಶ್ಚೇತನ ಪ್ಯಾಕೇಜ್ ಸಿದ್ದಪಡಿಸಲಿದೆ.

5. ಕೃಷ್ಣಾ ಮೇಲ್ದಂಡೆ ಯೋಜನೆ ಎಷ್ಟು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ?
ಮುಂದಿನ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಸರ್ಕಾರದ ಅಧಿಕಾರವಧಿ ಮುಗಿಯುವ ವೇಳೆಗೆ ಯೋಜನೆಯ ಮೂಲ ಸೌಕರ್ಯಗಳ ಸಂಬಂಧ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com