ಡಾ. ಎಂ.ಗೋವಿಂದ ಪೈ(ಸಂಗ್ರಹ ಚಿತ್ರ)
ಡಾ. ಎಂ.ಗೋವಿಂದ ಪೈ(ಸಂಗ್ರಹ ಚಿತ್ರ)

ಜ. 19ರಂದು ಮಂಜೇಶ್ವರದಲ್ಲಿ ಡಾ. ಗೋವಿಂದ ಪೈ ಸ್ಮಾರಕ ಉದ್ಘಾಟನೆ

ಇದೇ ಗುರುವಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಡಾ.ಗೋವಿಂದ ಪೈ ಸ್ಮಾರಕ ಉದ್ಘಾಟನೆ ನಡೆಯಲಿದೆ ಎಂದು...
Published on
ಬೆಂಗಳೂರು: ಇದೇ ಗುರುವಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಡಾ.ಗೋವಿಂದ ಪೈ ಸ್ಮಾರಕ ಉದ್ಘಾಟನೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ತಿಳಿಸಿದ್ದಾರೆ.
ಗೋವಿಂದ ಪೈ ಅವರ ಹೆಸರನ್ನು ಅಜರಾಮರಗೊಳಿಸುವ ಉದ್ದೇಶದಿಂದ ಗಿಳಿವಿಂಡು ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಗಿದೆ. ಗಿಳಿವಿಂಡುವಿನಲ್ಲಿ ಟ್ರಸ್ಟ್ ಯೋಜನೆಗಳು ಇದೇ 19 ರಂದು ಲೋಕಾರ್ಪಣೆಗೊಳ್ಳಲಿವೆ.
ಈ ಯೋಜನೆಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಈಗಾಗಲೇ 1 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಇನ್ನೂ 1 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಕೇರಳ ಸರ್ಕಾರ ಕೂಡ 1 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಅದರಲ್ಲಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ವಿವರ ನೀಡಿದರು.
ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ,ರಂಗಮಂದಿರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಗೋವಿಂದ ಪೈ ಪ್ರತಿಯನ್ನು ಸಚಿವೆ ಉಮಾಶ್ರೀ ಅನಾವರಣಾಗೊಳಿಸುವರು.ಗೋವಿಂದ ಪೈಯವರ ಜನ್ಮಸ್ಥಳವಾದ ಮಂಜೇಶ್ವರವನ್ನು ರಾಷ್ಟ್ರದ ಸಾಹಿತ್ಯಾಕ್ಷರಿಗೆ ಹಾಗೂ ಯಾತ್ರಿಕರಿಗೆ ಆಕರ್ಷಕ ಸ್ಥಳವನ್ನಾಗಿ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com