ಹುಲಿ ಮರಿ
ರಾಜ್ಯ
ಮೈಸೂರಿನಲ್ಲಿ ಹುಲಿ ಮರಿ ಸಾವು, ರಾಜ್ಯದಲ್ಲಿ 20 ದಿನಗಳಲ್ಲಿ ನಾಲ್ಕನೆ ಸಾವು
ಕೊಡಗು ಜಿಲ್ಲೆಯ ಪೊನ್ನಂಪೇಟೆ ಸಮೀಪದ ಕಾಫಿ ಎಸ್ಟೇಟ್‌ನಲ್ಲಿ ಉರುಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಗಂಡು...
ಮೈಸೂರು: ಕೊಡಗು ಜಿಲ್ಲೆಯ ಪೊನ್ನಂಪೇಟೆ ಸಮೀಪದ ಕಾಫಿ ಎಸ್ಟೇಟ್‌ನಲ್ಲಿ ಉರುಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಗಂಡು ಹುಲಿ ಮರಿ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರ ಮೃತಪಟ್ಟಿದೆ. ಇದರೊಂದಿಗೆ ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ ಮೃತಪಟ್ಟ ನಾಲ್ಕನೆ ಹುಲಿ ಇದಾಗಿದೆ.
ಪನ್ನಂಪೇಟೆ ಬಳಿ ಉರುಳಿಗೆ ಸಿಲಿಕಿದ ಹುಲಿಯ ಕಾಲಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯವಾಗಿತ್ತು. ಉರುಳಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಇತರ ಕಾಲುಗಳಿಗೂ ಗಾಯಗಳಾಗಿದ್ದವು. ಪುನರ್ವಸತಿ ಕೇಂದ್ರಕ್ಕೆ ತಂದ ಬಳಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗಾಯದ ಸೋಂಕು ದೇಹಕ್ಕೆ ವ್ಯಾಪಿಸಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ’ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.
ಹಂದಿ ಹಿಡಿಯಲು ಹಾಕಿದ ಉರುಳಿಗೆ ಜ. 17ರ ರಾತ್ರಿ ಹುಲಿಯ ಕಾಲುಗಳು ಸಿಲುಕಿದ್ದವು. ನಾಗರಹೊಳೆ ಉದ್ಯಾನದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅರಿವಳಿಕೆ ಮದ್ದು ನೀಡಿ ಹುಲಿ ರಕ್ಷಣೆ ಮಾಡಿದ್ದರು. ನಂತರ ಮೈಸೂರಿನ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಜನವರಿ ನಾಲ್ಕು 4ರಂದು ನಾಗರಹೊಳೆಯ ಡಿಬಿ ಕುಪ್ಪೆಯಲ್ಲಿ ಒಂದು ಹುಲಿ, ಜನವರಿ 13ರಂದು ಬನ್ನೇರುಘಟದಲ್ಲಿ ಹಾಗೂ ಜನವರಿ 16ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯ ವ್ಯಾಪ್ತಿಯಲ್ಲಿ ಜ. 16ರಂದು 9 ವರ್ಷದ ಹುಲಿಯೊಂದು ಕಾರ್ಯಾಚರಣೆ ವೇಳೆ ಮೃತಪಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ