ಸದ್ದಿಲ್ಲದೇ ನಡೆಯುತ್ತಿದೆ ಟಿಪ್ಪು ಸುಲ್ತಾನ್ ನ ಐತಿಹಾಸಿಕ ಶಸ್ತ್ರಾಗಾರ ಸ್ಥಳಾಂತರ ಕಾರ್ಯ

50 ವರ್ಷಗಳ ಸುದೀರ್ಘ ಇತಿಹಾಸವಿರುವ ಶ್ರೀರಂಗಪಟ್ಟಣ ಟಿಪ್ಪು ಸುಲ್ತಾನ್ ಶಸ್ತ್ರಾಗಾರವನ್ನು ಸ್ಥಳಾಂತರಿಸಲಾಗುತ್ತಿದೆ....
ಟಿಪ್ಪುವಿನ ಶಸ್ತ್ರಾಗಾರ
ಟಿಪ್ಪುವಿನ ಶಸ್ತ್ರಾಗಾರ
Updated on

ಬೆಂಗಳೂರು: ಸುಮಾರು 250 ವರ್ಷಗಳ  ಸುದೀರ್ಘ ಇತಿಹಾಸವಿರುವ ಶ್ರೀರಂಗಪಟ್ಟಣ ಟಿಪ್ಪು ಸುಲ್ತಾನ್ ಶಸ್ತ್ರಾಗಾರವನ್ನು ಸ್ಥಳಾಂತರಿಸಲಾಗುತ್ತಿದೆ.

ಏಳು ವರ್ಷಗಳ ಸುದೀರ್ಘ ಚರ್ಚೆ, ಸಮಾಲೋಚನೆಗಳ ನಂತರ ಬೆಂಗಳೂರು ಮೈಸೂರು ರೈಲ್ವೆ ಹಳಿ ವಿಸ್ತರಣೆಗಾಗಿ ಶಸ್ತ್ರಾಗಾರವನ್ನು ಸ್ಥಳಾಂತರಿಸಲಾಗುತ್ತಿದೆ. ರೈಲ್ವೆ ಹಳಿ ವಿಸ್ತರಣೆಗಾಗಿ 2007 ರಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಪರಂಪರೆ ಸಾರುವ ಶಸ್ತ್ರಾಗಾರವನ್ನ ಸ್ಥಳಾಂತರಿಸುವ ಬಗ್ಗೆ 2009 ರಲ್ಲಿ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಇದಕ್ಕೆ ಯಾವುದೇ ಭಾರತೀಯ ಗುತ್ತಿಗೆದಾರರು ಮುಂದೆ ಬರಲಿಲ್ಲ ಎಂದು ಯೋಜನೆಯ ಕನ್ಸಲ್ಟಿಂಗ್ ಎಂಜಿನೀಯರ್ ಹಾಗೂ ಸಲಹೆಗಾರ ಜಿ. ಅಶ್ವಥ್ ನಾರಾಯಣ ಹೇಳಿದ್ದಾರೆ.

ಸ್ಮಾರಕ ಸ್ಥಳಾಂತರ ಕಾರ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಾರೆ ಎಂಬುದರ ಜೊತೆಗೆ ಇದನ್ನು ಸ್ಥಳಾಂತರ ಮಾಡುವುದು ತುಂಬಾ ಕಷ್ಟದ ಕೆಲಸ ಎಂಬ ಕಾರಣಕ್ಕೆ ಯಾರೊಬ್ಬರು ಮುಂದೆ ಬಂದಿರಲಿಲ್ಲ.

ಅಮೆರಿಕಾದ ವೋಲ್ಫ್ ಪ್ಪೈವೇಟ್ ಕಂಪನಿಯ ಸಹಯೋಗದಲ್ಲಿ ಭಾರತೀಯ ಕಂಪನಿ 13.5 ಕೋಟಿ ರು. ವೆಚ್ಚದ ಈ ಯೋಜನೆಯ ಗುತ್ತಿಗೆ ಪಡೆದಿದೆ. ಗುತ್ತಿಗೆದಾರರನ್ನು ಪತ್ತೆ ಹಚ್ಚಲು 6 ವರ್ಷಗಳ ಸಮಾವಕಾಶ ತೆಗೆದುಕೊಳ್ಳಲಾಯಿತು ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಈ ಶಸ್ತ್ರಾಗಾರವು ಮೈಸೂರಿನಿಂದ ಸುಮಾರು 20 ಕಿಮೀ ದೂರದಲ್ಲಿದ್ದು, ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣಕ್ಕೂ ಮೊದಲು ಸಿಗುತ್ತೆದ, ಈಗ ಸದ್ಯ ಇರುವ ಸ್ಥಳದಿಂದ ಸುಮಾರು 100 ಮೀಟರ್ ದೂರಕ್ಕೆ ಶಸ್ತ್ರಾಗಾರವನ್ನು ಸ್ಥಳಾಂತರಿಸಲಾಗುತ್ತದೆ.

ಇಲ್ಲಿ ಎರಡು ಟ್ರ್ಯಾಕ್ ನಿರ್ಮಾಣವಾದರೆ ನೋಡಲು ತುಂಬಾ ಅದ್ಭುತವಾಗಿರುತ್ತದೆ. ಅಗಲಗೊಂಡ ಹಳಿಯಿಂದಾಗಿ ಬೆಂಗಳೂರು-ಮೈಸೂರು ಸಂಚಾರ ಸಮಯವು ಕೂಡ ಕಡಿಮೆಯಾಗುತ್ತದೆ. ಕೇವಲ ಅರ್ಧಗಂಟೆಯಲ್ಲಿ ಮೈಸೂರಿಂದ ಬೆಂಗಳೂರಿಗೆ ಪಯಣಿಸಬಹುದಾಗಿದೆ ಎಂದು ನಗರ ಯೋಜಕ ಕೋದಂಡ ಪಾಣಿ ಹೇಳಿದ್ದಾರೆ.

ಒಟ್ಟು 136 ಕೀಮೀ ಉದ್ದದ ಹಳಿಯಲ್ಲಿ ಒಂದೂವರೆ ಕಿಮೀ ಅಂತರ ಕಡಿಮೆಯಾಗುತ್ತದೆ. ಶಸ್ತ್ರಾಗಾರದಿಂದ ರೈಲ್ವೆ ಹಳಿ 15 ಮೀಟರ್ ದೂರದಲ್ಲಿರುತ್ತದೆ, ಕಂಪನಿ ವತಿಯಿಂದ ಇಬ್ಬರು ಎಂಜಿನೀಯರ್ ಗಳು ಈಗಾಗಲೇ ಬಂದಿದ್ದು ಪ್ರಾಥಮಿಕ ಹಂತದ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದಿನ ವಾರ ಮತ್ತೊಬ್ಬ ಎಂಜಿನೀಯರ್ ಆಗಮಿಸಲಿದ್ದು, ಫೆಬ್ರವರಿ 15 ರೊಳಗೆ ಸ್ಮಾರಕ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ಅವರು ಪಶ್ಚಿಮ ರೈಲ್ವೆಯ ಆಡಳಿತಾಧಿಕಾರಿ ಎಸ್ ಕೆ ಜೈನ್ ಹೇಳಿದ್ದಾರೆ.

ಈಗಿರುವ ಶಸ್ತ್ರಾಗಾರವನ್ನು ನೆಲಸಮಗೊಳಿಸಿ, ಅದೇ ಮಾದರಿಯ ಮತ್ತೊಂದಪ ಶಸ್ತ್ರಾಗಾರವನ್ನು 150 ಮೀಟರ್ ದೂರದಲ್ಲಿ ಹೊಸದಾರಿ ನಿರ್ಮಿಸಲು ಸಲಹೆ ನೀಡಲಾಗಿತ್ತು. ಆದರೆ ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಶಸ್ತ್ರಾಗಾರವನ್ನು ನೆಲಸಮ ಮಾಡುವ ಬದಲು ತಮ್ಮ ತಲೆಗಳನ್ನು ಕತ್ತರಿಸುವುದು ಉತ್ತಮ ಎಂದು ಹೇಳಿದ್ದರು ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

1904ರ ಪ್ರಾಚೀನ ಸ್ಮಾರಕಗಳು ಸಂರಕ್ಷಣೆ ಕಾಯ್ದೆ ಪ್ರಕಾರ ಸ್ಮಾರಕವೊಂದನ್ನು ನೆಲಸಮಗೊಳಿಸುವುದು ಅಥವಾ ಸ್ಥಳಾಂತರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com