ಮಾರಣಾಂತಿಕ ಹಿಮಪಾತ: ಸಾವಿನ ದವಡೆಯಿಂದ ಪಾರಾದ ಬೆಳಗಾವಿಯ ಸೇನಾಧಿಕಾರಿ

ಕಾಶ್ಮೀರದ ಸೋನಮಾರ್ಗ್ ನಲ್ಲಿ ಸೇನಾ ಕ್ಯಾಂಪ್ ಮೇಲೆ ಆದ ಮಾರಣಾಂತಿಕ ಹಿಮಪಾತದಿಂದ ರಾಜ್ಯದ ಅಧಿಕಾರಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ...
ಮೇಜರ್ ಶ್ರೀಹರಿ ಕುಗಜಿ
ಮೇಜರ್ ಶ್ರೀಹರಿ ಕುಗಜಿ

ಹುಬ್ಬಳ್ಳಿ: ಕಾಶ್ಮೀರದ ಸೋನಮಾರ್ಗ್ ನಲ್ಲಿ ಸೇನಾ ಕ್ಯಾಂಪ್ ಮೇಲೆ ಆದ ಮಾರಣಾಂತಿಕ ಹಿಮಪಾತದಿಂದ ರಾಜ್ಯದ ಅಧಿಕಾರಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬೆಳಗಾವಿಯ ಮೇಜರ್ ಶ್ರೀಹರಿ ಕುಗಜಿ ಹಿಮಪಾತದಿಂದ ಬಚಾವಾಗಿ ಮರುಹುಟ್ಟು ಪಡೆದಿದ್ದಾರೆ. ಆದರೆ ಇದೇ ಹಿಮಪಾತಕ್ಕೆ ನಿದ್ರಿಸುತ್ತಿದ್ದ ದೆಹಲಿಯ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.

ಬೆಳಗಾವಿಯ ಸೇನಾ ತುಕಡಿಯ ಮೇಜರ್ ಶ್ರೀಹರಿ ಕುಗಜಿ  115 ಮಹರ್ ಬೆಟಾಲಿಯನ್ ಗೆ ಕೆಲವು ತಿಂಗಳ ಹಿಂದೆಯಷ್ಟೇ ವರ್ಗಗೊಂಡಿದ್ದರು. 8 ಮಂದಿಯಿಂದ ಸೇನಾ ಕ್ಯಾಂಪ್ ಮೇಲೆ ಭಾರೀ ಪ್ರಮಾಣದ ಹಿಮಪಾತವಾಗಿತ್ತು, ಆ ಘಟನೆಯ ಬಗ್ಗೆ ಶ್ರೀಹರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಘಟನೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

ಮುಂಜಾನೆ 5.45 ರ ಸಮಯದಲ್ಲಿ ಜೋರಾಗಿ ಗಾಳಿ ಬೀಸುವ ಸದ್ದು ಕೇಳಿಸಿತು. ಕೂಡಲೇ ನಾವು ಮಲಗಿದ್ದ ಟೆಂಟ್ ಮೇಲೆ ಬೃಹತ್ ಗಾತ್ರದ ಮಂಜುಗಡ್ಡೆ ಬಿದ್ದಿತ್ತು. ಎಲ್ಲೆಲ್ಲಿ ಜಾಗ ಸಿಗುತ್ತದೋ ಅದರೊಳಗೆ ನುಗ್ಗಿದೆವು. ಈ ವೇಳೆ ಉಸಿರಾಡಲು ಕಷ್ಟವಾಯಿತು. ನಾನು ಟೆಂಟ್ ನ ಪಕ್ಕ ಮಲಗಿದ್ದರಿಂದ ಸ್ವಲ್ಪ ಮಟ್ಟಿಗೆ ತೆವಳಲು ಸಾಧ್ಯವಾಯಿತು. ಹಾಸಿಗೆ ಕೆಳಗಿಂದ ಸ್ವಲ್ಪ ಪ್ರಮಾಣಗ ಆಮ್ಲಜನಕ ಸಿಗುತ್ತಿತ್ತು. ಹಿಮದ ಗಡ್ಡೆಗಳು ನನ್ನ ಮೇಲೆ ಬಿದ್ದ ಪರಿಣಾಮ ಕೈಗಳು ನಿಷ್ಕ್ರಿಯಗೊಂಡವು, ಅತ್ತಿತ್ತ ಅಲುಗಾಡಿಸಲು ಸಾಧ್ಯವಾಗಲಿಲ್ಲ, ಈ ವೇಳೆ ನಾನು ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡೆ. ಜೊತೆಗೆ ಕ್ಯಾಂಪ್ ನ ಪರಿಸ್ಥಿತಿ ಏನಾಗಿರಬಹುದು ಎಂದು ಭಯಗೊಂಡೆ ಎಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com