ಹೊಸಕೆರೆ ಹಳ್ಳಿ ಕೆರೆಯಲ್ಲಿ ಸಿಕ್ಕಿದ್ದು 800 ವರ್ಷಗಳ ಪುರಾತನ ಚೋಳರ ಕಾಲದ ಮಂಟಪ

ನಗರದ ಹೊಸಕೆರೆ ಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ 800 ವರ್ಷಗಳಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು...
ಹೊಸಕೆರೆಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ
ಹೊಸಕೆರೆಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ

ಬೆಂಗಳೂರು: ನಗರದ ಹೊಸಕೆರೆ ಹಳ್ಳಿಯಲ್ಲಿ ಪತ್ತೆಯಾಗಿರುವ ಮಂಟಪ 800 ವರ್ಷಗಳಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪುರಾತನ ಗಂಗಮ್ಮನ ಮಂಟಪದ ಸ್ಥಳಕ್ಕೆ ಬುಧವಾರ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಮಂಟಪವು ಕೆಂಪೇಗೌಡರ ಕಾಲದ್ದು ಎಂದು ಸ್ಥಳೀಯರು ಮಾತನಾಡುತ್ತಿದ್ದರು. ಹೀಗಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆವು. ಆದರೆ, ಇದು ಚೋಳರ ಕಾಲದ್ದು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಟಪದ ತುಂಬೆಲ್ಲ ನೀರಿದೆ. ನೀರು ಬರದಂತೆ ಸುತ್ತಲೂ ಕಟ್ಟೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮಂಟಪವನ್ನು ಭೂಮಿಯಿಂದ ಹೊರ ತೆಗೆಯಲು ಸಾಧ್ಯವಿಲ್ಲ. ಹೀಗಾಗಿ ಅದು ಇರುವ ಸ್ಥಳದಲ್ಲೇ ಸೂಕ್ತ ವ್ಯವಸ್ಥೆ ಮೂಲಕ  ಮಂಟಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಈ ಮಂಟಪ ಸ್ಥಳೀಯರಿಂದ ಗಂಗಮ್ಮನ ತೊಟ್ಟಿಲು ಎಂದು ಪ್ರಸಿದ್ಧವಾಗಿದೆ. ನಾಲ್ಕು ಕಂಬಗಳಿದ್ದು, ಈ ಕಲ್ಲು ಕಂಬಗಳ ಮೇಲೆ ಕೆತ್ತನೆಯಿರುವ ಕಲ್ಲಿನ ಚಪ್ಪಡಿಗಳಿವೆ,ಇದೇ ರೀತಿಯ ಮಂಟಪಗಳು ಮೈಸೂರು, ಮೇಲುಕೋಟೆ , ಮನ್ಮಥಕೊಂಡ ಮತ್ತು ಹಂಪಿ ಸೇರಿದಂತೆ ಹಲವು ಕಡೆ ಇವೆ. ಇಲ್ಲಿನ ಶಿಲ್ಪಕಲೆ ತುಂಬಾ ವಿಭಿನ್ನವಾಗಿದ್ದು, ತುಂಬಾ ಆಸಕ್ತಿದಾಯಕವಾಗಿವೆ. ಶಾಸನಗಳ ಉತ್ಖನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೋಪಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com