ತನ್ನ ಅಗತ್ಯಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ ಬೆಂಗಳೂರು ರೈಲ್ವೆ ವಲಯ

92 ವರ್ಷಗಳ ನಂತರ ಈ ವರ್ಷ ಕೇಂದ್ರ ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 92 ವರ್ಷಗಳ ನಂತರ ಈ ವರ್ಷ ಕೇಂದ್ರ ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ಮಂಡನೆಯಾಗಲಿದ್ದು, ಇನ್ನು ಒಂದು ವಾರ ಬಾಕಿ ಇರುವಾಗಲೇ ಬೆಂಗಳೂರು ರೈಲ್ವೆ ವಲಯ ತನ್ನ ಬಯಕೆಗಳ ಪಟ್ಟಿಯನ್ನು ಬಜೆಟ್ ನಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಕಳುಹಿಸಿದೆ.
ಹುಬ್ಬಳ್ಳಿಯಿಂದ ಬೆಂಗಳೂರು ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸುವ ರೈಲು, ಮೂರು ಡಬ್ಲಿಂಗ್ ಯೋಜನೆಗಳು ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವುದು ಬೇಡಿಕೆಗಳಲ್ಲಿ ಪ್ರಮುಖವಾದವುಗಳಾಗಿವೆ.
ಡಬ್ಲಿಂಗ್ ಪ್ರಾಜೆಕ್ಟ್ ಕುರಿತು ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ನೈರುತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಶೋಕ್ ಗುಪ್ತಾ, ಯಶವಂತಪುರದಿಂದ ಬೈಯಪ್ಪನಹಳ್ಳಿ ಮೂಲಕ ಹೆಬ್ಬಾಳಕ್ಕೆ ಹೋಗುವ ಡಬ್ಲಿಂಗ್ ಟ್ರಾಕ್ ಹೆಚ್ಚೆಚ್ಚು ರೈಲುಗಳ ಸಂಚಾರಕ್ಕೆ ಅನುಕೂಲವಾಗುತ್ತದೆ. 22 ಕಿಲೋ ಮೀಟರ್ ಉದ್ದದ ಟ್ರಾಕ್ ನಿರ್ಮಾಣಕ್ಕೆ 170 ಕೋಟಿ ರೂಪಾಯಿ ಬೇಕಾಗುತ್ತದೆ ಎಂದರು.
ಇನ್ನೊಂದು ಡಬ್ಲಿಂಗ್ ಪ್ರಾಜೆಕ್ಟ್ ಬೈಯಪ್ಪನಹಳ್ಳಿ ಮತ್ತು ಹೊಸೂರು ನಡುವೆ ಆಗಿದ್ದು ಇದಕ್ಕೆ 375 ಕೋಟಿ ರೂಪಾಯಿ ಬೇಕಾಗುತ್ತದೆ. ಈ ಯೋಜನೆಗಳ ಒಪ್ಪಿಗೆಗೆ ಮತ್ತು ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
ಬೆಂಗಳೂರು ರೈಲ್ವೆ ವಲಯದ ವಿಭಾಗೀಯ ವ್ಯವಸ್ಥಾಪಕ ಸಂಜೀವ್ ಅಗರ್ ವಾಲ್, ಸಂಜೆ ಹೊತ್ತು ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ಚಾಮುಂಡಿ ಎಕ್ಸ್ ಪ್ರೆಸ್ ನಲ್ಲಿನ ಜನಜಂಗುಳಿಯನ್ನು ಕಡಿಮೆ ಮಾಡಲು ಹುಬ್ಬಳ್ಳಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹಗಲು ರೈಲಿನ ಆರಂಭಕ್ಕೆ ಮನವಿ ಸಲ್ಲಿಸಿದ್ದು ಅದು ಅಂಗೀಕಾರಗೊಳ್ಳುವ ನಿರೀಕ್ಷೆಯಿದೆ ಎಂದರು.
ಕೆಎಸ್ಆರ್, ಕಂಟೋನ್ ಮೆಂಟ್, ಯಶವಂತಪುರ ಮತ್ತು ಕೃಷ್ಣರಾಜಪುರ ಸ್ಟೇಷನ್ ಗಳಲ್ಲಿ ಪ್ರಯಾಣಿಕರಿಗೆ ಡಿಜಿಟಲ್ ಮಾಹಿತಿ ಹಲಗೆಯನ್ನು ಅಳವಡಿಸುವಂತೆಯೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com