ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಏರೊ ಇಂಡಿಯಾ ಶೋ ನಲ್ಲಿ ಪ್ರದರ್ಶನಗೊಳ್ಳಲಿರುವ ಹಾಕ್ ವಿಮಾನ
ರಾಜ್ಯ
ಹೆಚ್ಎಎಲ್ ಮೊದಲ ಬಾರಿಗೆ ದೇಶೀಯವಾಗಿ ಮೇಲ್ದರ್ಜೆಗೇರಿಸಿದ ಹಾಕ್-ಐ ವಿಮಾನ ಹಾರಾಟ ಆರಂಭ
ರಕ್ಷಣಾ ವಲಯದ ಸಾರ್ವಜನಿಕ ವಲಯ ಘಟಕವಾದ ಹಿಂದೂಸ್ತಾನ್ ಅರೊನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್)...
ಬೆಂಗಳೂರು: ರಕ್ಷಣಾ ವಲಯದ ಸಾರ್ವಜನಿಕ ವಲಯ ಘಟಕವಾದ ಹಿಂದೂಸ್ತಾನ್ ಅರೊನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್), ದೇಶೀಯವಾಗಿ ಮೊದಲ ಬಾರಿಗೆ ಮೇಲ್ದರ್ಜೆಗೇರಿಸಿದ ವಿಮಾನ ಹಾಕ್ ಎಂಕೆ 132ನ್ನು ಅನಾವರಣಗೊಳಿಸಿದೆ. ಇದನ್ನು ಹಾಕ್-ಐ ಎಂದು ಕರೆಯಲಾಗುತ್ತದೆ.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಹೆಚ್ ಎಎಲ್ ನಲ್ಲಿ ಉತ್ಪಾದಿಸಲ್ಪಟ್ಟ 100ನೇ ಹಾಕ್ ವಿಮಾನ ಇದಾಗಿದೆ ಎಂದು ಹೆಚ್ ಎಎಲ್ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣ ರಾಜು ತಿಳಿಸಿದ್ದಾರೆ. ಸ್ವಾವಲಂಬನೆ ಮತ್ತು ಯಶಸ್ವಿ ಸಾಧನೆಗೆ ಹಾಕ್ 132 ವಿಮಾನವನ್ನು ದೇಶೀಯವಾಗಿ ಮೇಲ್ದರ್ಜೆಗೇರಿಸುವ ಕಾರ್ಯಕ್ರಮವನ್ನು ಹೆಚ್ ಎಎಲ್ ಆರಂಭಿಸಿತ್ತು. ಮೊನ್ನೆ 25ರಂದು ಹಾರಾಟ ಆರಂಭಿಸಿದ್ದು ಮುಂದಿನ ತಿಂಗಳು ಯಲಹಂಕದಲ್ಲಿ ನಡೆಯುವ ಏರೊ ಇಂಡಿಯಾ ಶೋದಲ್ಲಿ ಪ್ರದರ್ಶನಗೊಳ್ಳಲಿದೆ.
ಹಾಕ್ ವಿಮಾನವನ್ನು ಮೇಲ್ದರ್ಜೆಗೇರಿಸುವ ಕೆಲಸಗಳಾದ ಹೊಸ-ವ್ಯವಸ್ಥೆಗಳನ್ನು ಅಥವಾ ಮಾರ್ಪಾಡುಗಳನ್ನು ಮಾಡುವುದು, ಏವಿಯಾನಿಕ್ಸ್ ವ್ಯವಸ್ಥೆಗಳು, ಕ್ಷ ನಿರ್ವಹಣೆಯ ಏಕೀಕರಣ, ವಿಮಾನ ಕಾರ್ಯಾಚರಣೆಯ ಮತ್ತು ತರಬೇತಿ ಸಾಮರ್ಥ್ಯವನ್ನು ವರ್ಧಿಸುವುದನ್ನು ಸ್ವತಂತ್ರವಾಗಿ ಮಾಡಲಾಯಿತು ಎಂದು ಹೆಚ್ ಎಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಮೇಲ್ದರ್ಜೆಗೇರಿಸುವ ಚಟುವಟಿಕೆಯಲ್ಲಿ ಆಮದು ಮಾಡಿಕೊಂಡ ಮಿಷನ್ ಕಂಪ್ಯೂಟರ್ ಮತ್ತು ದಾಖಲೆಗಳ ವರ್ಗಾವಣೆ ಘಟಕಗಳಿಗೆ ಬದಲಾಗಿ ಹೆಚ್ ಎಎಲ್ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ವ್ಯವಸ್ಥೆಗಳನ್ನು ಹಾಕಲಾಗಿದೆ.
ಸುಧಾರಿತ ಜೆಟ್ ತರಬೇತುದಾರ ಹಾಕ್ಸ್ ಏರ್ ಫೋರ್ಸ್ ಸ್ಟೇಷನ್ ಬೀದರ್ ನಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ