ನನಗೆ ಶವದ ಬಟ್ಟೆ ತೊಡಿಸಿದರು: ತುಮಕೂರು ದಲಿತ ಯುವಕ ಅಭಿಷೇಕ್ ಅಳಲು

ನಾನು ಮಧುಗಿರಿಯವನು ಎಂದು ಸುಳ್ಳು ಹೇಳದಿದ್ದರೇ ಆವರು ನನ್ನನ್ನು ಕೊಂದೇ ಬಿಡುತ್ತಿದ್ದರು, ಅವರು ನನಗೆ ಧರಿಸಲು ಸತ್ತ ವ್ಯಕ್ತಿಯ ಬಟ್ಟೆ ನೀಡಿ ಮಲ್ಲಸಂದ್ರದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ತುಮಕೂರು: 'ನಾನು ಮಧುಗಿರಿಯವನು ಎಂದು ಸುಳ್ಳು ಹೇಳದಿದ್ದರೇ ಆವರು ನನ್ನನ್ನು ಕೊಂದೇ ಬಿಡುತ್ತಿದ್ದರು, ಅವರು ನನಗೆ ಧರಿಸಲು ಸತ್ತ ವ್ಯಕ್ತಿಯ ಬಟ್ಟೆ ನೀಡಿ ಮಲ್ಲಸಂದ್ರದಲ್ಲಿ ಬಿಟ್ಟು ಹೋದರು' ಜನವರಿ 17 ರಂದು ಗುಬ್ಬಿಯ ಅಭಿಷೇಕ್ ನನ್ನು
ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣದ ಬಗ್ಗೆ ಅಭಿಷೇಕ್ ನೀಡಿದ ವಿವರಣೆ ಇದು.

ನಾನು ಅಲ್ಲಿಂದ ಓಡಿಹೋಗುವುದಿಲ್ಲ ಎಂಬುದನ್ನು ಅವರಿಗೆ ಸ್ಪಷ್ಟಪಡಿಸಲು ನನ್ನ ಬಟ್ಟೆಯನ್ನು ನಾನೇ ಹರಿದು ಹಾಕಿದೆ ಎಂದು ಅಭಿಷೇಕ್ ಹೇಳಿದ್ದಾನೆ. ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯ ಸ್ಪೆಷಲ್ ವಾರ್ಡ್ ನಲ್ಲಿ ಅಭಿಷೇಕ್ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ನಡೆದ ದಿನದಿಂದ ಆತನನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

ಮೂರು ಗಂಟೆಗಳ ಕಾಲ ನನ್ನ ಮೇಲೆ ಹಲ್ಲ ನಡೆಸಿ ಚಿತ್ರಹಿಂಸೆ ನೀಡಲಾಯಿತು. ಈ ವೇಳೆ ಒಂದು ಹನಿ ನೀರನ್ನು ಕೂಡ ಕೊಡಲಿಲ್ಲ ಎಂದು ಅಭಿಷೇಕ್ ಅಂದಿನ ಘಟನೆಯ ಬಗ್ಗೆ ವಿವರಿಸಿದ್ದಾನೆ.

ರೈತರೊಬ್ಬರ 15 ವರ್ಷದ ಮಗಳಿಗೆ ಚುಡಾಯಿಸುತ್ತಿದ್ದ ಎಂಬ ಆರೋಪದ ಮೇಲೆ ಕಾಡು ಪ್ರಕಾಶ್ ಎಂಬವರು 10 ಮಂದಿ ಸಹಚರರೊಂದಿಗೆ ಸೇರಿ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ್ದರು.

ನಾನು ಆಕೆಯನ್ನು ಚುಡಾಯಿಸಿಲ್ಲ. ಇದೆಲ್ಲಾ ಸುಳ್ಳು, ಗಣೇಶೋತ್ಸವದ ಮೆರವಣಿಗೆ ಆಕೆಯ ಮನೆಯಿದ್ದ ಪ್ರದೇಶದಲ್ಲಿ ನಡೆಯುತ್ತಿದ್ದ ವೇಳೆ , ಆಕೆ ತನ್ನ ತಾಯಿಯ ಮೊಬೈಲ್ ನಂಬರ್ ಕೊಟ್ಟಿದ್ದಳು ಎಂದು ಅಭಿಷೇಕ್ ತಿಳಿಸಿದ್ದಾನೆ.

ನನ್ನ ಮೊಬೈಲ್ ಕಸಿದುಕೊಂಡ ಕಾಡು ಪ್ರಕಾಶ್ ಅದನ್ನು ತೆರೆದ ಬಾವಿಗೆ ಎಸೆದಿದ್ದಾರೆ. ಅವರು ನನ್ನ ಮೊಬೈಲ್ ನನಗೆ ವಾಪಸ್ ನೀಡಿದರೇ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರಿಗೆ ತೋರಿಸುತ್ತೇನೆ ಎಂದು ಆತ ಹೇಳಿದ್ದಾನೆ,

ನಾನು ಶಬರಿಮಲೆಗೆ ಹೋಗಿದ್ದೆ, ಅಲ್ಲಿಂದ ಜನವರಿ 13 ರಂದು ವಾಪಸ್ ಊರಿಗೆ ಬಂದಿದ್ದೆ. ಈ ವೇಳೆ ವಾಪಸ್ ಗುಬ್ಬಿಗೆ ಬರದಂತೆ ಆಕೆ ನನಗೆ ಸಲಹೆ ನೀಡಿದ್ದಳು, ಆಕೆಗೆ ತನ್ನ ತಂದೆ  ನನ್ನ ಮೇಲೆ ಹಲ್ಲೆ ಮಾಡುವ ವಿಚಾರ ಮೊದಲೇ ತಿಳಿದಿತ್ತು ಎಂದು ಅಭಿಷೇಕ್ ತಿಳಿಸಿದ್ದಾನೆ. ಅಭಿಷೇಕ್ ನ ಎಲ್ಲಾ ಸಂಬಂಧಿಗಳು ಬಡತನ ರೇಖೆಗಿಂತ ಕೆಳಗಿದ್ದು, ಕೂಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com