ಸುವರ್ಣ ಆರೋಗ್ಯ ಸೇವಾ ಟ್ರಸ್ಟ್ ನಿಂದ 26 ಆಸ್ಪತ್ರೆಗಳಿಗೆ ನೊಟೀಸ್

ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ನೀಡದಿರುವ ರಾಜ್ಯದಲ್ಲಿರುವ 185 ಖಾಸಗಿ ಆಸ್ಪತ್ರೆಗಳಲ್ಲಿ 26...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ನೀಡದಿರುವ ರಾಜ್ಯದಲ್ಲಿರುವ 185 ಖಾಸಗಿ ಆಸ್ಪತ್ರೆಗಳಲ್ಲಿ 26 ಆಸ್ಪತ್ರೆಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೊಟೀಸ್ ನೀಡಿದೆ.  ಮೂರು ಸರ್ಕಾರಿ ವೈದ್ಯಕೀಯ ವಿಮಾ ಯೋಜನೆಗಳಡಿಯಲ್ಲಿ ಈ ಆಸ್ಪತ್ರೆಗಳು ಸೇವೆಗಳನ್ನು ವಜಾಗೊಳಿಸಿದ್ದವು. ಏಳು ಆಸ್ಪತ್ರೆಗಳು ಸೇವೆಗಳನ್ನು ಪ್ರಾರಂಭಿಸಿವೆ ಎಂದು ಸುವರ್ಣ ಆರೋಗ್ಯ ಸೇವಾ ಟ್ರಸ್ಟ್ ದೃಢಪಡಿಸಿದೆ.
ಆಸ್ಪತ್ರೆಗಳು ಸರ್ಕಾರಿ ಸೇವೆಗಳನ್ನು ರದ್ದುಪಡಿಸಿದರೆ ಬಡ ರೋಗಿಗಳಿಗೆ ಪರಿಣಾಮ ಬೀರುತ್ತದೆ ಎಂದು ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರೂ ಕೂಡ, ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆರೋಗ್ಯ ಇಲಾಖೆಯಡಿ ಬರುವ ಪ್ರತ್ಯೇಕ ಅಂಗವಾಗಿದ್ದು 2009ರಲ್ಲಿ ಅಸ್ಥಿತ್ವಕ್ಕೆ ಬಂತು. ಅದು ಬಿಪಿಎಲ್ ಕುಟುಂಬಗಳಿಗೆ ವಾಜಪೇಯಿ ಆರೋಗ್ಯಶ್ರೀ ಆರೋಗ್ಯ ಯೋಜನೆ, ಎಪಿಎಲ್ ಕುಟುಂಬಗಳಿಗೆ ರಾಜೀವ್ ಆರೋಗ್ಯಭಾಗ್ಯ, ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಜ್ಯೋತಿ ಸಂಜೀವನಿ ಯೋಜನೆಗಳನ್ನು ಜಾರಿಗೆ ತಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com