ರೈಲ್ವೆ ಹಳಿಗಳ ತಪಾಸಣೆಗೆ ಡ್ರೋನ್ ಕ್ಯಾಮರಾ ಬಳಕೆಗೆ ರೈಲ್ವೆ ಇಲಾಖೆ ಕ್ರಮ

ಕಳೆದ ವರ್ಷ ಡಿಸೆಂಬರ್ 22ರಂದು ಧರ್ಮಪುರಿ ವಲಯದ ಕುರುವಲ್ಲಿ ಮತ್ತು ತೊಪ್ಪುರ್ ನಡುವೆ ರೈಲ್ವೆ ಟ್ರ್ಯಾಕ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ 22ರಂದು ಧರ್ಮಪುರಿ ವಲಯದ ಕುರುವಲ್ಲಿ ಮತ್ತು ತೊಪ್ಪುರ್ ನಡುವೆ ರೈಲ್ವೆ ಟ್ರ್ಯಾಕ್ ಮೇಲೆ ಕಾಂಕ್ರೀಟ್ ಚಪ್ಪಡಿಗಳನ್ನು ಇಡುವ ಬಂಡಾಯಗಾರರ ಗುಂಪು ನಡೆಸಿದ ಪ್ರಯತ್ನವನ್ನು ರೈಲ್ವೆ ರಕ್ಷಣಾ ಪಡೆ ಆರಂಭಿಸಿದ್ದು ಡ್ರೋನ್ ಕ್ಯಾಮೆರಾ ಬಳಸಿ ಕಣ್ಗಾವಲು ನಡೆಸುತ್ತಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ರೈಲ್ವೆಯ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ರೈಲ್ವೆ ರಕ್ಷಣಾ ಪಡೆ ಹುಬ್ಬಳ್ಳಿ ವಲಯದ ಡಿ.ಬಿ.ಕಸಾರ್, ಕಳೆದ ತಿಂಗಳು ಚಾಲುಕ್ಯ ಎಕ್ಸ್ ಪ್ರೆಸ್ ನ್ನು ವಿಫಲಗೊಳಿಸಲು ಟ್ರಾಕ್ ಮೇಲೆ ಉದ್ದೇಶಪೂರ್ವಕವಾಗಿ ಕಾಂಕ್ರೀಟ್ ಚಪ್ಪಡಿಗಳನ್ನು ಇಟ್ಟಿದ್ದು ಪತ್ತೆ ಹಚ್ಚಲಾಗಿದೆ. ಭಾರತೀಯ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ಮಾಡಲಾಗಿದೆ. ಆ ಘಟನೆ ಬಳಿಕ ನಾವು ಹೆಚ್ಚು ಕಣ್ಗಾವಲು ಇರಿಸಿದ್ದೇವೆ. ಡಿಸೆಂಬರ್ 25ರಂದು ಡ್ರೋನ್ ಕ್ಯಾಮರಾವನ್ನು ಜಾರಿಗೆ ತಂದೆವು. ಹೀಗಾಗಿ ಗಣರಾಜ್ಯೋತ್ಸ ವಕ್ಕೆ ಮುನ್ನ ಭದ್ರತೆಯನ್ನು ಹೆಚ್ಚಿಸಲಾಯಿತು ಎನ್ನುತ್ತಾರೆ.
ಡ್ರೋನ್ ಕ್ಯಾಮರಾ ಸುತ್ತಮುತ್ತಲ ಪ್ರದೇಶಗಳಲ್ಲಿ ದಿನಪೂರ್ತಿಯ ಘಟನೆಗಳನ್ನು ದಾಖಲು ಮಾಡಿಕೊಳ್ಳುತ್ತದೆ. ದೃಶ್ಯಗಳನ್ನು ಕಂಟ್ರೋಲ್ ರೂಂನಲ್ಲಿರುವ ಸಿಬ್ಬಂದಿ ಮೇಲ್ವಿಚಾರಣೆ ನಡೆಸುತ್ತಿರುತ್ತಾರೆ. ಕ್ಯಾಮರಾವನ್ನು 25 ಮೀಟರ್ ಎತ್ತರಕ್ಕೆ ಏರಿಸಲಾಗುತ್ತದೆ ಮತ್ತು 5 ಕಿಲೋ ಮೀಟರ್ ವ್ಯಾಪ್ತಿಯವರೆಗಿನ ಘಟನೆಗಳನ್ನು, ದೃಶ್ಯಗಳನ್ನು ಚಿತ್ರಿಸುತ್ತದೆ. ಈ ರೈಲ್ವೆ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿದೆ. ಇದರ ಪರಿಣಾಮವಾಗಿ ರೈಲ್ವೆ ಸುರಕ್ಷತಾ ಪಡೆ ಇತರ ಪ್ರದೇಶಗಳಿಗೆ ವಿಸ್ತರಿಸುತ್ತದೆ ಎಂದು ಡಿಐಜಿ ಹೇಳಿದ್ದಾರೆ.
ಈ ಮಧ್ಯೆ, ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಭಯೋತ್ಪಾದಕರು, ಮಾವೋವಾದಿಗಳು ಮತ್ತು ಇತರ ಬಂಡುಕೋರ ಗುಂಪುಗಳ ಚಟುವಟಿಕೆಗಳು, ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ವಿಧ್ವಂಸಕ ಕೃತ್ಯಗಳ ಪೀಡಿತ ಪ್ರದೇಶಗಳಲ್ಲಿ ಪಹರೆ ಕಾಯಲು ಮತ್ತು ರೈಲ್ವೆ ಹಳಿಗಳ ಪಕ್ಕ ಗಸ್ತು ತಿರುಗಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೆಂಗಳೂರು, ಯಶವಂತಪುರ ಮತ್ತು ಮೈಸೂರು ರೈಲು ನಿಲ್ದಾಣಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸಿಸಿಟಿವಿ ಕ್ಯಾಮರಾ ಮೂಲಕ ಗಮನಿಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com