ರಾಜ್ಯದಲ್ಲಿ ಹೆಚ್ಚುತ್ತಿರುವ ಹುಲಿಗಳ ಸಾವು: ಸಿಬ್ಬಂದಿಗೆ ತರಬೇತಿ ನೀಡಲು ತಜ್ಞರ ಸಲಹೆ

ನಾಗರಹೊಳೆ, ಬಂಡಿಪುರ ಅರಣ್ಯಗಳಲ್ಲಿ ಕಳೆದ 23 ದಿನಗಳಲ್ಲಿ 5 ಹುಲಿಗಳು ಹಾಗೂ ಒಂದು ಚಿರತೆ ಸಾವನ್ನಪ್ಪಿರುವುದಕ್ಕೆ ವನ್ಯಜೀವಿ ಅಧಿಕಾರಿಗಳು ಹಾಗೂ ತಜ್ಞರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಗರಹೊಳೆ, ಬಂಡಿಪುರ ಅರಣ್ಯಗಳಲ್ಲಿ ಕಳೆದ 23 ದಿನಗಳಲ್ಲಿ 5 ಹುಲಿಗಳು ಹಾಗೂ ಒಂದು ಚಿರತೆ ಸಾವನ್ನಪ್ಪಿರುವುದಕ್ಕೆ ವನ್ಯಜೀವಿ ಅಧಿಕಾರಿಗಳು ಹಾಗೂ ತಜ್ಞರು ಆತಂಕ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಅರಣ್ಯ ಇಲಾಖೆ ಪ್ರತ್ಯೇಕ ಪಶು ಕೇಡರ್ ಸ್ಥಾಪಿಸಿ, ವನ್ಯ ಜೀವಿಗಳ ಆರೋಗ್ಯದ ಬಗ್ಗೆ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಜಿಲ್ಲಾಮಟ್ಟದಲ್ಲಿ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಮಾಡಬೇಕು. ಹುಲಿ ಹಾಗೂ ಚಿರತೆಗಳನ್ನು ಒಂದು ಕಡೆಯಿಮದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡುವಾಗ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರುತ್ತಿದೆ. ಈ ವೇಳೆ ಪಶು ಸಂಗೋಪನಾ ತಜ್ಞರ ಕೊರತೆ ಉಂಟಾಗುತ್ತಿದೆ. ಹುಲಿಗಳ ಆರೋಗ್ಯ ನೋಡಿಕೊಳ್ಳಲು ಹಾಗೂ ಅವುಗಳ ಚಿಕಿತ್ಸೆಗಾಗಿ ನುರಿತ ತರಬೇತಿದಾರರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸದ್ಯ ಕಡಿಮೆ ಸಂಖ್ಯೆಯಲ್ಲಿ ಪಶು ತಜ್ಞರಿದ್ದಾರೆ. ಇರುವ ಈ ತಜ್ಞರನ್ನು ಹುಲಿ ಮೀಸಲು ಅರಣ್ಯಗಳಿಗೆ ನಿಯೋಜಿಸಲಾಗಿದೆ. ಹುಲಿಗಳ ಚಿಕಿತ್ಸೆಗಾಗಿ ಯುವ ತಜ್ಞರ ಅವಶ್ಯಕತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com