ಬಿಗ್ ಬಾಸ್ ಕನ್ನಡ ಸೀಸನ್ 4 ವಿನ್ನರ್ ಪ್ರಥಮ್!

ಪ್ರಥಮ್ ಬಿಗ್ ಬಾಸ್ ಕನ್ನಡ ಸೀಸನ್ 4 ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಬಿಗ್ ಬಾಸ್ ಕನ್ನಡ-4,
ಬಿಗ್ ಬಾಸ್ ಕನ್ನಡ-4,
Updated on
ಪ್ರಥಮ್ ಬಿಗ್ ಬಾಸ್ ಕನ್ನಡ ಸೀಸನ್ 4 ವಿಜೇತರಾಗಿ ಆಯ್ಕೆಯಾಗಿದ್ದಾರೆ.  
ಈ ಬಾರಿಯ ಬಿಗ್ ಬಾಸ್ ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಪ್ರಥಮ್ ಅವರೇ ಗೆಲುವಿನ ಹಾದಿಯಲ್ಲಿ ಮುಂಚೂಣಿಯಲ್ಲಿದ್ದರು. ಫಿನಾಲೆಗೆ ಏರಿದ ಪ್ರಥಮ್ ಹಾಗೂ ಕೀರ್ತಿಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಪ್ರಥಮ್ ಬಿಗ್ ಬಾಸ್ ನ ವಿಜೇತರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿಗಳಾದ ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಪೈಕಿ ಪ್ರಥಮ್ ಅತಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ.
ಬಿಗ್ ಬಾಸ್ ಅಂತಿಮ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಮೀಕ್ಷೆಯಲ್ಲೂ ಪ್ರಥಮ್ ಗೆ ಅತೀ ಹೆಚ್ಚು ಜನರ ಬೆಂಬಲ ವ್ಯಕ್ತವಾಗಿತ್ತು. ಬಿಗ್ ಬಾಸ್ ನ ಅನೇಕ ಮಾಜಿ ಕಂಟೆಸ್ಟೆಂಟ್ ಗಳೂ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದರು.
ಬಿಗ್ ಬಾಸ್ ಫೈನಲ್ ಗೆ ಆಯ್ಕೆಯಾಗಿದ್ದ ಮತ್ತೋರ್ವ ಸ್ಪರ್ಧಿ ಕೀರ್ತಿಕುಮಾರ್ ತಮಗೆ ಬಂದ ಗೌರವಧನದಲ್ಲಿ 8 ನೇ ಒಂದು ಭಾಗದಷ್ಟು ಹಣವನ್ನು ಕನ್ನಡದ ಶಾಲೆಗಳ ಶ್ರೇಯೋಭಿವೃದ್ಧಿಗಾಗಿ ಬಳಸುವುದಾಗಿ ಘೋಷಿಸಿದ್ದರೆ, ಬಿಗ್ ಬಾಸ್ ನ ವಿಜೇತ ಪ್ರಥಮ್ ತಮಗೆ ಬಹುಮಾನವಾಗಿ ಬಂದ ಅಷ್ಟೂ ಹಣವನ್ನು ಸಾಮಾಜಿಕ ಕಾರ್ಯ ಹಾಗೂ ಚಾಮರಾಜನಗರದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸುವುದಾಗಿ ತಿಳಿಸಿದ್ದಾರೆ. 
ಈ ಹಿಂದಿನ ಬಿಗ್ ಬಾಸ್ ವಿಜೇತರು
ಬಿಗ್ ಬಾಸ್ ಸೀಸಸ್ 1: ವಿಜಯ ರಾಘವೇಂದ್ರ
ಬಿಗ್ ಬಾಸ್ ಸೀಸಸ್ 2: ಅಕುಲ್ ಬಾಲಾಜಿ
ಬಿಗ್ ಬಾಸ್ ಸೀಸಸ್ 3: ಶೃತಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com