ದೋಷಪೂರಿತ ಲ್ಯಾಪ್ ಟಾಪ್: ಗ್ರಾಹಕಿಗೆ ಪರಿಹಾರ ನೀಡುವಂತೆ ಆಪಲ್ ಸಂಸ್ಥೆಗೆ ಆದೇಶ
ದೋಷಪೂರಿತ ಲ್ಯಾಪ್ ಟಾಪ್: ಗ್ರಾಹಕಿಗೆ ಪರಿಹಾರ ನೀಡುವಂತೆ ಆಪಲ್ ಸಂಸ್ಥೆಗೆ ಆದೇಶ

ದೋಷಪೂರಿತ ಲ್ಯಾಪ್ ಟಾಪ್: ಗ್ರಾಹಕಿಗೆ ಪರಿಹಾರ ನೀಡುವಂತೆ ಆಪಲ್ ಸಂಸ್ಥೆಗೆ ಆದೇಶ

ಬೆಂಗಳೂರು ಮೂಲದ ಮಕ್ಕಳ ಹಕ್ಕು ಕಾರ್ಯಕರ್ತೆ ಆಪಲ್ ವಿರುದ್ಧದ ಕಾನೂನು ಸಮರವನ್ನು ಜಯಿಸಿದ್ದು, ದೋಷಪೂರಿತ ಲ್ಯಾಪ್ ಟಾಪ್ ನ್ನು ನೀಡಿದ್ದಕ್ಕಾಗಿ 25,000 ರೂಗಳ ಪರಿಹಾರ ಧನ ನೀಡುವಂತೆ ಆದೇಶ...
Published on
ಬೆಂಗಳೂರು: ಬೆಂಗಳೂರು ಮೂಲದ ಮಕ್ಕಳ ಹಕ್ಕು ಕಾರ್ಯಕರ್ತೆ ಆಪಲ್ ವಿರುದ್ಧದ ಕಾನೂನು ಸಮರವನ್ನು ಜಯಿಸಿದ್ದು, ದೋಷಪೂರಿತ ಲ್ಯಾಪ್ ಟಾಪ್ ನ್ನು ನೀಡಿದ್ದಕ್ಕಾಗಿ 25,000 ರೂಗಳ ಪರಿಹಾರ ಧನ ನೀಡುವಂತೆ ಆದೇಶ ನೀಡಲಾಗಿದೆ. 
ಮಲ್ಲೇಶ್ವರಂ ನ ನಿವಾಸಿಯಾಗಿರುವ ನೀನಾ ಪಿ. ನಾಯಕ್ ಅವರ ಆಪಲ್ ಲ್ಯಾಪ್ ಟಾಪ್ ನಲ್ಲಿ ವಾರೆಂಟಿ ಅವಧಿಯಲ್ಲಿರುವಾಗಲೇ ದೋಷ ಕಾಣಿಸಿಕೊಂಡಿತ್ತು. ಪದೇ ಪದೇ ದುರಸ್ತಿಗೊಳಿಸಿದರೂ ಸಹ ಕೇವಲ ನಾಲ್ಕೇ ದಿನಗಳಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಈ ಬಗ್ಗೆ ನೀನಾ ಪಿ.ನಾಯಕ್ ಅವರು ದೂರು ನೀಡಿದ್ದರಾದರೂ ಸೂಕ್ತ ಸೇವೆ ಒದಗಿಸದ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. 
ಆಪಲ್ ವಿರುದ್ಧದ ಕಾನೂನು ಸಮರದಲ್ಲಿ ನೀನಾ ಪಿ ನಾಯಕ್ ಅವರ ಪರವಾಗಿ ತೀರ್ಪು ಪ್ರಕಟವಾಗಿದ್ದು, ಆಪಲ್ ಸಂಸ್ಥೆ 25,000 ರೂ ಪರಿಹಾರಧನವನ್ನು ಹಾಗೂ 10,000 ರೂಗಳನ್ನು ಗ್ರಾಹಕರು ಎದುರಿಸಿದ ಸಮಸ್ಯೆಗಾಗಿ ಪರಿಹಾರವಾಗಿ ನೀಡುವಂತೆ ಸೂಚಿಸಲಾಗಿದೆ. 
ನೀನಾ ಪಿ. ನಾಯಕ್ ಅವರು 2013 ರ  ನವೆಂಬರ್ 24 ರಂದು ಆಪಲ್ ಮ್ಯಾಕ್ ಬುಕ್ ಪ್ರೋ13 ನ್ನು ಆಸ್ಟ್ರೇಲಿಯಾದ ಕರೆನ್ಸಿ $1,714 ನೀಡಿ ಖರೀದಿಸಿದ್ದರು. ಒಂದು ವರ್ಷ ಅಂತಾರಾಷ್ಟ್ರೀಯ ವಾರೆಂಟಿ ಅವಧಿ ಬಾಕಿ ಇರುವಾಗಲೇ, ಖರೀದಿಸಿದ 8 ತಿಂಗಳಿಗೆ ಲ್ಯಾಪ್ ಟಾಪ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಮೊದಲ ಬಾರಿಗೆ ಸಮಸ್ಯೆ ಕಾಣಿಸಿಕೊಂಡಾಗ 2014  ರ ಆಗಸ್ಟ್ 16 ರಂದು ದುರಸ್ತಿ ಮಾಡಿಸಲಾಗಿತ್ತು. ಆದರೆ ನಾಲ್ಕೇ ದಿನಗಳಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿತ್ತು. ಲ್ಯಾಪ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರ ಬಗ್ಗೆ ಸಂಸ್ಥೆಗೆ 17 ಮೇಲ್ ಗಳನ್ನು ಕಳಿಸಿದ್ದರಾದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಗಾಲಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಸಮರಕ್ಕೆ ಮುಂದಾಗಿದ್ದ ನೀನಾ ಪಿ ನಾಯಕ್, ಲ್ಯಾಪ್ ಟಾಪ್ ಬದಲಾವಣೆ ಜೊತೆಗೆ 2.40 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com