ಸಾಂದರ್ಭಿಕ ಚಿತ್ರ
ರಾಜ್ಯ
ಸಿಗ್ನಲ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ
ಸಿಗ್ನಲ್ ಜಂಪ್ ಮಾಡುವ, ಬಿಳಿ ಗೆರೆಯ ಮೇಲೆ ನಿಲ್ಲುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು...
ಬೆಂಗಳೂರು: ಸಿಗ್ನಲ್ ಜಂಪ್ ಮಾಡುವ, ಬಿಳಿ ಗೆರೆಯ ಮೇಲೆ ನಿಲ್ಲುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ನಿನ್ನೆ ಟ್ವೀಟ್ ಮಾಡಿ, ಗೆರೆಯ ಮೇಲೆ ವಾಹನ ನಿಲ್ಲಿಸುವವರು ಮತ್ತು ಸಿಗ್ನಲ್ ಜಂಪ್ ಮಾಡಿ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ ಎಂದರು.
ಬೆಂಗಳೂರು ಟ್ರಾಫಿಕ್ ಪೊಲೀಸರ ದಾಖಲೆಗಳ ಪ್ರಕಾರ, 2014ರಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ ಓಡುವವರ ಸಂಖ್ಯೆ 6.88.027 ಇದ್ದರೆ 2016ರಲ್ಲಿ 7,22,738 ಆಗಿದೆ. ಇದರರ್ಥ ಕಳೆದ ವರ್ಷ ಸರಾಸರಿ 1,980 ಸಿಗ್ನಲ್ ಜಂಪ್ ಪ್ರಕರಣಗಳು ಕಳೆದ ವರ್ಷ ದಾಖಲಾಗಿವೆ.
ಹಲವು ವಾಹನ ಸಂಚಾರರು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಯ ಕ್ರಮವನ್ನು ಸ್ವಾಗತಿಸಿದೆ. ಖಾಸಗಿ ಟ್ಯಾಕ್ಸಿ ಚಾಲಕರು, ಬಿಎಂಟಿಸಿ ಚಾಲಕರು ಹೆಚ್ಚಾಗಿ ಸಂಚಾರ ನಿಯಮವನ್ನು ಉಲ್ಲಂಘಿಸುತ್ತಾರೆ. ವಾಹನ ಚಾಲಕರಿಗೆ ಕಾಯುವ ವ್ಯವಧಾನ, ತಾಳ್ಮೆ ಇಲ್ಲವಾಗಿದೆ ಎನ್ನುತ್ತಾರೆ ಪ್ರಯಾಣಿಕರು.

