ಸಾಂದರ್ಭಿಕ ಚಿತ್ರ
ರಾಜ್ಯ
ನಕಲು ಆರೋಪದಡಿ ಸಿಲುಕಿರುವ ಕಾಲೇಜುಗಳಿಗೆ ಪ್ರವೇಶ ನಿರಾಕರಿಸಿದ ಕೇಂದ್ರ ಪ್ರವೇಶ ಘಟಕ
ಮೋಸ, ನಕಲು ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐನ...
ಬೆಂಗಳೂರು: ಮೋಸ, ನಕಲು ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗ ಕೇಸು ದಾಖಲಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಿಕ್ಷಕ ತರಬೇತಿ ಸಂಸ್ಥೆಗೆ ಪ್ರವೇಶಾತಿಯನ್ನು ತಡೆಹಿಡಿದಿದೆ.
ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮೂರು ಶಿಕ್ಷಣ ಸಂಸ್ಥೆಗಳು ತರಗತಿಗಳನ್ನು ನಡೆಸಬಾರದು ಎಂದು ಕೇಂದ್ರ ಪ್ರವೇಶ ಘಟಕ(ಸಿಎಸಿ) ಘೋಷಿಸಿದೆ. 2016-17ನೇ ಸಾಲಿನ ಬಿ.ಎಡ್ ಕೋರ್ಸ್ ಗಳಿಗೆ ಪ್ರವೇಶಗಳು ಈಗಾಗಲೇ ಆರಂಭವಾಗಿದ್ದು ಇದೀಗ ಈ ಸಂಸ್ಥೆಗಳಿಗೆ ಪ್ರವೇಶವನ್ನು ರದ್ದುಪಡಿಸಲಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸಿಎಸಿ ಅಧಿಕಾರಿಗಳು, ಈ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ರದ್ದುಪಡಿಸುವಂತೆ ನಾವು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮೂರು ಕಾಲೇಜುಗಳಲ್ಲಿ ಪ್ರವೇಶ ಟಿಕೆಟ್ ಗಳನ್ನು ನೀಡಬಾರದು ಎಂದು ಹೇಳಲಾಗಿದೆ. ಈಗಾಗಲೇ ಸೀಟುಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಬೇರೆ ಕಾಲೇಜಿನಲ್ಲಿ ಸೀಟು ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ 21 ಶಿಕ್ಷಕ ತರಬೇತಿ ಸಂಸ್ಥೆಗಳ ವಿರುದ್ಧ ಸಿಬಿಐ ಕ್ರಿಮಿನಲ್ ಕೇಸು ಹಾಕಿದೆ. ಅವುಗಳಲ್ಲಿ 4 ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿವೆ.
ಕರ್ನಾಟಕ ರಾಜ್ಯದಲ್ಲಿ 400 ಬಿಎಡ್ ಕಾಲೇಜುಗಳಿದ್ದು ಇಲ್ಲಿ 17,500 ಸೀಟುಗಳಿವೆ.