ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ವಾಹನ ತಡೆದು ಮೇಲೆ ಹತ್ತಲು ಯತ್ನಿಸಿದ ಸಿಂಹ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸೋಮವಾರ ಸಿಂಹವೊಂದು ಸಫಾರಿಗೆ ತೆರಳಿದ್ದ ಇನ್ನೋವಾ ವಾಹನವನ್ನು ತಡೆಯೊಡ್ಡಿ ತನ್ನ ತುಂಟಾಟವನ್ನು ಮೆರೆದಿದೆ. ..
ಇನ್ನೋವಾ ಮೇಲೆ ಹತ್ತಲು ಯತ್ನಿಸುತ್ತಿರುವ ಸಿಂಹ
ಇನ್ನೋವಾ ಮೇಲೆ ಹತ್ತಲು ಯತ್ನಿಸುತ್ತಿರುವ ಸಿಂಹ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸೋಮವಾರ ಸಿಂಹವೊಂದು ಸಫಾರಿಗೆ ತೆರಳಿದ್ದ ಇನ್ನೋವಾ ವಾಹನವನ್ನು ತಡೆಯೊಡ್ಡಿ ತನ್ನ ತುಂಟಾಟವನ್ನು ಮೆರೆದಿದೆ. ಇನ್ನೋವಾ ಗಾಡಿಯ ಮೇಲೆ ಒಂದು ಸಿಂಹ ಎರಗಿ ಮತ್ತೊಂದು ವಾಹನದ ಮುಂದೆ ನಿಂತು ಸ್ವಲ್ಪಕಾಲ ಅಡ್ಡಗಟ್ಟಿತ್ತು.

ಮೊನ್ನೆ ಸಫಾರಿಗೆ ತೆರಳಿದ್ದ ವಾಹನವನ್ನು ಸಿಂಹ ತಡೆದಿತ್ತು. ಇನ್ನು ಕಾರಿನಲ್ಲಿದ್ದ ಪ್ರವಾಸಿಗರು  ಸಿಂಹವನ್ನು ಹತ್ತಿರದಿಂದ ನೋಡಿ ಗಾಬರಿಗೊಂಡಿದ್ದರು.

ಸಿಂಹ ಇನ್ನೋವಾ ಕಾರಿನ ಮೇಲೆ ಎರಗಿ ಘರ್ಜಿಸಿದೆ. ಇನ್ನೋವಾ ವಾಹನಕ್ಕೆ ಯಾವುದೇ ಸೇಫ್ಟಿ ಇರದ ಕಾರಣ ಸಿಂಹಕ್ಕೆ ಕಾರಿನ ಗಾಜು ಒಡೆಯುವುದು ಕಷ್ಟವೇನು ಇರಲಿಲ್ಲ. ಇದರಿಂದ ವಾಹನದಲ್ಲಿದ್ದ ಪ್ರವಾಸಿಗರು ಕೆಲಕಾಲ ಗಾಬರಿಗೊಂಡು ಜೀವ ಉಳಿಸಿಕೊಂಡು ವಾಪಸ್ಸಾಗಿದ್ದಾರೆ. ಇಷ್ಟು ದುಡ್ಡು ಕೊಟ್ಟು ವಿಐಪಿ ಗಾಡಿಯಲ್ಲಿ ಹೋದರೂ ತಮಗೆ ಯಾವುದೇ ರಕ್ಷಣೆ ಇಲ್ಲ ಎಂದು ಪ್ರವಾಸಿಗರು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬನ್ನೇರುಘಟ್ಟ ಪಾರ್ಕಿನಲ್ಲಿ ಹುಲಿ ಮತ್ತು ಸಿಂಹಗಳನ್ನು ನೋಡಲು ಪಾರ್ಕಿನ ವಿಶೇಷ ಬಸ್‍ನಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಾರೆ. ಪ್ರವಾಸಿಗರಿಗೆ ಮತ್ತಷ್ಟು ಸಂತೋಷ ನೋಡಲು ವಿಐಪಿ ವಾಹನ ಇನ್ನೋವಾ ವಾಹನವನ್ನು ಕೂಡ ಸಫಾರಿಗೆ ಬಳಸಿಕೊಳ್ಳುತ್ತಾರೆ.

ಕಳೆದ ಕೆಲವು ತಿಂಗಳುಗಳಿಂದ ಇದು ಮೂರನೇ ಬಾರಿಗೆ ಸಿಂಹ ಸಫಾರಿ ವಾಹನವನ್ನು ಅಡ್ಡಗಟ್ಟಿದೆ, ಕಳೆದ ವರ್ಷ ಸೆಪ್ಟಂಬರ್ ಮತ್ತು ಡಿಸೆಂಬರ್ ನಲ್ಲಿ ಇಂಥಹುದ್ದೇ ಪ್ರಕರಣಗಳು ನಡೆದಿದ್ದವು.

ಎರಡು ಹುಲಿಗಳು ಇನ್ನೋವಾ ವಾಹನವನ್ನು ಹಿಂಬಾಲಿಸಿ ಅದರ ಮೇಲೆ ಹತ್ತಲ ಪ್ರಯತ್ನಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇನ್ನೋವಾ ವಾಹನ ಚಾಲಕ ರಮೇಶ್ ನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಬನ್ನೇರುಘಟ್ಟ ಕಾರ್ಯಕಾರಿ ನಿರ್ದೇಶಕ ಸಂತೋಷ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com