ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೆಪ್ಟೆಂಬರ್ ಗೆ ಮುನ್ನ ಜಿಎಸ್ ಟಿಯನ್ನು ಅಳವಡಿಸಲು ಸಾಧ್ಯವಿಲ್ಲ: ಅಂಗಡಿ ಮಾಲೀಕರು

ಹೊಸ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆಯಿಂದ ನೆರೆಹೊರೆಯ ಸಣ್ಣ ಅಂಗಡಿಗಳಿಗೆ...
ಬೆಂಗಳೂರು: ಹೊಸ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆಯಿಂದ ನೆರೆಹೊರೆಯ ಸಣ್ಣ ಅಂಗಡಿಗಳಿಗೆ ಸಮಸ್ಯೆಯಾಗಿರಬಹುದು. ಇವರ ಬಳಿ ಇದಕ್ಕಿಂತ ಮೊದಲು ತೆರಿಗೆದಾರ ಗುರುತಿನ ಸಂಖ್ಯೆ ಕೂಡ ಇರಲಿಲ್ಲ. ಇನ್ನು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ಗಳು ಕೂಡ ನಿನ್ನೆ ಜಿಎಸ್ ಟಿಗೆ ವರ್ಗಾಯಿಸಿರಲಿಲ್ಲ.
ಬೆಂಗಳೂರಿನ ಬಿಇಎಂಎಲ್ ಲೇ ಔಟ್ ನ ತುಬರಹಳ್ಳಿಯಲ್ಲಿರುವ ಸೂಪರ್ ಮಾರ್ಕೆಟ್ ಫಾಸೊ ಸೂಪರ್ ಶೊಪ್ಪೆ, ತಮ್ಮ  ಜಿಎಸ್ ಟಿ ಗುರುತು ಸಂಖ್ಯೆಯನ್ನು ಪ್ರವೇಶ ದ್ವಾರದಲ್ಲಿ ಎಲ್ಲರಿಗೂ ಕಾಣುವಂತೆ ಹಾಕಿದ್ದರು. ಆದರೂ ಕೂಡ ಗ್ರಾಹಕರ ಮೇಲೆ ಶೇಕಡಾ 5.5ರಷ್ಟು ವ್ಯಾಟ್ ನ್ನು ಹಾಕುತ್ತಿದ್ದಾರೆ. ಕಡ್ಡಾಯ ವ್ಯವಹಾರ ಇನ್ವಾಸ್ಸಸ್ ಗಳನ್ನು ಸಲ್ಲಿಸಲು ನಮಗೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಕೇವಲ ನಾವು ಮಾತ್ರವಲ್ಲದೆ ಯಾರೂ ಕೂಡ ಸೆಪ್ಟೆಂಬರ್ ಗೆ ಮುನ್ನ ಸಲ್ಲಿಸುವುದಿಲ್ಲ. ಇದನ್ನು ನಾವು ರಾತ್ರಿ ಬೆಳಗಾಗುವುದರೊಳಗೆ ಮಾಡಲು ಸಾಧ್ಯವಿಲ್ಲ ಎಂದು ಸೂಪರ್ ಮಾರ್ಕೆಟ್ ನಲ್ಲಿರುವ ನೌಕರರೊಬ್ಬರು ಹೇಳುತ್ತಾರೆ.
ಸೂಪರ್ ಮಾರ್ಕೆಟ್ ನ ಪಕ್ಕದಲ್ಲಿರುವ ಕಾಫಿ ಬೀನ್ ಬೇಕ್ 'ಎನ್' ಬೇಕರಿಯಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಸಿಗುವ ತಿನಿಸುಗಳು ಇಲ್ಲಿ ಕೂಡ ಸಿಗುತ್ತವೆ.ಯಾರೂ ಕೂಡ ತಪಾಸಣೆ ಮಾಡುತ್ತಾರೆ ಎಂದು ನಮಗನಿಸುವುದಿಲ್ಲ. ಮೂರು ತಿಂಗಳ ಹಿಂದೆಯಷ್ಟೇ ನಮಗೆ ವ್ಯಾಪಾರ ಅನುಮತಿ ಸಿಕ್ಕಿತು. ಇದೀಗ ಅದರ ನವೀಕರಣಕ್ಕೆ ಅಧಿಕಾರಿಗಳ ಬಳಿಗೆ ಹೋಗುತ್ತೇವೆ. ಆಗ ಅವರು ಜಿಎಸ್ ಟಿಐಎನ್ ಕೇಳಲು ಸಾಧ್ಯವೇ? ಕೇಳಿದರೆ ನಾವು ನೋಂದಣಿ ಮಾಡಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಮಾಡಿಸುವುದಿಲ್ಲ, ಏಕೆಂದರೆ ನಾವು ಗ್ರಾಹಕರಿಗೆ ಬಿಲ್ ಗಳನ್ನು ಬರೆದು ಕೊಡಬೇಕು. ಈಗ ಯಾರೂ ಬಿಲ್ ಕೇಳುವುದಿಲ್ಲ ಎಂದು ಬೇಕರಿ ಮಾಲೀಕರು ಹೇಳುತ್ತಾರೆ.
ಮಹಾ ಬಜಾರ್ ಎಂಬ ಇನ್ನೊಂದು ಸೂಪರ್ ಮಾರ್ಕೆಟ್ ನಗರದಲ್ಲಿ 19 ಶಾಖೆಗಳನ್ನು ಒಳಗೊಂಡಿದೆ. ಮಾರತಹಳ್ಳಿಯಲ್ಲಿರುವ ಶಾಖೆಯಲ್ಲಿ ನಿನ್ನೆ ವ್ಯಾಟ್ ಇನ್ನೂ ಕೂಡ ಇತ್ತು. ಜಿಎಸ್ ಟಿಗೆ ನಮ್ಮಲ್ಲಿ ಸಾಫ್ಟ್ ವೇರ್ ಇಲ್ಲ. ಆದರೂ ಜಿಎಸ್ ಟಿಐಎನ್ ನಮ್ಮಲ್ಲಿದೆ ಎಂದು ಖರೀದಿ ವಿಭಾಗದ ಮ್ಯಾನೇಜರ್ ಅಕ್ಬರ್ ಆರ್ ಹೇಳುತ್ತಾರೆ.
ಟಾಸ್ಕರ್ ಟೌನ್ ನ ಚಿನ್ನಸಾಮಿ ಮುದಲಿಯಾರ್ ರಸ್ತೆಯಲ್ಲಿರುವ ಪೀಕೆ ಹೋಮ್ ನೀಡ್ಸ್ ಶೇಕಡಾ 14.5 ತೆರಿಗೆ ಹಾಕಿದೆ. ಟಿನ್ ಸಂಖ್ಯೆಯನ್ನು ಹೊಂದಿರುವ ಈ ಅಂಗಡಿ ಜಿಎಸ್ ಟಿ ಹಾಕುವುದನ್ನು ಆರಂಭಿಸಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com