ಮಿಸಸ್ ಗ್ಲೋಬ್-2017 ಕಿರೀಟ ತೊಟ್ಟ ಬೆಂಗಳೂರಿನ ವೀಣಾ ಜೈನ್

ಮಿಸಸ್.ಇಂಡಿಯಾ ಬ್ಯೂಟಿ ಕ್ವೀನ್ ಕ್ಲಾಸಿಕ್ ವಿಜೇತೆ ವೀಣಾ ಜೈನ್, ಲಾಸ್ ವೇಗಾಸ್ ನಲ್ಲಿ ನಡೆದ ಮಿಸಸ್...
ಶ್ರೀಮತಿ ಗ್ಲೋಬ್ 2017 ರಲ್ಲಿ ಅತ್ಯುತ್ತಮ ಮಾತುಗಾರ್ತಿ ಕಿರೀಟ ಧರಿಸಿದ
ಶ್ರೀಮತಿ ಗ್ಲೋಬ್ 2017 ರಲ್ಲಿ ಅತ್ಯುತ್ತಮ ಮಾತುಗಾರ್ತಿ ಕಿರೀಟ ಧರಿಸಿದ
ಬೆಂಗಳೂರು: ಮಿಸಸ್.ಇಂಡಿಯಾ ಬ್ಯೂಟಿ ಕ್ವೀನ್ ಕ್ಲಾಸಿಕ್ ವಿಜೇತೆ ವೀಣಾ ಜೈನ್, ಲಾಸ್ ವೇಗಾಸ್ ನಲ್ಲಿ ನಡೆದ ಮಿಸಸ್ ಗ್ಲೋಬ್ 2017 ರಲ್ಲಿ ಅತ್ಯುತ್ತಮ ವಾಗ್ಮಿ ಪ್ರಶಸ್ತಿ ಪಡೆದಿದ್ದಾರೆ. ಈ ಸ್ಪರ್ಧೆ ಕಳೆದ ತಿಂಗಳು 19ರಿಂದ 25ರವರೆಗೆ ನಡೆದಿತ್ತು.
ಮಿಸಸ್ ಗ್ಲೋಬ್ ಕ್ಲಾಸಿಕ್ , 50 ವರ್ಷದ ಆಸುಪಾಸಿನಲ್ಲಿರುವ ಮದುವೆಯಾಗಿ ಮಕ್ಕಳಿರುವ ಮಹಿಳೆಯರಿಗೆ ನಡೆಯುವ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಾಗಿದೆ. ವರ್ಷಕ್ಕೆ ಒಂದು ಬಾರಿ ಈ ಸ್ಪರ್ಧೆ ನಡೆಯುತ್ತದೆ.
ಸ್ಪರ್ಧಿಗಳಿಗೆ ಮಾತನಾಡಲು ವಿಷಯವನ್ನು ನೀಡಲಾಗುತ್ತದೆ. ನಿಮ್ಮ ಹ್ಯಾಶ್ ಟಾಗ್ ಏನು ಎಂಬ ವಿಷಯದಲ್ಲಿ ವೀಣಾ ಜೈನ್ ಮಾತನಾಡಿದ್ದಕ್ಕೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ಅವರ ಹ್ಯಾಶ್ ಟಾಗ್ ಏನೆಂದು ಕೇಳಿದ್ದಕ್ಕೆ ವೀಣಾ ಜೈನ್, ಎರಡು ವಿಷಯಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ನಾವು ಜೀವಿಸುವುದು ಮತ್ತು ಪರರನ್ನು ಜೀವಿಸಲು ಬಿಡುವುದು. ಇಂದಿನ ಜೀವನವನ್ನು ನಾನು ಶಾಂತಿಯುತವಾಗಿ ಕಳೆಯಲು ಬಯಸುತ್ತೇನೆ. ಕಳೆದು ಹೋದ ದಿನವನ್ನು ಮರೆತು ತಪ್ಪನ್ನು ಕ್ಷಮಿಸಿ ಬದುಕಿನಲ್ಲಿ ಮುಂದುವರಿಯಬೇಕು ಎಂಬುದರಲ್ಲಿ ನಂಬಿಕೆಯಿದೆ. ಭಾಷಣ ಮಾಡುವಾಗ ನಾನು ತಮಾಷೆ ಮಾಡುತ್ತಿದ್ದೆ ಎಂದು ವೀಣಾ ಹೇಳುತ್ತಾರೆ .
ಈ ಪ್ರಶಸ್ತಿಯನ್ನು ಅವರೆಂದೂ ನಿರೀಕ್ಷಿಸಿರಲಿಲ್ಲ. ಖಾಲಿ ಕೈಯಿಂದ ಮರಳಲಿಲ್ಲವೆಂದು ನನಗೆ ಖುಷಿಯಿದೆ. ನನಗೆ ಒಂದು ಕಿರೀಟ ಸಿಕ್ಕಿದೆ. ನಾನು ಟಾಪ್ 10 ಸ್ಪರ್ಧಿಗಳ ಪೈಕಿ ಒಬ್ಬಳಾಗಿದ್ದೆ. ಮಿಸಸ್ ಗ್ಲೋಬ್ ಕ್ಲಾಸಿಕ್ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ ಮೊದಲ ಸ್ಪರ್ಧಿ ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತಿದೆ. ಅಲ್ಲಿ ಸ್ಪರ್ಧಿಸಿದ ಬೇರೆ ಬೇರೆ ದೇಶಗಳ ಸ್ಪರ್ಧಿಗಳ ಸಂಸ್ಕೃತಿ ವೈವಿಧ್ಯವಾಗಿದ್ದರೂ ಎಲ್ಲಾ ಸ್ಪರ್ಧಿಗಳು ಸಮಾನ ಮನೋಭಾವ ಹೊಂದಿದ್ದರು.
ನಾವು ಪರಸ್ಪರ ಶುಭಾಶಯ ತಿಳಿಸುತ್ತಿದ್ದೆವು. ಪ್ರತಿಯೊಬ್ಬ ಸ್ಪರ್ಧಿಯೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಿದ್ದರು. ಅಮೆರಿಕಾದ ರೆನೆ ಎಂಬ ಮಹಿಳೆ ನನಗೆ ಸ್ಪರ್ಧೆ ನೀಡಿದರು.
ಬದಲಾವಣೆ ಬಯಸುವ  ದೇಶದಿಂದ ಬಂದಿದ್ದಾರೆ, ಹಾಗಾಗಿ ಅವರಿಲ್ಲಿದ್ದಾರೆ ಎಂದು ಅಮೆರಿಕಾ ಮಹಿಳೆ ಹೇಳಿರುವುದಾಗಿ ವೀಣಾ ಹೇಳಿದರು.
ಸ್ಪರ್ಧೆ ಮುಗಿದು ಸ್ವದೇಶಕ್ಕೆ ಮರಳಿದ ವೀಣಾ ಜೈನ್ ಇನ್ನು ಕೂಡ ಸಹ ಸ್ಪರ್ಧಿಗಳ ಜೊತೆ ಸಂಪರ್ಕದಲ್ಲಿದ್ದಾರೆ.  ನಮ್ಮ ಬಾಂಧವ್ಯ ಗಟ್ಟಿಯಾಗಿತ್ತು. ಒಂದೇ ವಯಸ್ಸಿನವರಾಗಿದ್ದರಿಂದ ನಮಗೆ ಇದು ಸಾಧ್ಯವಾಯಿತು. ನನಗೆ ಹೊಸ ಸ್ನೇಹಿತರು ಸಿಕ್ಕಿದರು ಎನ್ನುತ್ತಾರೆ.
ಸ್ಪರ್ಧೆಯ ವಿರಾಮದ ವೇಳೆ ಇತರ ಸ್ಪರ್ಧಿಗಳೊಂದಿಗೆ ವೀಣಾ ಹೊರಗೆ ಸುತ್ತಾಡಲು ಹೋಗಿದ್ದರಂತೆ. ಸ್ಪರ್ಧೆ ಮುಗಿದ ನಂತರ ಮೂರು ದಿನ ಅಲ್ಲಿದ್ದೆ. ಆ ನಗರ ತುಂಬಾ ಸುಂದರವಾಗಿದೆ. ಅಲ್ಲಿ ನಗದಿಗಿಂತ ಹೆಚ್ಚು ಕ್ರೆಡಿಟ್ ಕಾರ್ಡುಗಳನ್ನು ಬಳಸುತ್ತಾರೆ. ಟ್ಯಾಕ್ಸಿ ಡ್ರೈವರ್ ಗಳು ಕೂಡ. ಅದೊಂದು ಅದ್ಭುತ ಅನುಭವ ಎಂದು ವೀಣಾ ಖುಷಿಯಿಂದ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com