ಭದ್ರಾ ಮೇಲ್ಡಂಡೆ ಯೋಜನೆಗೆ ಶೀಘ್ರವೇ ಹಸಿರು ನಿಶಾನೆ

ಬರಪೀಡಿತ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರುಗಳಿಗೆ ನೀರುಣಿಸುವ ಭದ್ರಾ ಮೇಲ್ಡಂಡೆ ಯೋಜನೆ ಅಂತಿಮ ಹಂತ ತಲುಪಿದ್ದು, ರಾಜ್ಯ ಅರಣ್ಯ ...
ಭದ್ರಾ ಮೇಲ್ದಂಡೆ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆ
ಬೆಂಗಳೂರು: ಬರಪೀಡಿತ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರುಗಳಿಗೆ ನೀರುಣಿಸುವ ಭದ್ರಾ ಮೇಲ್ಡಂಡೆ ಯೋಜನೆ ಅಂತಿಮ ಹಂತ ತಲುಪಿದ್ದು, ರಾಜ್ಯ ಅರಣ್ಯ ಇಲಾಖೆಯ ಅನುಮೋದನೆ ನಂತರ ಗ್ರೀನ್ ಕ್ಲಿಯರೆನ್ಸ್ ಗಾಗಿ ಕಾಯುತ್ತಿದೆ.
ಕಳೆದ ಮೂರು ದಶಕಗಳ ನಂತರ ಹಲವಾರು ಮಾರ್ಪಾಡುಗಳ ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಟ್ಯಾಂಡಿಂಗ್ ಸಮಿತಿ ಮುಂದೆ ಬಂದಿದೆ.
ಜೂನ್ ನಿಂದ ಅಕ್ಟೋಬರ್ ತಿಂಗಳು ಅಂದರೆ ಮುಂಗಾರು ವೇಳೆಯಲ್ಲಿ  ಭದ್ರಾ ಜಲಾಶಯದಿಂದ ನೀರನ್ನು ಹರಿಸುವುದು ಯೋಜನೆ ಉದ್ದೇಶವಾಗಿದೆ.
ಶಿವಮೊಗ್ಗ ಜಿಲ್ಲೆ ಕೊಪ್ಪ ವಿಭಾಗದ ಆರಂಭಳ್ಳಿ ರಾಜ್ಯ ಅರಣ್ಯ ಮತ್ತು ಮುತ್ತಿನಕೊಪ್ಪ ಕಿರು ಅರಣ್ಯ ಭೂಮಿ ವ್ಯಾಪ್ತಿಯಲ್ಲಿ ಮೊದಲ ಪ್ಯಾಕೇಜ್ 1ರ ಅಡಿಯಲ್ಲಿ ನೀರಾವರಿ ಕಾಲುವೆ ನಿರ್ಮಿಸಲು 96.65 ಹೆಕ್ಟೇರ್ ಭೂಮಿ ಗುರುತಿಸಲಾಗಿದೆ.
ಭದ್ರಾವತಿ ವಿಭಾಗದಲ್ಲಿ ಪ್ಯಾಕೇಜ್ 2ರ ಅಡಿಯಲ್ಲಿ,  ಏತ ನೀರಾವರಿಗಾಗಿ ಕಾಲುವೆ ನಿರ್ಮಾಣಕ್ಕಾಗಿ 110.10 ಹೇಕ್ಟೇರ್ಭೂಮಿ ಅವಶ್ಯಕತೆಯಿದೆ.
ವನ್ಯಜೀವಿ ಮುಖ್ಯ ವಾರ್ಡನ್ ಅರಣ್ಯ ಇಲಾಖೆ, ವನ್ಯಜೀವಿ ತಜ್ಞರು ಸೇರಿದಂತೆ ಮತ್ತಿತರರ ಜೊತೆ ಸಮಾಲೋಚಿಸಿ, ಪರಿಷ್ಕರಿಸಿದ ಯೋಜನೆಯನ್ನು ಷರತ್ತಿನೊಂದಿಗೆ ಅನುಮೋದಿಸಲು ಶಿಪಾರಸು ಮಾಡಿದ್ದಾರೆ. 
ಇದನ್ನು ಹೊರತು ಪಡಿಸಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ ಕೂಡ ಯೋಜನೆಗೆ ಶಿಫಾರಸು ಮಾಡಿದ್ದು, ಪ್ರಮಾಣ ತಗ್ಗಿಸುವಂತೆ ಸಲಹೆ ನೀಡಿದೆ, ಭದ್ರಾ ಹುಲಿ ಮೀಸಲು ಅರಣ್ಯದೊಳಗೆ ಕಾಲುವೆ  ನಿರ್ಮಾಣ ಮಾಡುವಾಗ ಅರಣ್ಯ ಇಲಾಖೆ ಮತ್ತು ಯೂಸರ್ ಎಜೆನ್ಸಿಯಿಂದ ತೊಂದರೆಯಾಗುವ ಸಾಧ್ಯತೆಯಿದೆ.
ಕಳೆದ ಮೂರು ದಶಕಗಳಿಂದ ಭದ್ರಾ ಮೇಲ್ದಂಡೆ ಯೋಜನೆಯನ್ನು ವೃಥಾ ಎಳೆಯಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಭದ್ರಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದಾಗಿದೆ, ಈ ಅಣೆಕಟ್ಟು ನಿರ್ಮಾಣದಿಂದ 17.4 ಟಿಎಂಸಿ, ನೀರು ಸಂಗ್ರಹಿಸಬಹುದಾಗಿದೆ. ತುಂಗಾ ನದಿಯಿಂದ ಏತ ನೀರಾವರಿಗಾಗಿ 29.9 ಟಿಎಂಸಿ ಅಡಿ ನೀರು  ಹರಿಸಬಹುದಾಗಿದೆ. ಇದರಿಂದ 2.25 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಪ್ರಯೋಜನವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com