ಸ್ಯಾನಿಟರಿ ಪ್ಯಾಡ್ ಘಟಕಗಳನ್ನು ಸ್ಥಾಪಿಸುವಂತೆ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಆದೇಶ

ಪರಿಸರ ಸ್ನೇಹಿ ನೈರ್ಮಲ್ಯ ಪ್ಯಾಡ್ ವಿತರಣಾ ಘಟಕಗಳನ್ನು ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಮಹಿಳಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪರಿಸರ ಸ್ನೇಹಿ ನೈರ್ಮಲ್ಯ ಪ್ಯಾಡ್ ವಿತರಣಾ ಘಟಕಗಳನ್ನು ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಮಹಿಳಾ ಹಾಸ್ಟೆಲ್ ಗಳಲ್ಲಿ ಕಡ್ಡಾಯವಾಗಿ ಸ್ಥಾಪಿಸುವಂತೆ ಯುಜಿಸಿ ಸುತ್ತೋಲೆ ಹೊರಡಿಸಿದೆ. ಇದು ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿದೆ.
ಎಲ್ಲಾ ವಿಶ್ವವಿದ್ಯಾಲಯಗಳು ವಿತರಣಾ ಯಂತ್ರಗಳನ್ನು ಮತ್ತು ಹೆಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ ನಿಂದ ತಯಾರಿಸಲ್ಪಟ್ಟ ಭಸ್ಮೀಕರಣಕ ಯಂತ್ರವನ್ನು ಖರೀದಿಸಬೇಕು ಎಂದು ಸುತ್ತೋಲಯಲ್ಲಿ ತಿಳಿಸಲಾಗಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳು ಇದನ್ನು ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ತಿಳಿಸಬೇಕೆಂದು ಆದೇಶ ನೀಡಿದೆ.
ಯಂತ್ರಗಳನ್ನು ನಿಯೋಜಿಸಲು ತಗಲುವ ವೆಚ್ಚವನ್ನು ಸ್ವಚ್ಛ ಭಾರತ್ ಅಭಿಯಾನದಡಿ ಘನ ತ್ಯಾಜ್ಯ ನಿರ್ವಹಣೆ ಘಟಕದಡಿ ಭರಿಸಲಾಗುವುದು. ಒಂದು ಯಂತ್ರದ ಬೆಲೆ ಸುಮಾರು 49,646 ರೂಪಾಯಿ ಇದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಕೆಟ್ಟು ಹೋಗಿರುವ ಬೆಂಗಳೂರು ವಿ.ವಿ ವಿತರಣಾ ಘಟಕ: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನ ಮಹಿಳಾ ಹಾಸ್ಟೆಲ್ ನ ಆವರಣದಲ್ಲಿರುವ ವೆಂಡಿಂಗ್ ಮೆಷಿನ್ ಕೆಟ್ಟು ಹೋಗಿದೆ.  ನಾವು ಹೊಸ ಯಂತ್ರ ಖರೀದಿಸುತ್ತೇವೆ ಆದರೆ ವಿದ್ಯಾರ್ಥಿಗಳು  ಕೂಡ ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com