ಮಾಳವಿಕಾ ಅವಿನಾಶ್(ಎಡ ಚಿತ್ರದಲ್ಲಿ)
ರಾಜ್ಯ
ಪ್ಯಾಡ್ ಬಿಟ್ಟು ಬಟ್ಟೆ ಬಳಸಿ ಎಂದು ನಾನು ಹೇಳಿಲ್ಲ, ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗಿರಬೇಕು: ಮಾಳವಿಕಾ ಅವಿನಾಶ್
ಸ್ಯಾನಿಟರಿ ಪ್ಯಾಡ್ ಮೇಲೆ ಶೇಕಡಾ 12ರಷ್ಟು ಜಿಎಸ್ ಟಿ ಬಗ್ಗೆ ನೀಡಿದ ಹೇಳಿಕೆಯಿಂದ ಸಾಮಾಜಿಕ...
ಬೆಂಗಳೂರು: ಸ್ಯಾನಿಟರಿ ಪ್ಯಾಡ್ ಮೇಲೆ ಶೇಕಡಾ 12ರಷ್ಟು ಜಿಎಸ್ ಟಿ ಬಗ್ಗೆ ನೀಡಿದ ಹೇಳಿಕೆಯಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ, ಚರ್ಚೆಗೆ ಗುರಿಯಾಗಿದ್ದ ನಟಿ, ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ತಮ್ಮ ಫೇಸ್ ಬುಕ್ ಪುಟದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನೆಲ್ಲೂ, ಎಂದೂ, ಬಟ್ಟೆಗೆ ಮರುಕಳಿಸೋಣ ಎಂದೋ, ಪ್ಯಾಡ್ಸ್ ಗಳನ್ನು ಬಳಸಬಾರದು ಎಂದೋ ಹೇಳಿಲ್ಲ. ನಾನೂ ಒಬ್ಪ ಹುಡುಗಿಯಾಗಿ, ಮಹಿಳೆಯಾಗಿ ಪ್ಯಾಡ್ಸನ್ನು ಬಳಸಿದ್ದೇನೆ. ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗಿರಬೇಕೆಂಬುದು ನನ್ನ ನಂಬಿಕೆ. ಬಳಕೆಯಾದ ಪ್ಯಾಡ್ಸ್ ಗಳ ತ್ಯಾಜ್ಯ ನಿರ್ವಹಣೆಯೂ ಒಂದು ಸಮಸ್ಯಯಾಗಿದೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜುಲೈ 1ರಂದು ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆಯ ಐಷಾರಾಮಿ ವಸ್ತುಗಳ ವಿಭಾಗಕ್ಕೆ ಸ್ಯಾನಿಟರಿ ಪ್ಯಾಡ್ ಗಳನ್ನು ಒಳಪಡಿಸಿದ್ದು ಅದಕ್ಕೆ ಶೇಕಡಾ 123ರಷ್ಟು ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಮಹಿಳೆಯರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳೆಯರು ನಾಲ್ಕೈದು ದಿನಗಳ ಹಿಂದೆಯಷ್ಟೇ 'ಡು ನಾಟ್ ಟ್ಯಾಕ್ಸ್ ಮೈ ಪೀರಿಯಡ್ಸ್' (ನನ್ನ ಋತುಸ್ರಾವಕ್ಕೆ ತೆರಿಗೆ ಹಾಕಬೇಡಿ) ಎಂದು ಅಭಿಯಾನ ಆರಂಭಿಸಿದ್ದರು.‘ಸ್ಯಾನಿಟರಿ ಪ್ಯಾಡ್, ಮಹಿಳೆಯರನ್ನು ಶುಚಿಯಾಗಿಡುವ ವಸ್ತುವೇ ವಿನಾ ಐಷಾರಾಮಿ ವಸ್ತುವಲ್ಲ’ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಅಭಿಯಾನ ಇದಾಗಿದೆ.
ಈ ಬಗ್ಗೆ ಬಿಜೆಪಿ ವಕ್ತಾರೆ ಮಾಳವಿಕಾ ನೀಡಿದ ಪ್ರತಿಕ್ರಿಯೆ ಎರಡು ದಿನಗಳ ಹಿಂದೆ ದೈನಿಕವೊಂದರಲ್ಲಿ ಪ್ರಕಟವಾಗಿತ್ತು.
ಅದರಲ್ಲಿ ಮಾಳವಿಕಾ ಅವಿನಾಶ್, ಮುಂದುವರೆದ ರಾಷ್ಟ್ರಗಳಿಗೆ ಬೇಡವಾದ ಸ್ಯಾನಿಟರಿ ಪ್ಯಾಡ್ಸ್‌ಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಮೇಲೆ ಹೇರುತ್ತಿರುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಲಕಾಲದಿಂದ ಬಂದ ಬಟ್ಟೆ, ನಮ್ಮ ತಾಯಂದಿರವರೆಗೆ ಎಲ್ಲರೂ ಬಳಸುತ್ತಿದ್ದ ಬಟ್ಟೆ ಎಲ್ಲದ್ದಕ್ಕಿಂತ ಹೈಜೀನಿಕ್. ಬಟ್ಟೆ ಪ್ರಾಯೋಗಿಕ ಕಾರಣಗಳಿಂದ ಕಷ್ಟವಾಗಿರುವುದರಿಂಕದ ಮುಂದುವರೆದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್‌ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕಾರ್ಪೊರೇಟ್‌ಗಳಿಗೆ ತಮ್ಮ ಪ್ಯಾಡ್ಸ್‌ಗಳನ್ನು ಡಂಪ್ ಮಾಡುವುದಕ್ಕಿನ್ನು ಉಳಿದಿರುವುದು ನಮ್ಮಂಥ ದೇಶ. ಪರಂಪರಾಗತವಾಗಿ ಬಂದಿರುವುದು ಸರಿಯಲ್ಲ, ಪಾಶ್ಚಾತ್ಯ ದೇಶಗಳಿಂದ ಬರುವುದೆಲ್ಲಾ ಸರಿ ಎಂಬ ತಪ್ಪು ತಿಳಿವಳಿಕೆ ನಮಗೆ. 2015-16ರ National Family Health Survey (NFHS) ಪ್ರಕಾರ ಶೇ. 48.5 ಗ್ರಾಮೀಣ, ಶೇ. 77.5 ನಗರ ಅಂದರೆ ಶೇ. 57.6 ಒಟ್ಟೂ ಪ್ಯಾಡ್ಸ್ ಬಳಕೆದಾರರು. ಶೇ.12 ಜಿಎಸ್‌ಟಿಯಿಂದ ಡಿಮಾಂಡ್-ಸಪ್ಲೈ ಆಧಾರಿತವಾದ ಪ್ಯಾಡ್ಸ್ ಬಳಕೆ ಕಡಿಮೆಯಾಗುತ್ತದೆಂಬುದು ಸರಿಯಲ್ಲ, ಹಾಗೇ ಒಂದು ವೇಳೆಯಿದ್ದರೂ ಬೇರೆ ಪರಿಸರಸ್ನೇಹಿ ಪರ್ಯಾಯಗಳಿಗದು ಅನುವು ಮಾಡಿಕೊಡಲಿ ಎಂದು ಹೇಳಿದ್ದರು.
ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯರ ಸಿಟ್ಟು, ಆಕ್ರೋಶವನ್ನು ತಣಿಸಲು ಮತ್ತು ವಿವಾದಕ್ಕೆ ಕೊನೆಯೆಳೆಯಲು ನಿನ್ನೆ ಮಾಳವಿಕಾ ಅವಿನಾಶ್ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅವರ ಸ್ಪಷ್ಟನೆ ಹೀಗಿದೆ:

