ಕೆಂಪೇಗೌಡ ಮೆಟ್ರೊದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ಕಾರಿಡಾರ್ ನಿರ್ಮಾಣ ಶೀಘ್ರದಲ್ಲೆ!

ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಸಂಪರ್ಕಿಸುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಸಂಪರ್ಕಿಸುವ  ಪ್ರಯಾಣಿಕರ ಸಂಚಾರ ಕಾರಿಡಾರ್ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭೂಮಿಯನ್ನು ನೀಡಲಿದೆ. ಮೆಟ್ರೊ, ಬಿಎಂಟಿಸಿ, ಕೆಎಸ್ಆರ್ ಟಿಸಿ ಮತ್ತು ಸಂಚಾರ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಿನ್ನೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸಂಚಾರ ಪೊಲೀಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ವಿಶ್ವನಾಥ್, ಮೆಟ್ರೊ ಮತ್ತು ಬಸ್ ನಿಲ್ದಾಣಕ್ಕೆ ಸಂಪರ್ಕದ ಕೊರತೆಯಿಂದಾಗಿ ಪ್ರಯಾಣಿಕರು ಬಹಳ ಸಮಸ್ಯೆಯನ್ನು  ಅನುಭವಿಸಬೇಕಾಗುತ್ತದೆ. ಕೆಂಪೇಗೌಡ ಮೆಟ್ರೊ ನಿಲ್ದಾಣದ ಪಶ್ಚಿಮ ದಿಕ್ಕಿಗಿರುವ ಪ್ರವೇಶ ದ್ವಾರದ ಒಳಗಿರುವ ಸುರಂಗ ಇಷ್ಟು ದಿನ ಮುಚ್ಚಿತ್ತು. ಅದನ್ನೀಗ ಅನುವು ಮಾಡಿಕೊಡಲಾಗುವುದು. ಮೆಟ್ರೊದ ಸುರಂಗದಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೂಲಕ ಪ್ರಯಾಣಿಕರ ಕಾರಿಡಾರ್ ಹಾದುಹೋಗುತ್ತದೆ. ಅದು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಮತ್ತು ಇನ್ನೊಂದು ಭಾಗದ ಸುರಂಗಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಿದರು.
ಶೀಘ್ರ ಹಾದಿಯ ಈ ಕಾರಿಡಾರ್ ನ್ನು ಇನ್ನು ಮೂರು ತಿಂಗಳೊಳಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬೆಂಗಳೂರು ಮೆಟ್ರೊ ರೈಲು ನಿಗಮ, ನಿರ್ಮಾಣದ ಕಾಮಗಾರಿ ಹೊಣೆ ಹೊತ್ತುಕೊಂಡಿದೆ ಎನ್ನುತ್ತಾರೆ.
ಮೊನ್ನೆ ಜೂನ್ 18ರಂದು ಮೆಟ್ರೊದ ಮೊದಲ ಹಂತ ಸಂಪೂರ್ಣವಾಗಿ ಆರಂಭಗೊಂಡ ನಂತರ ಕೆಂಪೇಗೌಡ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದಟ್ಟವಾಗಿದೆ. ಮೆಟ್ರೊದಿಂದ ಬಸ್ ನಿಲ್ದಾಣಕ್ಕೆ ಮತ್ತು ಬಸ್ ನಿಲ್ದಾಣದಿಂದ ಮೆಟ್ರೊಗೆ ಹೋಗುವ ಪ್ರಯಾಣಿಕರು ಪ್ರಸ್ತುತ ಮಾರ್ಗದ ಫುಟ್ ಪಾತ್ ನ್ನು ಬಳಸುತ್ತಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಬಸ್ ನಿಂತಿರುವುದರಿಂದ ರಸ್ತೆಯಲ್ಲಿ ದಟ್ಟಣೆಯುಂಟಾಗುತ್ತದೆ ಎಂದು ಅವರು ಹೇಳಿದರು.ಆದರೆ ಫುಟ್ ಪಾತ್ ಮೇಲೆ ಶೌಚಾಲಯ ಮತ್ತು ಕೆಲವು ವ್ಯಾಪಾರಿಗಳು ಇರುವುದರಿಂದ ಪ್ರಯಾಣಿಕರು ಫುಟ್ ಪಾತ್ ನ್ನು ಕೂಡ ಬಳಸದೆ ಮಾರ್ಗದಲ್ಲಿಯೇ ಓಡಾಡುತ್ತಾರೆ. 
''ಕೆಎಸ್ಆರ್ ಟಿಸಿ ಬಸ್ ಡಿಪೊ ಹತ್ತಿರ ಸಾಕಷ್ಟು ಶೌಚಾಲಯಗಳಿರುವುದರಿಂದ ಫುಟ್ ಪಾತ್ ಮೇಲಿನ ಶೌಚಾಲಯಗಳನ್ನು ಮುಚ್ಚುವಂತೆ ನಾವು ಬಿಬಿಎಂಪಿಗೆ ಆರಂಭದಲ್ಲಿ ನಾವು ಮನವಿ ಮಾಡಿದ್ದೆವು. ಉಳಿದ ಗೋಡೆಗಳನ್ನು ಕೆಡವಲು ನಾವು ಯೋಜನೆ ಮಾಡಿಕೊಂಡೆವು. ಆದರೆ ಬಿಬಿಎಂಪಿ ಅಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ. ಹೀಗಾಗಿ ನಾವು ಸುರಂಗ ಮೂಲಕ ಕಾರಿಡಾರ್ ನಿರ್ಮಿಸಲು ನಿರ್ಧರಿಸಿದ್ದೇವೆ. ಬಸ್ ನಿಲ್ದಾಣ ಕೂಡ ನೆಲದಿಂದ 8 ಅಡಿ ಕೆಳಗೆ ಇದೆ'' ಎನ್ನುತ್ತಾರೆ ವಿಶ್ವನಾಥ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com