ಜನತಾ ದರ್ಶನದಲ್ಲಿ ಕಾಯಿಲೆಯಿಂದ ಬಳಲುತ್ತದ್ದ ವೃದ್ಧನಿಗೆ ಸಿಎಂ ಸಿದ್ದರಾಮಯ್ಯ ಧನಸಹಾಯ

ಕಾಲು ನೋವಿನಿಂದ ಬಳಲುತ್ತಿದ್ದ ವೃದ್ಧನೋರ್ವನಿಗೆ ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪಾಕೆಟ್ ನಲ್ಲಿದ್ದ ಹಣ ನೀಡಿ ಸಹಾಯ ಮಾಡಿದ್ದಾರೆ..
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: ಕಾಲು ನೋವಿನಿಂದ ಬಳಲುತ್ತಿದ್ದ ವೃದ್ಧನೋರ್ವನಿಗೆ ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪಾಕೆಟ್ ನಲ್ಲಿದ್ದ ಹಣ ನೀಡಿ ಸಹಾಯ ಮಾಡಿದ್ದಾರೆ.
ಬುಧವಾರ ಬೆಳಗ್ಗೆ  ತಮ್ಮ ನಿವಾಸದಲ್ಲಿ ಸುಮಾರು 100 ಮಂದಿಯನ್ನು ಸಿಎಂ ಜನತಾ ದರ್ಶನದಲ್ಲಿ ಭೇಟಿ ಮಾಡಿದರು. ಈ ವೇಳೆ 70 ವರ್ಷದ ವೃದ್ಧನೋರ್ವ ನೋವಿನಿಂದ ಬಳಲುತ್ತಿದ್ದದ್ದನ್ನು ಗಮನಿಸಿದ ಸಿಎಂ ಆತನಿಗೆ ಸಹಾಯ ಮಾಡಿದ್ದಾರೆ.
ಕಾಲಿನ ಅಲರ್ಜಿಯಿಂದ ಬಳಲುತ್ತಿದ್ದ ವ್ಯಕ್ತಿಗೆ ಆಯುರ್ವೇದ ಚಿಕಿತ್ಸೆಯ ಅವಶ್ಯಕತೆಯಿದ್ದು, ಕಳೆದ ಶನಿವಾರವೂ ಸಿಎಂ ನೋಡಲು ಬಂದಿದ್ದರು. ಆದರೆ  ಸಾಧ್ಯವಾಗಿರಲಿಲ್ಲ, ಈ ವೇಳೆ ತಮ್ಮ ಪರ್ಸ್ ನಲ್ಲಿದ್ದ 7.500 ರು ಹಣವನ್ನು ಆತನಿಗೆ ನೀಡಿ, ಆರೋಗ್ಯವೇ ಬಹಳ ಮುಖ್ಯವಾದದ್ದು, ಯಾವತ್ತೂ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com