ರಾಜ್ಯದಲ್ಲಿ ಮಳೆ ಕೊರತೆ: 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ನಿರ್ಧಾರ

ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆಯಿರುವುದರಿಂದ 1,000 ಮೆ.ವಾಟ್ ವಿದ್ಯುತ್‌ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆಯಿರುವುದರಿಂದ 1,000 ಮೆ.ವಾಟ್ ವಿದ್ಯುತ್‌ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿದ್ಯುತ್‌ ಪರಿಸ್ಥಿತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ವಿದ್ಯುತ್‌ ಖರೀದಿ ಸಂಬಂಧ ತಕ್ಷಣವೇ ಟೆಂಡರ್‌ ಕರೆಯುತ್ತೇವೆ. ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್‌ ಖರೀದಿಸುತ್ತೇವೆ ಎಂದರು.
ಕಳೆದ ವರ್ಷ ಪ್ರತಿ ಯುನಿಟ್‌ಗೆ ರು. 4. 08 ಕೊಟ್ಟು 4,882 ಮಿಲಿಯನ್ ಯುನಿಟ್ ವಿದ್ಯುತ್‌ ಖರೀದಿ ಮಾಡಲಾಗಿತ್ತು ಎಂದು ಹೇಳಿದರು.
ಇದುವರೆಗೂ ಶೇ. 39 ರಷ್ಟು ವಿದ್ಯುತ್ ರೈತರಿಗೆ ಪೂರೈಕೆಯಾಗುತ್ತಿದೆ. ಹೀಗಾಗಿ ಪೂರೈಕೆ ನಿರ್ವಹಣಗೆ ಬೇರೆ ದಾರಿಯಿಲ್ಲ, ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ ಶಿವಕುಮಾರ್, ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆಯಿದೆ ಎಂದು ತಿಳಿಸಿದ್ದಾಗಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಜಲ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 3,071 ಮೆ.ವಾ ಇದ್ದು, ಈಗ 1,257 ಮೆ.ವಾ ಉತ್ಪಾದನೆ ಮಾಡಲಾಗುತ್ತಿದೆ ಎಂದರು.
ವಿದ್ಯುತ್‌ ಬೇಡಿಕೆ ಬೇಸಿಗೆಯಲ್ಲಿ 10,000 ಮೆ.ವಾಟ್ ಇತ್ತು. ಈಗ ಅದು 8,000 ಮೆ.ವಾಟ್‌ಗೆ ಇಳಿದಿದೆ. ಪ್ರಸ್ತುತ 9,375 ವಿದ್ಯುತ್‌ ಉತ್ಪಾದನೆ ಆಗುತ್ತಿದ್ದು,  ವಿದ್ಯುತ್‌ ಕೊರತೆ ಇಲ್ಲ ಎಂದು ತಿಳಿಸಿದರು. ಸೌರ ವಿದ್ಯುತ್‌ ಘಟಕಗಳಿಂದ ಇನ್ನು ಒಂದು ವರ್ಷದಲ್ಲಿ 1,000 ಮೆ.ವಾ ವಿದ್ಯುತ್‌  ಗ್ರಿಡ್‌ಗೆ ಸೇರುತ್ತದೆ ಎಂದು ಸಚಿವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com