ವಿಪ್ರೋ
ವಿಪ್ರೋ

ಮೈಸೂರಿನ ವಿಪ್ರೋ ಘಟಕ ಸ್ಥಗಿತ

ಮೈಸೂರಿನ ವಿಪ್ರೋ ಘಟಕ ಸ್ಥಗಿತಗೊಂಡಿದ್ದು, ಹೂಟಗಳ್ಳಿಯಲ್ಲಿರುವ ವಿಪ್ರೋ ಗ್ರಾಹಕರ ಸೇವೆ ಮತ್ತು ಲೈಟಿಂಗ್ ನ 150 ಖಾಯಂ ಹಾಗೂ ಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿದ್ದಾರೆ.
ಮೈಸೂರು: ಮೈಸೂರಿನ ವಿಪ್ರೋ ಘಟಕ ಸ್ಥಗಿತಗೊಂಡಿದ್ದು, ಹೂಟಗಳ್ಳಿಯಲ್ಲಿರುವ ವಿಪ್ರೋ ಗ್ರಾಹಕರ ಸೇವೆ ಮತ್ತು ಲೈಟಿಂಗ್ ನ 150 ಖಾಯಂ ಹಾಗೂ ಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿದ್ದಾರೆ.
ಯಾವುದೇ ನೋಟಿಸ್ ಜಾರಿ ಮಾಡದೇ, ಏಕಾಏಕಿ ಸಂಸ್ಥೆಯನ್ನು ಮುಚ್ಚಿರುವುದರಿಂದ 84 ಖಾಯಂ ನೌಕರರು ಹಾಗೂ 66 ಗುತ್ತಿಗೆ ಆಧಾರಿತ ನೌಕರರಿಗೆ ಆಘಾತವಾಗಿದ್ದಾರೆ.ಆರ್ಥಿಕ ಹಾಗೂ ಉದ್ಯಮದ ದೃಷ್ಟಿಯಿಂದ ಮೈಸೂರು ಘಟಕದ ವಿಪ್ರೋ ಗ್ರಾಹಕ ಸೇವೆ ಮತ್ತು ಲೈಟಿಂಗ್ ಕಾರ್ಯನಿರ್ವಹಣೆ ಅಸಾಧ್ಯವಾಗಿದೆ ಎಂದು ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಿರುವ ಸುತ್ತೋಲೆ ತಿಳಿಸಿದೆ. 
ಎಲ್ ಇಡಿ ಬಲ್ಬ್ ಗಳು ಬಂದ ನಂತರ ಸಿಎಫ್ಎಲ್ ಬಲ್ಬ್ ಗಳಿಗೆ ಬೇಡಿಕೆ ಕಡಿಮೆಯಾಗಿರುವುದರ ಪರಿಣಾಮವಾಗಿ ಸಂಸ್ಥೆಗೆ ಹೊಡೆತ ಬಿದ್ದಿದ್ದು, ವಿಪ್ರೋ ಗ್ರಾಹಕ ಸೇವೆ ಮತ್ತು ಲೈಟಿಂಗ್ ಕಾರ್ಯನಿರ್ವಹಣೆ ಅಸಾಧ್ಯವಾಗಿದೆ ಎಂದು ತಿಳಿದುಬಂದಿದೆ. 
ಉದ್ಯಮ ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ಸಂಸ್ಥೆ ಒಂದು ವರ್ಷದ ಹಿಂದಿನಿಂದ ನೌಕರರ ಸಂಖ್ಯೆಯನ್ನು ಕಡಿಮೆಗೊಳಿಸುತ್ತಿತ್ತು. ಕಳೆದ ವರ್ಷ 700 ನೌಕರರಿದ್ದ ಸಂಸ್ಥೆಯಲ್ಲಿ ಈಗ 150 ನೌಕರರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಏಕಾಏಕಿ ಮುಚ್ಚಲ್ಪಟ್ಟಿರುವುದನ್ನು ವಿರೋಧಿಸಿ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com