ಇಬ್ಬರು ಐಪಿಎಸ್ ಅಧಿಕಾರಿಗಳನ್ನು ರಜೆ ಮೇಲೆ ಮನೆಗೆ ಕಳುಹಿಸಿ: ಎಚ್.ಡಿ ಕುಮಾರಸ್ವಾಮಿ

ಸೇವಾ ನಿಯಮ ಉಲ್ಲಂಘಿಸಿರುವ ಇಬ್ಬರು ಕಾರಾಗೃಹ ಅಧಿಕಾರಿಗಳನ್ನು ಸರ್ಕಾರ ರಜೆ ಮೇಲೆ ಮನೆಗೆ ಕಳುಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ...
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಸೇವಾ ನಿಯಮ ಉಲ್ಲಂಘಿಸಿರುವ ಇಬ್ಬರು ಕಾರಾಗೃಹ ಅಧಿಕಾರಿಗಳನ್ನು ಸರ್ಕಾರ ರಜೆ ಮೇಲೆ ಮನೆಗೆ ಕಳುಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು. ಈ ಘಟನೆ ಮುಖ್ಯಮಂತ್ರಿ ಅಧೀನದಲ್ಲಿರುವ ಗೃಹ ಇಲಾಖೆಯ ದಿವಾಳಿತನ ತೋರಿಸುತ್ತದೆ’ ಎಂದು ಅವರು ಹೇಳಿದರು.
ಪ್ರಕರಣವನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರವೇ ರಚಿಸಿದ ಭ್ರಷ್ಟಚಾರ ನಿಗ್ರಹದ ದಳದಿಂದ ಈ ತನಿಖೆ ಸಾಧ್ಯ ಇಲ್ಲವೇ, ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದಂತೆ ಇದನ್ನೂ ಮಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಕಾರಾಗೃಹದ ಅಧಿಕಾರಿಗಳು 2 ಕೋಟಿ ರು ಲಂಚ ಪಡೆದಿರುವುದು ದೊಡ್ಡ ಬೀಗ್ ಡೀಲ್ ಅಲ್ಲ, ಜೈಲಿನಲ್ಲಿ  ವಿಶೇಷ ಆತಿಥ್ಯ ನೀಡಲು ತಿಂಗಳಿಗೆ 10 ಲಕ್ಷ ನಿಗದಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ, ಅದರ ಬಗ್ಗೆಯೂ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಣ ಹಂಚಿಕೆ ವಿಚಾರದಲ್ಲಿ  ಡಿಐಜಿ ರೂಪಾ ಮತ್ತು ಡಿಜಿಪಿ ಎಚ್ ಎನ್ ಸತ್ಯನಾರಾಯಣ ರಾವ್ ನಡುವೆ ಜಗಳವಾಗಿದೆ, ಇಬ್ಬರು ಅಧಿಕಾರಿಗಳು ಟ್ರಬಲ್ ಮೇಕರ್ ಆಗಿದ್ದಾರೆ. ಸತ್ಯನಾರಾಯಣ ರಾವ್ ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ. ಜಗಳ ನಡೆಯುವುದು ಆಶ್ಚರ್ಯವೇನಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com