2,8859 ಅಡಿ ಜಲಾಶಯದ ಗರಿಷ್ಠ ನೀರಿನ ಮಟ್ಟವಾಗಿದ್ದು, ಕಳೆದ ವರ್ಷ 1,288 ಕ್ಯುಸೆಕ್ಸ್ ನಷ್ಟು ಒಳಹರಿವಿದ್ದರೆ ನೀರಿನ ಹೊರ ಹರಿವಿನ ಪ್ರಮಾಣ 4,585 ಕ್ಯುಸೆಕ್ಸ್ ನಷ್ಟಿತ್ತು. ಕಳೆದ ವರ್ಷ ಇದೇ ದಿನಗಳಲ್ಲಿ ಜಲಾಶಯದಲ್ಲಿನ ನೀರಿನ ಸಂಗ್ರಹ 5.99 ಟಿಎಂಸಿ ಅಡಿ ಇದ್ದರೆ 2015 ರಲ್ಲಿ ದಾಖಲೆಯ 6.67 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಆದರೆ ಈ ಬಾರಿ ನೀರಿನ ಸಂಗ್ರಹ ಮಟ್ಟ ದಾಖಲೆಯ ಪ್ರಮಾಣದಲ್ಲಿ ಕುಸಿದಿರುವುದರಿಂದ ಹಾರಂಗಿ ಜಲಾಶಯದಿಂದ ಕೃಷಿಗೆ ನೀರು ಪಡೆಯುವ ಪ್ರದೇಶದಲ್ಲಿರುವ ರೈತರಿಗೆ ಆತಂಕ ಎದುರಾಗಿದೆ.