ಇನ್ನು ಮುಂದೆ ವಾಟರ್ ಪ್ರೂಫ್ ಅಂಕಪಟ್ಟಿಗಳನ್ನು ನೀಡಲಿರುವ ಬೆಂಗಳೂರು ವಿ.ವಿ

ಈ ಶೈಕ್ಷಣಿಕ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ...
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು: ಈ ಶೈಕ್ಷಣಿಕ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾಟರ್ ಅಂಡ್ ಟೀರ್ ಪ್ರೂಫ್ ಅಂಕಪಟ್ಟಿಗಳನ್ನು ನೀಡಲಾಗುತ್ತದೆ.
ಕಡಿಮೆ ಗುಣಮಟ್ಟದ ಹಾಗೂ ದೋಷಪೂರಿತ ಅಂಕಪಟ್ಟಿಗಳನ್ನು ನೀಡಲಾಗುತ್ತದೆ ಎಂದು ಹಲವರು ದೂರಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಈ ಸುಧಾರಣೆ ಕ್ರಮ ಕೈಗೊಂಡಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರಕಾರ, ಹೊಸ ಅಂಕಪಟ್ಟಿ ವಿನ್ಯಾಸದಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಹೆಚ್ಚಿಸಲಾಗಿದೆ. ಮೊದಲ ಸುಧಾರಿತ ಅಂಕಪಟ್ಟಿಯ ಸೆಟ್ಟನ್ನು ಮುದ್ರಣಕ್ಕೆ ಕಳುಹಿಸಲಾಗಿದೆ. ಹೈ ರೆಸೊಲ್ಯೂಶನ್ ಸೆಕ್ಯುರಿಟಿ ಬಾರ್ಡರ್, ಗೋಲ್ಡ್ ಹೊಲೊಗ್ರಾಮ್, ಅಂಕಪಟ್ಟಿಯಲ್ಲಿ ಸಂಖ್ಯೆಗಳನ್ನು ಮುದ್ರಣ ಮಾಡಲು ಸೆಕ್ಯುರಿಟಿ ಇಂಕ್, ವಾಟರ್ ಮಾರ್ಕ್, ಮೈಕ್ರೊ ಲೇನ್ ಪ್ರಿಂಟಿಂಗ್ ಮತ್ತು ಹಿಡನ್  ಇಮೇಜ್ ಗಳನ್ನು ಅಂಕಪಟ್ಟಿಯ ಭದ್ರತೆ ಲಕ್ಷಣಗಳು ಒಳಗೊಂಡಿವೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಅಂಕ ಪಟ್ಟಿಗಳಲ್ಲಿ  ಅಭ್ಯರ್ಥಿಯ ಫೋಟೋ ಮತ್ತು ವಾಟರ್ ಮಾರ್ಕ್ ಇದೆ.
ಹೊಸ ಅಂಕಪಟ್ಟಿಯ ತಯಾರಿಕೆ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ಹೊರೆಯಾಗಲಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳುವ ಪ್ರಕಾರ, ಪ್ರತಿ ಅಂಕಪಟ್ಟಿಗೆ 36.5 ಪೈಸೆ ಖರ್ಚಾಗಲಿದೆ. ಮೊದಲಾದರೆ ಪ್ರತಿ ಅಂಕಪಟ್ಟಿಗೆ 1 ರೂಪಾಯಿ 94 ಪೈಸೆಯಾಗುತ್ತಿತ್ತು. ಪ್ರತಿ ಸೆಮೆಸ್ಟರ್ ಗೆ ವಿಶ್ವವಿದ್ಯಾಲಯ 9 ಲಕ್ಷ ಅಂಕಪಟ್ಟಿಗಳನ್ನು ಮುದ್ರಿಸುತ್ತದೆ. ಅಂದರೆ ವಿಶ್ವವಿದ್ಯಾಲಯ ಪ್ರತಿ ಸೆಮೆಸ್ಟರ್ ಗೆ 3 ಕೋಟಿ ರೂಪಾಯಿ ಅಂಕಪಟ್ಟಿ ತಯಾರಿಸಲು ವೆಚ್ಚ ಮಾಡಬೇಕು. ಈ ಹಿಂದೆ ಅದು ಕೇವಲ 15 ಲಕ್ಷ ರೂಪಾಯಿಯಾಗಿತ್ತು.
ಎಸ್ಎಂಎಸ್ ಮೂಲಕ ಫಲಿತಾಂಶ: ಫಲಿತಾಂಶ ಪ್ರಕಟಿಸುವಲ್ಲಿ ತಡವಾಗುತ್ತದೆ ಎಂಬ ದೂರುಗಳು ಬರುತ್ತಿರುವ ಸಂಬಂಧ ವಿಶ್ವವಿದ್ಯಾಲಯ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಮುಂದಿನ ಸೆಮೆಸ್ಟರ್ ನಿಂದ ಕಳುಹಿಸಲು ನಿರ್ಧರಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವ ಸಂದರ್ಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ವಿದ್ಯಾರ್ಥಿಗಳು ದಾಖಲು ಮಾಡಿಕೊಳ್ಳಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com