ಆನಿಮೇಶನ್ ಮತ್ತು ಗ್ರಾಫಿಕ್ಸ್ ಕೇಂದ್ರವಾಗಲಿರುವ ಬೆಂಗಳೂರು ನಗರ

ಬೆಂಗಳೂರು ನಗರವನ್ನು ಆನಿಮೇಶನ್, ಗ್ರಾಫಿಕ್ಸ್ ಮತ್ತು ವಿಷುವಲ್ ಎಫೆಕ್ಟ್ ಟೆಕ್ನಾಲಜಿಯ ಅಂತಾರಾಷ್ಟ್ರೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ನಗರವನ್ನು ಆನಿಮೇಶನ್, ಗ್ರಾಫಿಕ್ಸ್ ಮತ್ತು ವಿಷುವಲ್ ಎಫೆಕ್ಟ್ ಟೆಕ್ನಾಲಜಿಯ ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಮಾಡಲು ರಾಜ್ಯ ಸಚಿವ ಸಂಪುಟ ನಿನ್ನೆ  ಕರ್ನಾಟಕ ಅನಿಮೇಶನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಅಂಡ್ ಕಾಮಿಕ್ಸ್ (ಎವಿಜಿಸಿ) ನೀತಿ 2017-22 ಕ್ಕೆ ಅನುಮೋದನೆ ನೀಡಿದೆ. ಆನಿಮೇಶನ್ ಗೆ ಪರಿಣತ ಕೇಂದ್ರ(ಸೆಂಟರ್ ಆಫ್ ಎಕ್ಸೆಲೆನ್ಸ್) ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ.
2022ರವರೆಗೆ ಯೋಜನೆಯಿಟ್ಟುಕೊಂಡು ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಆನಿಮೇಶನ್, ಗ್ರಾಫಿಕ್ಸ್, ವಿಷುವಲ್ ಎಫೆಕ್ಟ್ ಗಳಲ್ಲಿ ಕೌಶಲ್ಯಾಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲು ಒತ್ತು ನೀಡಲಿದೆ. ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಉದ್ಯೋಗಾವಕಾಶ ಹೆಚ್ಚಿಸಲು ಈ ನೀತಿ ಅನುವು ಮಾಡಿಕೊಡಲಿದೆ.
''ಹೊಸ ನೀತಿ ಸುಮಾರು 20,000 ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ನಗರದಲ್ಲಿ ಕೌಶಲ್ಯಾಭಿವೃದ್ಧಿಯ ಪರಿಣತ ಕೇಂದ್ರವನ್ನು ವಿಶ್ವದಲ್ಲಿಯೇ ಅತ್ಯಂತ ಉತ್ತಮ ಆನಿಮೇಶನ್ ಸ್ಕೂಲ್ ಗಳಲ್ಲಿ ಒಂದಾದ ಪ್ಯಾರಿಸ್ ಮೂಲದ ಗೊಬೆಲಿನ್ಸ್ ಜೊತೆ ಸೇರಿ ಮೊದಲ ಬಾರಿಗೆ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 20 ಕೋಟಿ ರೂಪಾಯಿ ವೆಚ್ಚದಲ್ಲಿ ಆನಿಮೇಶನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್ ನಿಧಿ ಸ್ಥಾಪಿಸಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com