ರಾಜ್ಯ ಸರ್ಕಾರದಿಂದ 900 ಮದ್ಯದ ಅಂಗಡಿಗಳು ಶೀಘ್ರವೇ ಪ್ರಾರಂಭ!

ರಾಜ್ಯ, ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ಅಬಕಾರಿ ಇಲಖೆಯಿಂದ ಬರುತ್ತಿದ್ದ ಆದಾಯ
ಮದ್ಯದ ಅಂಗಡಿ (ಸಂಗ್ರಹ ಚಿತ್ರ)
ಮದ್ಯದ ಅಂಗಡಿ (ಸಂಗ್ರಹ ಚಿತ್ರ)
ಬೆಂಗಳೂರು: ರಾಜ್ಯ, ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಿಂದ ಅಬಕಾರಿ ಇಲಖೆಯಿಂದ ಬರುತ್ತಿದ್ದ ಆದಾಯ ಕುಗ್ಗಿದ್ದು, ರಾಜ್ಯ ಸರ್ಕಾರ ರಾಜ್ಯಾದ್ಯಂತ 900 ಮದ್ಯದ ಅಂಗಡಿಗಳನ್ನು ತೆರೆಯಲು ಚಿಂತನೆ ನಡೆಸಿದೆ. 
ವರದಿಗಳ ಪ್ರಕಾರ ಬೆಂಗಳೂರಿನಲ್ಲಿ 30 ಮದ್ಯದ ಅಂಗಡಿಗಳು ಸೇರಿ ರಾಜ್ಯಾದ್ಯಂತ ಒಟ್ಟು 900 ಅಂಗಡಿಗಳು ಪ್ರಾರಂಭವಾಗಲಿದ್ದು, ಎಂಎಸ್ಐಎಲ್ ನಿರ್ವಹಣೆ ಮಾಡಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಹಣಕಾಸು ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್, ಆದಾಯ ಕುಗ್ಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂಥಹದ್ದೊಂದು ಪ್ರಸ್ತಾವನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. 
900 ಮದ್ಯದ ಅಂಗಡಿಗಳನ್ನು ಪ್ರಾರಂಭ ಮಾಡುವ ಸರ್ಕಾರದ ಯೋಜನೆಯನ್ನು ಕಳೆದ ವರ್ಷವೇ ಹಣಕಾಸು ಇಲಾಖೆ ಅಂಗೀಕರಿಸಿತ್ತು. ಆದರೆ ವಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. 
ಮೊದಲ ಹಂತದಲ್ಲಿ ಎಂಎಸ್ಐಎಲ್ 350 ಮದ್ಯದ ಅಂಗಡಿಗಳಿಗೆ ಟೆಂಡರ್ ಕರೆದಿದ್ದು, ಸುಲಭವಾಗಿ ಸ್ಥಳಾಂತರಿಸಬಹುದಾದ ಪೀಠೋಪಕರಣಗಳನ್ನು ಹೊಂದಿರಬೇಕೆಂಬ ಷರತ್ತು ವಿಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com