ಗ್ರಾಮಸ್ಥರ ಪ್ರಕಾರ ಹೂಳಿಯಲ್ಲಿ 101 ದೇವಾಲಯ, 101 ಬಾವಿಗಳು, ಹಾಗೂ 101 ಸ್ಮಾರಗಳಿವೆಯಂತೆ.ಈ ದೇವಾಲಯಗಳ ಕೆಳಗೆ ರಾಜ ಚಿನ್ನ, ವಜ್ರ ಮುಂತಾದ ಸಂಪತ್ತುಗಳನ್ನು ಹೂಳಿದ್ದಾನೆ ಎಂಬ ಕಥೆಗಳು ಗ್ರಾಮಸ್ಥರ ಬಾಯಲ್ಲಿ ಹರಿದಾಡುತ್ತವೆ. ಹೀಗಾಗಿ ಹೂಳಿ ನಿಧಿಗಳ್ಳರಿಗೆ ಸ್ವರ್ಗವಾಗಿ ಪರಿಣಮಿಸಿದೆ. ಕೆಲವು ಸ್ಮಾರಕಗಳ ಬಳಿ ಸುಮಾರು 10 ಅಡಿಗೂ ಹೆಚ್ಚು ಹಳ್ಳ ತೋಡಲಾಗಿದೆ. ರಾತ್ರಿ ಸಮಯದಲ್ಲಿ ಈ ಪ್ರದೇಶಗಳಲ್ಲಿ ಯಾರೋಬ್ಬರ ಸಂಚಾರವಿಲ್ಲದಿರುವ ಕಾರಣ ನಿಧಿಗಳರು ಆ ಸಮಯದಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.