ಮಿಸ್ಟರ್ ಚೀಫ್ ಮಿನಿಸ್ಟರ್, ಕಲ್ಯಾಣ ಯೋಜನೆಗಳು ಗಂಡು ಮಕ್ಕಳಿಗೇಕಿಲ್ಲ?

ಹೆಣ್ಣು ಮಕ್ಕಳಿಗಾಗಿ ಸರ್ಕಾರ ಭಾಗ್ಯಲಕ್ಷ್ಮಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ. ಹಲವು ಪ್ರಯೋಜನಗಳನ್ನು ಅವರಿಗೆ ನೀಡುತ್ತಿದ್ದೀರಿ.
ಸಿದ್ದರಾಮಯ್ಯ ಜೊತೆ ಶಾಲಾ ವಿದ್ಯಾರ್ಥಿಗಳ ಸಂವಾದ
ಸಿದ್ದರಾಮಯ್ಯ ಜೊತೆ ಶಾಲಾ ವಿದ್ಯಾರ್ಥಿಗಳ ಸಂವಾದ
ಬೆಂಗಳೂರು: ಯಾವುದೇ ಭಯ ಆತಂಕವಿಲ್ಲದೇ ಮಕ್ಕಳು ಪ್ರಶ್ನೆ ಕೇಳಿದರು, ಅದರಂತೆಯೇ ತಾಳ್ಮಯಿಂದಲೇ ಅವರು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲ ಪ್ರಶ್ನೆಗಳು ಅವರನ್ನು ಮೂಕರನ್ನಾಗಿಸಿತು. ಮೂರು ತಾಸುಗಳ ಸೆಷನ್ ನಲ್ಲಿ ಕೆಲವು ಪ್ರಶ್ನೆಗಳಿಗೆ ರಾಜಕೀಯ ರ್ಯಾಲಿಯಲ್ಲಿ ಹೇಳುವ ರೀತಿಯಲ್ಲಿ ಉತ್ತರಿಸಿದರು.
ಯುನಿಸೆಫ್ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಆಯೋಗ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯದ ವಿವಿಧ ಶಾಲೆಗಳ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿದ್ಯಾರ್ಥಿಗಳ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.
ಗದಗದಿಂದ ಬಂದಿದ್ದ ಸತೀಶ್ ಎಂಬ ವಿದ್ಯಾರ್ಥಿ, ಹೆಣ್ಣು ಮಕ್ಕಳಿಗಾಗಿ ಸರ್ಕಾರ  ಭಾಗ್ಯಲಕ್ಷ್ಮಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ. ಹಲವು ಪ್ರಯೋಜನಗಳನ್ನು ಅವರಿಗೆ ನೀಡುತ್ತಿದ್ದೀರಿ, ಆದರೆ ಗಂಡು ಮಕ್ಕಳಿಗಾಗಿ ಏಕೆ ಯಾವುದೇ ಕಲ್ಯಾಣ ಯೋಜನೆಗಳು ಇಲ್ಲ, ಇದಕ್ಕಾಗಿಯೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲ ಬಾಲಕರ ಫಲಿತಾಂಶ ಕಡಿಮೆ ಯಾಗಿದೆ ಎಂದು ಕೇಳಿದ.
ನಾವು ಗಂಡು ಮತ್ತು ಹೆಣ್ಣು ಮಕ್ಕಳೆಂದು ಬೇಧ ಭಾವ ಮಾಡುತ್ತಿಲ್ಲ, ಚೆನ್ನಾಗಿ ಓದು, ಹೆಣ್ಣು ಮಕ್ಕಳಿಗಿರುವ ಯೋಜನೆಗಳ ಬಗ್ಗೆ ಬೈಯ್ಯಬೇಡ ಎಂದು ಸಿದ್ದರಾಮಯ್ಯ ಹೇಳಿದರು.
ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 354 ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೊರಗುಳಿದಿದ್ದಾರೆ ಎಂದು ಎನ್ ಜಿ ಒ ಸರ್ವೆಯೊಂದು ಹೇಳಿದೆ ಎಂದು ಚಿತ್ರದುರ್ಗದ ನಯನ ಹೇಳಿದಾಗ ಮರು ಪ್ರಶ್ನೆ ಹಾಕಿದ ಸಿಎಂ ಸಿದ್ದರಾಮಯ್ಯ, ನೀನು ಶಾಲೆಗೆ ಹೋಗುತ್ತಿಲ್ಲವೇ? ಸರ್ವೆ ಮಾಡುತ್ತಿದ್ದೀಯಾ ಎಂದು ಕೇಳಿದರು, ನಂತರ ಆಕೆಯನ್ನು ಹೊಗಳಿದ ಅವರು,  ಸಮಾಜ ಸೇವೆಯನ್ನು ಬಿಡಬೇಡ ಎಂದು ಸಲಹೆ ನೀಡಿದರು.
ಆಕೆಯ ಜೊತೆಗಿನ ವಾದದ ನಂತರ  ನಿನಗೆ ರಾಜಕೀಯದಲ್ಲಿ ಆಸಕ್ತಿಯಿದೆಯೇ ಎಂದು ಪ್ರಶ್ನಿಸಿದರು, ಆಕೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಾಗ, ಸರಿ ಹಾಗಿದ್ದರೇ ನೀನು ವಿರೋಧ ಪಕ್ಷಕ್ಕೆ, ಆಡಳಿತ ಪಕ್ಷಕ್ಕೆ ಬೇಡ, ನಿನಗೆ ಉತ್ತಮ ವಾಕ್ಚಾತುರ್ಯವಿದೆ ಎಂದು  ಪ್ರಶಂಸಿದರು.
ಇನ್ನೂ ದಾವಣೆಗೆರೆಯಿಂದ ಬಂದಿದ್ದ 16 ವರ್ಷದ  ತೇಜಾ ನಿಗೆ ಮಾತು ಬಾರದು ಹಾಗೂ ಕಿವಿ ಕೇಳದು, ಹೀಗಿದ್ದರೂ ಆತ ಎಸ್ ಎಸ್ ಎಲ್ ಸಿಯಲ್ಲಿ 219 ಅಂಕಗಳನ್ನು ಗಳಿಸಿದ್ದಾನೆ, ರಾಜ್ಯದಲ್ಲಿ ಸುಮಾರು 3,409 ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ,ಇವರೆಲ್ಲಾ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಆದರೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸರಿಯಾದ ಶಾಲೆಗಳಿಲ್ಲ ಎಂದು ಸಮಸ್ಯೆ ಬಗ್ಗೆ ತನ್ನ  ಆ್ಯಕ್ಷನ್ ಮೂಲಕ ತಿಳಿಸಿ ಸಿಎಂ ಗಮನ ಸೆಳೆದ.
ಮೈಸೂರಿನಲ್ಲಿರುವ ಆಲ್ ಇಂಡಿಯಾ ಸ್ಪೀಚ್ ಮತ್ತು ಹಿಯರಿಂಗ್ ಇನ್ ಸ್ಟಿಟ್ಯೂಟ್  ಪ್ರಾದೇಶಿಕ ಕೇಂದ್ರಗಳನ್ನು ರಾಜ್ಯದ್ಯಾಂತ ತೆರೆಯುವುಂತೆ   ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಎ. ನಾರಾಯಣಪುರದಲ್ಲಿ ಮಾದಕ ವಸ್ತು ಮಾರಾಟ ಹೆಚ್ಚಾಗಿದೆ. ಚಿಕ್ಕ ಮಕ್ಕಳೂ ಮಾದಕ ವಸ್ತುಗಳನ್ನು ಮಾರಾಟ ಮಾಡ್ತಿದ್ದಾರೆ. ಮಾದಕ ವಸ್ತುಗಳ ಮಾರಾಟದ ವಿರುದ್ದ ಯಾವ ಕ್ರಮ ಕೈಗೊಳ್ತೀರಿ’ ಎಂದು  ಕೆ.ಆರ್. ಪುರಂ ವಿದ್ಯಾರ್ಥಿನಿ ದೀಪಿಕಾ  ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ನಾನೂ ಸಿಗರೇಟು ಸೇದುತ್ತಿದ್ದೆ. ಈಗ ಸಿಗರೇಟು ಸೇದೋದನ್ನ ಬಿಟ್ಟಿದ್ದೇನೆ. ವೈಯಕ್ತಿಕವಾಗಿ ಸಮಸ್ಯೆ ಆದ್ರೆ ಸಿಗರೇಟು ಸೇದೋದನ್ನ ಬಿಟ್ಟು ಬಿಡುತ್ತಾರೆ’ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com