ತವರಿಗೆ ಮರಳಲು ಉಡುಪಿ ಮೂಲದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ನೆರವು

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಂದು ಟ್ವಿಟ್ಟರ್ ಗೆ ಸ್ಪಂದಿಸಿದ್ದು, ಉಡುಪಿ ವ್ಯಕ್ತಿಗೆ ಸಹಾಯ ...
ಸುಷ್ಮಾ  ಸ್ವರಾಜ್
ಸುಷ್ಮಾ ಸ್ವರಾಜ್
ಉಡುಪಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಂದು ಟ್ವಿಟ್ಟರ್ ಗೆ ಸ್ಪಂದಿಸಿದ್ದು, ಉಡುಪಿ ವ್ಯಕ್ತಿಗೆ ಸಹಾಯ ಮಾಡಿದ್ದಾರೆ. 
ಮೂಲತ ಮುಂಬಯಿಯವರಾದ ಆನಂದ್ ಸಿಂಗ್ ಕಳೆದ ಕೆಲವು ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿದ್ದಾರೆ. 26 ವರ್ಷದ ಆನಂದ್ ಸಿಂಗ್ ಆಗ್ನೇಯ ಆಫ್ರಿಕಾದ ಮೊಜಾಂಬಿಕ್ ನಲ್ಲಿ ಆತನ ಮಾಲೀಕನಿಂದ ಹಲ್ಲೆಗೊಳಗಾಗಿದ್ದರು.
ಆನಂದ್ ಸಿಂಗ್ ಸಹೋದರಿ ಅನಿತಾ ಸುವರ್ಣ ಈ ವಾರದ ಆರಂಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಸಹಾಯ ಮಾಡುವಂತೆ ಟ್ವೀಟ್ ಮಾಡಿದ್ದರು. ಕಳೆದ 9 ತಿಂಗಳಿಂದ ನನ್ನ ಸಹೋದರನಿಗೆ ಮಾಲೀಕ ವೇತನ ನೀಡಿಲ್ಲ, ನನ್ನ ಸಹೋದರ ಹಣ ಕದ್ದಿದ್ದಾನೆ ಎಂದು ಆರೋಪಿಸಿ ಕಂಪನಿ ಆತನ ಮೇಲೆ ಹಲ್ಲೆ ನಡೆಸಿ ಸಂಬಳ ನೀಡದೇ ಆತನಿಗೆ ಕಿರುಕುಳ ನೀಡುತ್ತಿದೆ ಎಂದು 
ಟ್ವಿಟ್ಟರ್ ನಲ್ಲಿ ಅನಿತಾ ಸುವರ್ಣ ಹೇಳಿದ್ದಾರೆ.
2015ರ ಅಕ್ಟೋಬರ್ ನಲ್ಲಿ ಆನಂದ್ ಸಿಂಗ್ ಕೆಲಸಕ್ಕೆ ಸೇರುವಾಗ ತಿಂಗಳಿಗೆ 400 ಡಾಲರ್ ಸಂಬಳ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕಳೆದ 9 ತಿಂಗಳಿಂದ ಆತನಿಗೆ ಯಾವುದೇ ವೇತನ ಪಾವತಿಸಿಲ್ಲ, ಕ್ಯಾಶ್ ಬಾಕ್ಸ್ ನಿಂದ 9 ಲಕ್ಷ ಹಣ ಕಾಣೆಯಾಗಿದ್ದು, ಮೇ 29 ರಂದು ಹಣ ಕಳ್ಳತನವಾಗಿರುವ  ಕಂಪನಿಯ ಮಾಲೀಕನಿಗೆ ತಿಳಿಸಿದ್ದ. ಆದರೆ ಆನಂದ್ ಸಿಂಗ್ ಹಣ ಕದ್ದಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಾಲೀಕನ ಮಗ ಆನಂದ್ ಸಿಂಗ್ ಗೆ ಗನ್ ತೋರಿಸಿ  ಕಳ್ಳತನ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ, ತನ್ನ ಸಹೋದರನ ಪಾಸ್ ಪೋರ್ಟ್ ಮತ್ತು ದಾಖಲೆಗಳನ್ನು ಕಿತ್ತುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಿಂದಾಗಿ ಮೊಜಾಂಬಿಕ್ ನಲ್ಲಿರುವ ಭಾರತೀಯ ರಾಯಭಾರಿ ಹನ್ಸರಾಜ್ ಸಿಂಗ್ ವರ್ಮಾ ನನ್ನ ಸಹೋದರನಿಗೆ ಸಹಾಯ ಮಾಡಿ ವಿಮಾನ ಹತ್ತಿಸಿದ್ದಾರೆ. ಶುಕ್ರವಾರ ರಾತ್ರಿ ಆನಂದ್ ಸಿಂಗ್ ಮುಂಬಯಿ ತಲುಪಿದ್ದು. ಇದಕ್ಕಾಗಿ ಅನಿತಾ ಸುವರ್ಮ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com