ಕಾವೇರಿ ಗಲಾಟೆ ವೇಳೆ ಎಸಿಪಿ ಫೋನ್ ಕದ್ದಾಲಿಕೆ: ಡಿಸಿಪಿ ಅಜಯ್ ಹಿಲೋರಿ ವಿರುದ್ಧ ತನಿಖೆ

2016 ರಲ್ಲಿ ನಡೆದ ಕಾವೇರಿ ಗಲಾಟೆ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಕನ್ನಡ ಪರ ಸಂಘಟನೆಯ ಮುಖ್ಯಸ್ಥರ ನಡುವಿನ ಫೋನ್ ಸಂಭಾಷಣೆಯನ್ನು ...
ಅಜಯ್ ಹಿಲೋರಿ
ಅಜಯ್ ಹಿಲೋರಿ
Updated on
ಬೆಂಗಳೂರು: 2016 ರಲ್ಲಿ ನಡೆದ ಕಾವೇರಿ ಗಲಾಟೆ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಮತ್ತು  ಕನ್ನಡ ಪರ ಸಂಘಟನೆಯ ಮುಖ್ಯಸ್ಥರ ನಡುವಿನ ಫೋನ್ ಸಂಭಾಷಣೆಯನ್ನು ಬಹಿರಂಗ ಪಡಿಸಿದ ಹಿನ್ನೆಲೆಯಲ್ಲಿ ಡಿಸಿಪಿ ವಿರುದ್ದ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.
ಗಲಭೆ ಸಂದರ್ಭದಲ್ಲಿ ಎಸಿಪಿ ಚರಣ್‌ರೆಡ್ಡಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರ ನಡುವೆ ನಡೆದಿದ್ದ ಮೊಬೈಲ್ ಸಂಭಾಷಣೆಯನ್ನು ಬಹಿರಂಗಪಡಿಸಿದ ಆರೋಪ ಸಂಬಂಧ ಡಿಸಿಪಿ ಅಜಯ್ ಹಿಲೋರಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶವಾಗಿದೆ. 2016ರ ಸೆಪ್ಟಂಬರ್ ನಲ್ಲಿ ನಡೆದ ಕಾವೇರಿ ಗಲಾಟೆ ವೇಳೆ ಕನ್ನಡಪರ ಹೋರಾಟಗಾರನ ಫೋನ್ ಟ್ರ್ಯಾಪ್ ಮಾಡಿಸಲಾಗಿತ್ತು. 
ಪ್ರತಿಭಟನೆ ನಿಯಂತ್ರಿಸುವಲ್ಲಿ ವಿಫಲರಾಗಿರುವ ಹಾಗೂ ಇಲಾಖೆಯ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಿ ಕರ್ತವ್ಯಲೋಪ ಎಸಗಿರುವ ಡಿಸಿಪಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಚರಣ್‌ರೆಡ್ಡಿ ಅವರು 2016ರ ಸೆಪ್ಟಂಬರ್‌ನಲ್ಲೇ ಆಗಿನ ಡಿಜಿಪಿ ಓಂಪ್ರಕಾಶ್ ಅವರಿಗೆ ವರದಿ ಕೊಟ್ಟಿದ್ದರು. ಆದರೆ, ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ನನೆಗುದಿಗೆ ಬಿದ್ದಿದ್ದ ಆ ವರದಿಯನ್ನು ಇತ್ತೀಚೆಗೆ ಪರಿಶೀಲಿಸಿದ ಈಗಿನ ಡಿಜಿಪಿ ಆರ್‌.ಕೆ.ದತ್ತ, ಇದೊಂದು ಗಂಭೀರ ಪ್ರಕರಣ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ಕೊಡಿ ಎಂದು ಕಮಿಷನರ್ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.
ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಒಮ್ಮೆ ತನಿಖೆ ಪೂರ್ಣಗೊಂಡರೇ ಆ ವರದಿಯನ್ನು ಡಿಜಿ ಮತ್ತು ಐಜಿಪಿ ಅವರಿಗೆ ಸಲ್ಲಿಸಲಾಗುವುದು.  ಈ ಹಂತದಲ್ಲಿ ಯಾವುದೇ ರೀತಿಯ ವಿಷಯಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ. 
ಅಪರಾಧ ವಿಭಾಗದ ಹೆಚ್ಚುವರಿ ಪೋಲೀಸ್ ಸಹಾಯಕ ಆಯುಕ್ತ ಎ. ಕವಿ ಅವರಿಗೆ  ಹಿಲೋರಿ ವಿರುದ್ಧ ತನಿಖೆ ನಡೆಸಲು ಸೂಚಿಸಲಾಗಿದೆ.
ಈ ಸಂಬಂಧ ಚರಣ್ ರೆಡ್ಡಿ ಪ್ರತಿಕ್ರಿಯೆಗಾಗಿ ಕೇಳಿದಾಗ ತನಿಖೆ ನಡೆಯುತ್ತಿರುವ ಹಂತದಲ್ಲಿ ವಿಷ,ಯ ಬಗ್ಗೆ ಮಾತನಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಅಂದು ಏನಾಗಿತ್ತು: ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಖಂಡಿಸಿ ವಿವಿಧ ಸಂಘಟನೆಗಳು 2016ರ ಸೆ.9ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದವು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹಿಂದಿನ ದಿನವೇ ಕರವೆ  ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದಿದ್ದರು. ಹಲವು ಕನ್ನಡ ಪರ ಸಂಘಟನೆಗಳ ನಾಯಕರ ಮೊಬೇಲ್ ಗಳನ್ನು ಟ್ರ್ಯಾಪ್ ಮಾಡಿಸಲಾಗಿತ್ತು.
ಆಗ ಚರಣ್‌ರೆಡ್ಡಿ ಅವರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದರು. ಅವರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದ ನಾರಾಯಣಗೌಡ, ‘ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ನಮ್ಮ ಕಾರ್ಯರ್ತರನ್ನು ಬಂಧಮುಕ್ತಗೊಳಿಸಿ’ ಎಂದು ಕೋರಿದ್ದರು
ಬಂದ್ ಕಾರಣದಿಂದ ಹಿಂದಿನ ದಿನವೇ ಪ್ರಕಾಶ್‌ನನ್ನು ವಶಕ್ಕೆ ಪಡೆದಿದ್ದು ನಿಜ. ಅದೇ ದಿನ ಸಂಜೆ ನಾರಾಯಣಗೌಡ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದ ಹಿಂದಿನ ಕಮಿಷನರ್ ಮೇಘರಿಕ್, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡದಂತೆ ಎಚ್ಚರಿಕೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com