ಮೈಸೂರು: ಮ್ಯಾನ್ ಹೋಲ್ ಗೆ ಬಲವಂತವಾಗಿ ಪೌರ ಕಾರ್ಮಿಕರನ್ನು ಇಳಿಸಿದ ಗ್ರಾ. ಪಂ.ಅಧ್ಯಕ್ಷೆ

ಮನೆ ಮುಂದೆ ಕಟ್ಟಿಕೊಂಡಿದ್ದ ಮ್ಯಾನ್ ಹೋಲ್ ಗೆ ಬಲವಂತವಾಗಿ ಪೌರ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ...
ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕ ಗಣೇಶ್
ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕ ಗಣೇಶ್
ಮೈಸೂರು: ಮನೆ ಮುಂದೆ ಕಟ್ಟಿಕೊಂಡಿದ್ದ ಮ್ಯಾನ್ ಹೋಲ್ ಗೆ ಬಲವಂತವಾಗಿ ಪೌರ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ನಡೆದಿದೆ.
ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಅವರ ಮನೆ ಮುಂಭಾಗ ಕಟ್ಟಿಕೊಂಡಿದ್ದ ಮ್ಯಾನ್‌ಹೋಲ್‌ಗೆ ಇಬ್ಬರು ಪೌರ ಕಾರ್ಮಿಕರು ಇಳಿದು ಶುಚಿಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಮ್ಮ ಮನೆ ಮುಂಭಾಗದ ಚೇಂಬರ್ ಶುಚಿಗೊಳಿಸುವಂತೆ ಅಧ್ಯಕ್ಷರು ತಾಕೀತು ಮಾಡಿದರು. ಮ್ಯಾನ್‌ಹೋಲ್‌ಗೆ ಇಳಿಯದೇ ಇದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎದುರು ಪೌರಕಾರ್ಮಿಕ ಗಣೇಶ್‌ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಗಣೇಶ್ ಮ್ಯಾನ್ ಹೋಲ್ ಗೆ ಇಳಿದು ಶುಚಿಗೊಳಿಸುವುದನ್ನು ಅಕ್ಕಪಕ್ಕದ ನಿವಾಸಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಹಲವರು  ಗೀತಾ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಘಟನೆಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕರ ಸಂಘದಮುಖಂಡರು ಒತ್ತಾಯಿಸಿದ್ದಾರೆ.
ಈ ಘಟನೆ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ತೀವ್ರವಾಗಿ ಖಂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com