ಕಾರವಾರ ಕಡಲ ತೀರಕ್ಕೆ ಬರಲಿದೆ ಮತ್ತೊಂದು ಯುದ್ದ ವಿಮಾನ ಮ್ಯೂಸಿಯಂ

ರವಾರದಲ್ಲಿ ಮತ್ತೊಂದು ಯುದ್ದ ವಿಮಾನ ವಸ್ತು ಸಂಗ್ರಹಾಲಯ ಸ್ಥಾಪನೆಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ರವೀಂದ್ರನಾಥ್ ಟಾಗೊರ್ ಬೀಚ್ ನಲ್ಲಿ ...
ಟ್ಯುಪೊಲೆವ್ -142 ಎಂ ಯುದ್ಧವಿಮಾನ
ಟ್ಯುಪೊಲೆವ್ -142 ಎಂ ಯುದ್ಧವಿಮಾನ
Updated on
ಕಾರವಾರ: ಕಾರವಾರದಲ್ಲಿ ಮತ್ತೊಂದು ಯುದ್ದ ವಿಮಾನ ವಸ್ತು ಸಂಗ್ರಹಾಲಯ ಸ್ಥಾಪನೆಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ರವೀಂದ್ರನಾಥ್ ಟಾಗೊರ್ ಬೀಚ್ ನಲ್ಲಿ ಐಎನ್ ಎಸ್  ಚಾಪಲ್ ಯುದ್ದ ವಿಮಾನ ವಸ್ತು ಸಂಗ್ರಹಾಲಯವಿದೆ.
ಕರ್ನಾಟದಲ್ಲಿ ಟುಪೊಲೆವ್ -142 ಎಂ ಏರ್ ಕ್ರಾಫ್ಟ್ ತರಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಟುಪೊಲೆವ್ -142 ಎಂ ಏರ್ ಕ್ರಾಫ್ಟ್ ತನ್ನ ಸೇವೆ ಮಗಿಸಿದ್ದು,  ಐಎನ್ ಎಸ್ ಚಾಪಲ್ ಮ್ಯೂಸಿಯಂ ನಂತರ ಈ ಏರ್ ಕ್ರಾಫ್ಟ್ ಅನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದು ಯುದ್ದವಿಮಾನವನ್ನು ರಾಜ್ಯಕ್ಕೆ ಹಸ್ತಾಂತರಿಸುವಂತೆ ಕೋರಿದ್ದಾರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿದರೇ ರಾಜ್ಯದ ಪ್ರವಾಸೋದ್ಯಮ ಮತ್ತಷ್ಟು ಉತ್ತಮಗೊಳ್ಳಲಿದೆ.
ಟ್ಯುಪೊಲೆವ್ -142 ಎಂ ವಿನಮಾನವನ್ನು ಜಲಂತರ್ಗಾಮಿ ವಿರೋಧಿ ಯುದ್ದದಲ್ಲಿ ಬಳಸಲಾಗಿತ್ತು. ಕಾರವಾರದ ಸೀ ಬರ್ಡ್ ನೌಕಾ ನೆಲೆಗೆ ಜಿಲ್ಲಾಡಳಿತ 11,334 ಎಕರೆ ಭೂಮಿಯನ್ನು ನೌಕಾಪಡೆಗೆ ನೀಡಿದೆ, ಟ್ಯುಪೊಲೆವ್ -142 ಎಂ ಯುದ್ಧವಿಮಾನ ನಿರ್ವಹಿಸುವುದು ಸುಲಭ, ವಸ್ತು ಸಂಗ್ರಹಾಲಯದಲ್ಲಿ ಇದನ್ನು ಇಟ್ಟರೇ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ,
ಐಎನ್ಎಸ್ ವಿರಾಟ್ ಯುದ್ದನೌಕೆಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸಿತ್ತು. ಆದರೆ ವೆಂಕಯ್ಯ ನಾಯ್ಡು ಆಂಧ್ರ ಪ್ರದೇಶಕ್ಕೆ ಅದನ್ನು ತಮ್ಮ ರಾಜ್ಯಕ್ಕೆ ತೆಗೆದುಕೊಳ್ಳಲು ಬಹಳ ಯತ್ನ ನಡೆಸಿತ್ತು ಆದರೆ ರಕ್ಷಣಾ ಸಚಿವಾಲಯ ಈ ಯೋಜನೆ ಬಗ್ಗೆ ಇದುವೆರಗೂ ಯಾವುದನ್ನು ಅಂತಿಮಗೊಳಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com