ಶಿಕ್ಷಕರಿಗೆ ಬೆದರಿಕೆ: ಐಎಎಸ್ ಅಧಿಕಾರಿ ಮಣಿವಣ್ಣನ್ ವಿರುದ್ಧ ಶಾಸಕರ ಆಕ್ರೋಶ

ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲ ಮುಂದಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಶಿಕ್ಷಕರಿಗೆ ಬೆದರಿಕೆ ...
ಪಿ.ಮಣಿವಣ್ಣನ್
ಪಿ.ಮಣಿವಣ್ಣನ್
Updated on
ಬೆಂಗಳೂರು: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲ ಮುಂದಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಶಿಕ್ಷಕರಿಗೆ  ಬೆದರಿಕೆ ಹಾಕಿರುವ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರ ಕ್ರಮಕ್ಕೆ ವಿಧಾನ ಪರಿಷತ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು.
ತಮಗೆ ಉತ್ತಮ ಸೌಲಭ್ಯ ಹಾಗೂ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಂದಿನ ವಾರಾಂತ್ಯದಲ್ಲಿ ಮೊರಾರ್ಜಿ ಶಾಲೆ ಶಿಕ್ಷಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ವಿಡಿಯೋ ಚಿತ್ರೀಕರಣ ಮಾಡಿ, ಹಾಜರಾತಿ ಪರಿಶೀಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಅಮಾನತುಗೊಳಿಸಲಾಗುವುದು. ಬೇರೆ ಶಿಕ್ಷಕರ ನೇಮಕಾತಿ ಆಗುವವರೆಗೆ ಮಾಸಿಕ 12 ಸಾವಿರ ರೂ. ವೇತನ ಕೊಟ್ಟು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ನಮಗೆ ಒಳ್ಳೆಯ ಶಿಕ್ಷಕರು ಸಿಗುತ್ತಾರೆ' ಎಂದು ವಾಟ್ಸಪ್‌ ಸಂದೇಶ ಕಳಿಸಿರುವುದನ್ನು  ಪರಿಷತ್ ನಲ್ಲಿ ಖಂಡಿಸಲಾಗಿದೆ.
ಈಗಷ್ಟೇ ಶಾಲೆಗಳು ಪುನಾರಂಭವಾಗಿವೆ. ಶಿಕ್ಷಕರನ್ನು ಅಮಾನತು ಮಾಡುವ ಉದ್ದೇಶವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಣಿವಣ್ಣನ್ ಈ ರೀತಿ ಹೇಳಿದ್ದಾರೆ ಎಂದು ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com