ಮುಂಗಾರು ಮಳೆ ಆಗಮನ: ಶಿರಾಡಿ ಘಾಟ್ ನಲ್ಲಿ ಮತ್ತೆ ರಸ್ತೆಯದ್ದೇ ಸಮಸ್ಯೆ!

ಮುಂಗಾರು ಋತು ಆಗಮಿಸಿ ಇನ್ನೂ ಹದಿನೈದು ದಿನಗಳಾಗಿಲ್ಲ. ಆಗಲೇ ಬೆಂಗಳೂರು-ಮಂಗಳೂರು ರಾಷ್ಟ್ರೀಯ...
ಶಿರಾಡಿ ಘಾಟ್ ನಲ್ಲಿ ಡಾಂಬರು ಕಿತ್ತುಹೋಗಲು ಮುಖ್ಯ ಕಾರಣವಾಗುವ ಭಾರೀ ವಾಹನಗಳ ಸಂಚಾರ
ಶಿರಾಡಿ ಘಾಟ್ ನಲ್ಲಿ ಡಾಂಬರು ಕಿತ್ತುಹೋಗಲು ಮುಖ್ಯ ಕಾರಣವಾಗುವ ಭಾರೀ ವಾಹನಗಳ ಸಂಚಾರ
ಮಂಗಳೂರು: ಮುಂಗಾರು ಋತು ಆಗಮಿಸಿ ಇನ್ನೂ ಹದಿನೈದು ದಿನಗಳಾಗಿಲ್ಲ. ಆಗಲೇ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಹೊಸದಾಗಿ ಹಾಕಿರುವ ಡಾಂಬರು ಕಿತ್ತುಹೋಗುತ್ತಿದೆ.
ಘಾಟ್ ಸೆಕ್ಷನ್ ನ ಮರೇನಹಳ್ಳಿ, ಅಡ್ಡಹೊಳೆ, ಕುಂಪುಹೊಳೆ ಮತ್ತು ಗುಂಡ್ಯದ 22 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಹೊಂಡ, ಗುಂಡಿಗಳು ಕಾಣಸಿಗುತ್ತವೆ. ಇಲ್ಲಿ ಕಳೆದ 15 ದಿನಗಳಿಂದ ಮಳೆ ಅವ್ಯಾಹತವಾಗಿ ಸುರಿಯುತ್ತಿದೆ.
ಇಲ್ಲಿನ ರಸ್ತೆಗೆ ಕಳೆದ ಏಪ್ರಿಲ್ ನಲ್ಲಿ ಡಾಂಬರು ಹಾಕಲಾಗಿತ್ತು. ಆದರೆ ಘಾಟ್ ವಲಯದ 13 ಕಿಲೋ ಮೀಟರ್ ಉದ್ದದ ರಸ್ತೆಯ ಕಾಂಕ್ರೀಟ್ ವಿಸ್ತರಣೆ ಕೆಲಸ ಅರ್ಧಕ್ಕೆ ನಿಂತಿದೆ.
'' ಶಿರಾಡಿ ಘಾಟ್ ನಲ್ಲಿ ಬಂದ ನಂತರ ನಮ್ಮ ಕಾರಿನ ಮೋಲೆಲ್ಲಾ ಟಾರಿನ ಸಣ್ಣ ಚುಕ್ಕೆಗಳು ಮಳೆ ನೀರಿಗೆ ಕುಳಿತುಕೊಂಡಿವೆ. ನಮ್ಮ ಸಂಬಂಧಿಕರ ಕಾರಿನಲ್ಲಿಯೂ ಹಾಗೆಯೇ ಆಗಿದೆ ಎಂದು ಮಂಗಳೂರು ನಗರದ ಹೊಟೇಲ್ ಮಾಲೀಕ  ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ರಸ್ತೆಯ ಡಾಂಬರು ಕಿತ್ತುಹೋಗಿರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಿಶೇಷತೆಯನ್ನೇನು ಉಂಟು ಮಾಡಿಲ್ಲ. ಭಾರೀ ಮಳೆ ಮತ್ತು ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರದಿಂದ ರಸ್ತೆಗಳಿಗೆ ಹಾಕಿದ ಡಾಂಬರು ಕಿತ್ತು  ಹೋಗುವುದು ಸಾಮಾನ್ಯವಾಗಿದೆ. 
ಶಿರಾಡಿ ಘಾಟ್ ನಲ್ಲಿ ಅಧಿಕ ಗಾತ್ರದ ವಾಹನಗಳು ಸಂಚಾರ ನಡೆಸುತ್ತಿರುವುದರಿಂದ ವಾಹನಗಳ ದಟ್ಟಣೆ  ಹೆಚ್ಚಾಗಿರುವುದರಿಂದ ರಸ್ತೆಗಳ ನಿರ್ವಹಣೆಗೆ ನೀಡುವ ಹಣ ಸಾಕಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಶಿರಾಡಿ ರಸ್ತೆ ದೇಶದಲ್ಲಿ ಅತ್ಯಂತ ಜನನಿಬಿಡ ಮತ್ತು ವಾಹನ ದಟ್ಟಣೆ ಹೊಂದಿರುವ ಹೆದ್ದಾರಿಗಳಲ್ಲಿ ಒಂದಾಗಿದ್ದು, ಪ್ರತಿನಿತ್ಯ ಸುಮಾರು 1 ಲಕ್ಷ ಪ್ರಯಾಣಿಕರ ಕಾರುಗಳು ಓಡಾಡುತ್ತವೆ. ಈ ಹೆದ್ದಾರಿಯ ನಿರ್ವಹಣೆಗೆ 30 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಕಳೆದ 4 ವರ್ಷಗಳಲ್ಲಿ ಮಂಗಳೂರಿನಿಂದ ಬೆಂಗಳೂರು ಮಧ್ಯೆ ರಸ್ತೆ ಸಂಚಾರ ಸಂಪರ್ಕಕ್ಕೆ ಕೇವಲ 57 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ತಮ್ಮ  ಹಣವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಕಾಮಗಾರಿ ಗುತ್ತಿಗೆಯವರು ಕೂಡ ಕಾಲಕಾಲಕ್ಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ.
 ಸರಿಯಾದ ಚರಂಡಿ ನಿರ್ಮಿಸದೆ ಡಾಂಬರು ಹಾಕಿದರೆ ಪ್ರತಿ ಮಳೆಗೂ ಕಿತ್ತುಹೋಗುತ್ತದೆ ಎಂದು ಸಕಲೇಶಪುರದ ಶಿರಾಡಿ ರಾಷ್ಟ್ರೀಯ ಹೆದ್ದಾರಿ ರಕ್ಷಣಾ ಸಮಿತಿಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಪ್ರತಿ ವರ್ಷ ಸರ್ಕಾರ ಸಾರ್ವಜನಿಕರ ಹಣವನ್ನು ರಸ್ತೆ ಕಾಮಗಾರಿಗೆಂದು ಸುರಿದು ನಿಷ್ಟ್ರಯೋಜಕಗೊಳಿಸುತ್ತಿದೆ ಎಂದು ಹೇಳಿದರು.
ಸುಮಾರು 3,000 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಜೈಕೊ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com