ಆನೆ ಕಾರಿಡಾರ್ ಗಾಗಿ ವನ್ಯಜೀವಿ ಟ್ರಸ್ಟ್ ನಿಂದ 38 ಎಕರೆ ಜಮೀನು ಖರೀದಿ

ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಆನೆ ಕಾರಿಡಾರ್ ನಿರ್ಮಾಣಕ್ಕಾಗಿ ಭಾರತೀಯ ವನ್ಯಜೀವಿ ಟ್ರಸ್ಟ್ ರಾಜ್ಯ ಅರಣ್ಯ ಇಲಾಖೆ ಸಹಯೋಗದೊಡನೆ 38 ಎಕರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಆನೆ ಕಾರಿಡಾರ್ ನಿರ್ಮಾಣಕ್ಕಾಗಿ ಭಾರತೀಯ ವನ್ಯಜೀವಿ ಟ್ರಸ್ಟ್ ರಾಜ್ಯ ಅರಣ್ಯ ಇಲಾಖೆ ಸಹಯೋಗದೊಡನೆ 38 ಎಕರೆ ಜಮೀನು ಖರೀದಿಸಲು ಮುಂದಾಗಿದೆ.
ಮುದಹಳ್ಳಿ ಅರಣ್ಯದ ಆನೆ ಕಾರಿಡಾರ್ ವಿಸ್ತರಿಸಲು ಚಾಮರಾಜನಗರ-ತಲಾಮಲೈಭಾಗದಲ್ಲಿ ಜಮೀನು ಖರೀದಿಸಲು ನಿರ್ಧರಿಸಲಾಗಿದೆ. ಆನೆಗಳ ಓಡಾಟಕ್ಕಾಗಿ ಸುಮಾರು 1.5 ಕಿಮೀ ಕಾರಿಡಾರ್ ನಲ್ಲಿ 200-300 ಮಾಟರ್ ಅಗಲೀಕರಣ ಮಾಡಬೇಕಾಗಿದ್ದು, ಭೂ ಸ್ವಾಧೀನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕಾರಿಡಾರ್ ನಿಂದಾಗಿ ಸುಮಾರು 2000 ಆನೆಗಳಿಗೆ ವಾಸಸ್ಥಾನ ಕಲ್ಪಿಸಬಹುದಾಗಿದೆ.
ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ  ಈ ಪ್ರಾಧಿಕಾರವು ವನ್ಯಜೀವಿಗಳ ಚಲನೆ ಬಗ್ಗೆ ಅಧ್ಯಯನ ನಡೆಸಿದೆ.
ಈ ನಿರ್ಧಾರದಿಂದ ಸುಮಾರು 2000 ಆನೆಗಳಿಗೆ ಅನುಕೂಲವಾಗಲಿದೆ, ಆನೆಗಳ  ಓಡಾಟಕ್ಕೆ ಮುಕ್ತ ಜಾಗ ಕಲ್ಪಿಸುವುದಲ್ಲದೇ ಮಾನವ ಮತ್ತು ಪ್ರಾಣಿಗಳ ಸಂಘರ್ಷದಿಂದ ತೊಂದರೆ ಅನುಭವಿಸುವ ಸುಮಾರು 2 ಲಕ್ಷ ಕುಟುಂಬಗಳಿಗೆ ರಕ್ಷಣೆ ಸಿಗುತ್ತದೆ. 2005 ರಲ್ಲಿ ದೇಶಾದ್ಯಂತ 88 ಆನೆ ಕಾರಿಡಾರ್ ಗಳಿದ್ದವು ಎಂದು ವನ್ಯಜೀವಿ ಟ್ರಸ್ಟ್ ತಿಳಿಸಿತ್ತು.
ಭಾರತೀಯ ವನ್ಯಜೀವಿ ಟ್ರಸ್ಟ್ 2003 ರಲ್ಲಿ ಡೊಡ್ಡಸಂಪಿಗೆ ಬಳಿ 25.5 ಎಕರೆ ಜಮೀನು ಖರೀದಿಸಿ 2009 ರಲ್ಲಿ ವರ್ಗಾವಣೆ ಮಾಡಲಾಗಿತ್ತು.  ಆನೆ ಕಾರಿಡಾರ್ ಬಗ್ಗೆ ಸ್ಥಳೀಯ ಜನರಲ್ಲಿ ಅರಿವು ಮೂಡಿಸಲು ಶಾಲೆಗಳು ಮತ್ತು ಸಮುದಾಯ ಸಂಘಟನೆಗಳನ್ನು ಒಳಪಡಿಸಿಕೊಳ್ಳಲು ವನ್ಯಜೀವಿ ಟ್ರಸ್ಟ್ ಯೋಜಿಸಿದೆ. ಆರಣ್ಯ ಅವಲಂಬನೆ ಕಡಿಮೆ ಮಾಡುವಂತೆ ಅಲ್ಲಿನ ಜನರಿಗೆ ಶಿಕ್ಷಣ ನೀಡುವ ಅವಶ್ಯಕತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com