ಮಲ್ಲೇಶ್ವರಂ ಬಾಂಬ್ ಸ್ಫೋಟ ಸಂತ್ರಸ್ತೆ ಲಿಷಾಗೆ ಸರ್ಕಾರಿ ನೌಕರಿ

ಮಲ್ಲೇಶ್ವರಂ ಬಾಂಬ್‌ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿ. ಲಿಷಾಗೆ ಸಿ ದರ್ಜೆ ನೌಕರಿ ನೀಡಲು ರಾಜ್ಯ ಸರ್ಕಾರ ..
ಸಂತ್ರಸ್ತೆ ಲಿಷಾ
ಸಂತ್ರಸ್ತೆ ಲಿಷಾ
ಬೆಂಗಳೂರು: ಮಲ್ಲೇಶ್ವರಂ ಬಾಂಬ್‌ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿ. ಲಿಷಾಗೆ ಸಿ ದರ್ಜೆ ನೌಕರಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್‌ಸ್ಫೋಟದಲ್ಲಿ ಲಿಷಾ ಕಾಲಿಗೆ ಗಂಭೀರ ಗಾಯವಾಗಿತ್ತು. ಉದ್ಯೋಗ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಸರ್ಕಾರ ಅದನ್ನು ಪಾಲಿಸಿಲ್ಲ ಎಂದು ಆಕ್ಷೇಪಿಸಿ ಲಿಷಾ ಅವರು ಇತ್ತೀಚೆಗಷ್ಟೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
ಲಿಷಾಗೆ 17 ವರ್ಷವಾಗಿದ್ದಾಗ ಏಪ್ರಿಲ್ 2013 ರಂದು ಬಾಂಬ್ ದಾಳಿ ನಡೆದಿತ್ತು. ಟ್ಯೂಷನ್ ಗೆ ತೆರಳಿ ವಾಪಸ್ ಬರುವಾಗ ನಡೆದ ದಾಳಿಯಲ್ಲಿ ಲಿಷಾ ಗಾಯಗೊಂಡಿದ್ದಳು.
ಇನ್ನೂ ಅಪಘಾತದಲ್ಲಿ ಮೃತಪಟ್ಟಿದ್ದ ಲೋಕಾಯುಕ್ತ ಎಸ್‌ಪಿ ರವಿಕುಮಾರ್‌ ಅವರ ಪತ್ನಿಗೆ ಅನುಕಂಪದ ಆಧಾರದಲ್ಲಿ ಉಪ ನೋಂದಣಾಧಿಕಾರಿ ಹುದ್ದೆ ನೀಡಲು ಸರ್ಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com