ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯು ಇಂದಿಗೆ ನಿಗದಿಯಾಗಿತ್ತು. ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುವ ಮೊದಲು ಪ್ರಾದೇಶಿಕ ಆಯುಕ್ತ ಎನ್ ಜಯರಾಮ್ ಮಾತನಾಡಿ ಸರ್ಕಾರದ ಯಾವುದೇ ಕಾರ್ಯಕ್ರಮ ಪ್ರಾರಂಭಿಸುವಾಗ ನಾಡಗೀತೆ ಹಾಗೂ ಮುಕ್ತಾಯದ ವೇಳೆ ರಾಷ್ಟ್ರಗೀತೆ ನುಡಿಬೇಕು. ಈಗ ನಾಡಗೀತೆ ನುಡಿಸಲಾಗುವುದು ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಬೇಕು ಎಂದು ಸೂಚಿಸಿದರು.