ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳ ಸತ್ಯದರ್ಶನ: ಜೂ.27 ರಂದು ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ ಕಾರ್ಯಕ್ರಮ

2003 ರಿಂದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಅವರ ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ ಸಾವಿರ ಸಂಚಿಕೆಗಳ ನಂತರ ಅಂತ್ಯಗೊಳ್ಳುತ್ತಿದ್ದು...
ಡಾ.ಪಾವಗಡ ಪ್ರಕಾಶ್ ರಾವ್-ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ
ಡಾ.ಪಾವಗಡ ಪ್ರಕಾಶ್ ರಾವ್-ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ
ಬೆಂಗಳೂರು: 2003 ರಿಂದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ ಸಾವಿರದ ನೂರ ಹನ್ನೋಂದು (1,111) ಸಂಚಿಕೆಗಳ ನಂತರ ಅಂತ್ಯಗೊಂಡಿದ್ದು ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 
ಡಾ.ಪಾವಗಡ ಪ್ರಕಾಶ್ ರಾವ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಜೂ.27 ರಂದು ಮಂಗಳವಾರ ಸಂಜೆ 6:00 ರಿಂದ ರಾತ್ರಿ 8:00 ವರೆಗೆ  ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ್ ಕಾಲೇಜ್ ನ ಡಾ.ಪ್ರೇಮಚಂದ್ರ ಸಾಗರ ಆಡಿಟೋರಿಯಂ ನಲ್ಲಿ ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ ಸತ್ಯದರ್ಶನದ ವಿಶೇಶ ಕಾರ್ಯಕ್ರಮ ಇರಲಿದ್ದು, ಈ ಮೂಲಕ ಜನಪ್ರಿಯ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. 
ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎಂ.ಎನ್ ವೆಂಕಟಾಚಲಯ್ಯ, ರಂಗಭೂಮಿ ಕಲಾವಿದರಾಗಿರುವ ಮಾಸ್ಟರ್ ಹಿರಣ್ಣಯ್ಯ , ಹಿರಿಯ ಚಲನಚಿತ್ರ ಕಲಾವಿದರಾದ ಶಿವರಾಂ, ಚಲನಚಿತ್ರ ನಿರ್ದೇಶಕರು ಹಾಗೂ ರಂಗಭೂಮಿ ಕಲಾವಿದರಾದ ಚಿಂದೋಡಿ ಬಂಗಾರೇಶ್, ಹಿರಿಯ ಪತ್ರಕರ್ತರಾದ ಡಾ.ಬಾಬು ಕೃಷ್ಣಮೂರ್ತಿ, ಸರ್ ಎಂ ವಿಶ್ವೇಶ್ವರಯ್ಯ ಕೋ. ಬ್ಯಾಂಕ್ ನ ಅಧ್ಯಕ್ಷರಾದ ಕೆ.ಎನ್ ವೆಂಕಟನಾರಾಯಣ್, ಯೋಗ ಗುರುಗಳಾದ ಉಮಾಮಹೇಶ್ವರ್, ದಯಾನಂದ ಸಾಗರ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಹೇಮಚಂದ್ರ ಸಾಗರ್ ಸೇರಿದಂತೆ ಅನೇಕ ಗಣ್ಯರು ಅತಿಥಿಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ. 
ಕನ್ನಡಪ್ರಭ.ಕಾಂ ನ 'ರಾಮಾಯಣ ಅವಲೋಕನ' ಅಂಕಣಕಾರರೂ ಆಗಿರುವ ಡಾ.ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಡುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ  ಧರ್ಮ, ಧರ್ಮ ಗ್ರಂಥ, ಆಚರಣೆಗಳಿಗೆ ಸಂಬಂಧಿಸಿದಂತೆ ಜನರ ಸಂಶಯಗಳ ನಿವಾರಣೆಗೆ, ಅಪಾರ ಜನಪ್ರಿಯತೆ ಗಳಿಸಿದ್ದ, ಜಿಜ್ಞಾಸುಗಳ ನೆಚ್ಚಿನ ಕಾರ್ಯಕ್ರಮವಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com